More

    ವಾಲ್ಮೀಕಿ ಜಯಂತಿ ಯಶಸ್ಸಿಗೆ ಕೈಜೋಡಿಸಿ

    ಸವಣೂರ: ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಅ. 28ರಂದು ಏರ್ಪಡಿಸಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿದ್ದು, ಸಮಾರಂಭದ ಯಶಸ್ಸಿಗೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಗಣೇಶ ಸವಣೂರ ಹೇಳಿದರು.
    ಪಟ್ಟಣದ ಕಂದಾಯ ಇಲಾಖೆ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದ ಕಳೆದ ಮೂರು ವರ್ಷಗಳಿಂದ ಅದ್ದೂರಿ ಆಚರಣೆ ಕಂಡು ಬಂದಿಲ್ಲ. ಪ್ರಸಕ್ತ ವರ್ಷದ ಆಚರಣೆಯನ್ನು ಸಮಾಜ ಭಾಂದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಬೆಳಗ್ಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿರಬೇಕು. ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಿ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಿರೇಮನಿ, ಪಿಎಸ್‌ಐ ಎಸ್.ಕೆ. ಪೊಲೀಸ್‌ಗೌಡ್ರ, ಅಬಕಾರಿ ನಿರೀಕ್ಷಕ ಮಹೇಶಗೌಡ ಪಾಟೀಲ, ಶಿಕ್ಷಣ ಇಲಾಖೆ ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ, ವಾಲ್ಮೀಕಿ ಸಮಾಜದ ತಾಲೂಕು ಘಟಕ ಅಧ್ಯಕ್ಷ ಪಕೀರಪ್ಪ ವಾಲ್ಮೀಕಿ, ನಾಗಪ್ಪ ತಿಪ್ಪಕ್ಕನವರ, ಶ್ರೀಧರ ದೊಡ್ಡಮನಿ, ಸುರೇಶ ತಳವಾರ, ಪ್ರಕಾಶ ಬಾರ್ಕಿ, ಮಾಲತೇಶ ಹೊಳೆಮ್ಮನವರ, ಫಕೀರಪ್ಪ ಹರಿಜನ, ಪ್ರವೀಣ ಬಾಲೇಹೊಸೂರ, ನಾಗರಾಜ ವಾಲ್ಮೀಕಿ, ಯಲ್ಲಪ್ಪ ದೇವಗೇರಿ, ಚಂದ್ರಶೇಖರ ವಾಲ್ಮೀಕಿ, ಅಶೋಕ ಮನ್ನಂಗಿ, ಫಕೀರೇಶ ತಳವಾರ, ಆನಂದಪ್ಪ ಮರಳಿಹಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts