More

    ಉಳಿತಾಯ ಬಜೆಟ್ ಮಂಡನೆ

    ಬೋರಗಾಂವ: ಸ್ಥಳೀಯ ಪಪಂನ 2020-21ನೇ ಸಾಲಿನ ಬಟೆಟ್‌ಗೆ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ಪಿ.ಬಿ.ದೇವಮಾನೆ ತಿಳಿಸಿದ್ದಾರೆ.

    ಪಪಂನ ಒಟ್ಟು ಆದಾಯದ ಮೂಲಗಳಾದ ರಾಜಸ್ವ ಆದಾಯ ಮೂಲದಿಂದ 03,31,23,300, ರಾಜಸ್ವ ವೆಚ್ಚ-01,83,87,387, ಬಂಡವಾಳ ಆದಾಯ-8,32,24,000, ಬಂಡವಾಳ ವೆಚ್ಚ 9,79,26,000 ತೋರಿಸಲಾಗಿದೆ. ವಿಶೇಷ ವಸೂಲಾತಿ 2,32,54,446, ವಿಶೇಷ ಪಾವತಿ 2,32,54,446 ತೋರಿಸಲಾಗಿದೆ. ಆರಂಭದ ಶುಲ್ಕದಲ್ಲಿ 13,96,01,746 ಜಮೆಯಾಗಿದ್ದು,13,95,67,833 ಖರ್ಚುವಾಗಿದೆ.

    ಒಟ್ಟು ಉಳಿತಾಯ 33913 ಇರುತ್ತದೆ. ನಿಪ್ಪಾಣಿ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಬಜೆಟ್‌ಗೆ ಒಪ್ಪಿಗೆ ನಿಡಿದ್ದು, ಉಪತಹಸೀಲ್ದಾರ್ ಪ್ರವೀಣ ಕಾರಂಡೆ, ಪಪಂ ದ್ವಿತೀಯ ದರ್ಜೆ ಸಹಾಯಕ ಪೋಪಟ ಕುರಳೆ, ಸುಭಾಷ ಗಜರೆ, ಲೆಕ್ಕಪತ್ರ ವಿಭಾಗದ ಗಜಾಲಾ ಜಮಾಲಾ ಇತರರು ಇದ್ದರು.

    ಬಜೆಟ್‌ನ ಅಂದಾಜು ಪತ್ರಿಕೆಯಲ್ಲಿ ಸಿಬ್ಬಂದಿ ವೇತನ, ಚುನಾಯಿತ ಮಂಡಳಿಯ ಗೌರವ ಧನ, ಬೀದಿ ದಿಪ ನಿರ್ವಹಣೆ, ಘನ ತಾಜ್ಯ ವಿಲೇವಾರಿ, ಕಟ್ಟಡ ನಿರ್ವಹಣೆ, ಉದ್ಯಾನವನ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿಗಾಗಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts