More

    ಸಾವರ್ಕರ್ ಫ್ಲೆಕ್ಸ್ ಸಂಘರ್ಷ ಮುಂದುವರಿಕೆ: ಅಲ್ಪಸಂಖ್ಯಾತ ಮುಖಂಡ ಹಾಕಿದ್ದ ಫ್ಲೆಕ್ಸ್ ತೆರವು..

    ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಶಿವವೊಗ್ಗದ ಮಾಲ್​ವೊಂದರಲ್ಲಿ ಆರಂಭವಾದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಕುರಿತ ಫ್ಲೆಕ್ಸ್​ ಸಂಘರ್ಷ ಇನ್ನೂ ಮುಂದುವರಿದಿದ್ದು, ರಾಜ್ಯದಲ್ಲಿ ಅಲ್ಲಲ್ಲಿ ಫ್ಲೆಕ್ಸ್ ಹಾಕುವುದು ತೆರವುಗೊಳಿಸುವುದು ನಡೆದಿದೆ.

    ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್​ನಲ್ಲಿ ಆ.13ರಂದು ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ಹಾಕಿದ್ದಕ್ಕೆ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

    ತುಮಕೂರಿನ ಎಂಪ್ರೆಸ್ ಕಾಲೇಜು ಮುಂಭಾಗ ಹಾಕಲಾಗಿದ್ದ ಫ್ಲೆಕ್ಸ್​ನಲ್ಲಿದ್ದ ವೀರ ಸಾವರ್ಕರ್ ಭಾವಚಿತ್ರವನ್ನು ಆ. 16ರಂದು ಕಿಡಿಗೇಡಿಗಳು ಹರಿದು ಹಾಕಿದ್ದರು. ಇದಕ್ಕೆ ಸೆಡ್ಡು ಹೊಡೆದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಆ. 17ರಂದು ತುಮಕೂರಿನ ಟೌನ್​ಹಾಲ್​ ಸರ್ಕಲ್​ನಲ್ಲಿರುವ ಗಣಪತಿ ದೇವಸ್ಥಾನದ ಎದುರು ಸಾರ್ವಕರ್​ ಫ್ಲೆಕ್ಸ್ ಅಳವಡಿಸಿದ್ದರು.

    ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸಾವರ್ಕರ್​ ಫ್ಲೆಕ್ಸ್ ಸಂಘರ್ಷ ಮುಂದುವರಿದಿದೆ. ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಫಝಲ್ ಅಸೈಗೋಳಿ ಹೆಸರಿನಲ್ಲಿ ಇಲ್ಲಿನ ಉಳ್ಳಾಲ, ದೇರಳಕಟ್ಟೆಯಲ್ಲಿ ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಬ್ಯಾನರ್ ಹಾಕಲು ಕೊಣಾಜೆ, ಬೆಳ್ಮ ಗ್ರಾಮ ಪಂಚಾಯತ್​ನಿಂದ ಫಜಲ್ ಅನುಮತಿ ಪಡೆದಿದ್ದು, ಸೆ.3ರ ವರೆಗೆ ಫ್ಲೆಕ್ಸ್ ಹಾಕುವುದಕ್ಕೆ ಸ್ಥಳೀಯಾಡಳಿತ ಅನುಮತಿಯನ್ನೂ ನೀಡಿತ್ತು. ಆದರೆ ಇದೀಗ ಸ್ಥಳೀಯಾಡಳಿತವೇ ಆ ಫ್ಲೆಕ್ಸ್ ತೆರವುಗೊಳಿಸಿದೆ.

    ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ಎಸ್​ಡಿಪಿಐ ಕಾರ್ಯಕರ್ತರ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts