More

    ಮಕ್ಕಳು ಆರೋಗ್ಯವಾಗಿದ್ದರೆ ಸುಭದ್ರ ದೇಶ ನಿರ್ಮಾಣ ಸಾಧ್ಯ

    ಸವಣೂರ: ದೇಶದ ಭವಿಷ್ಯ ಮಕ್ಕಳಲ್ಲಿ ಅಡಗಿದೆ. ಅವರು ಆರೋಗ್ಯದಿಂದ ಇದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
    ಕೇಂದ್ರ ಸಂವಹನ ಇಲಾಖೆ ಧಾರವಾಡ, ತಾಲೂಕ ಆಡಳಿತ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪೋಷಣ ಮಾಸ- 2023, ಕೇಂದ್ರ ಸರ್ಕಾರದ 9 ವರ್ಷಗಳ ಸೇವೆ, ಸುಶಾಸನ್, ಗರೀಬ್ ಕಲ್ಯಾಣ ಯೋಜನೆ, ಏಕ ಭಾರತ ಶ್ರೇಷ್ಠ ಭಾರತ ಹಾಗೂ ಪ್ರಧಾನ ಮಂತ್ರಿಯವರ ದೂರದರ್ಶಿತ್ವ-2047 ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ತಾಯಿಯ ಎದೆಯ ಹಾಲು ಮಗುವಿಗೆ ಅಮೃತವಿದ್ದಂತೆ. ತಾಯಂದಿರು ತಪ್ಪದೇ ಮಕ್ಕಳಿಗೆ ಎದೆ ಹಾಲು ಕುಡಿಸಬೇಕು. ಜತೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿದರೆ ಮಗು ಸದೃಢವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದರು.
    ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅತಿ ಹೆಚ್ಚು ಮನೆಗಳನ್ನು ನೀಡಿದ್ದಾರೆ. ಕಳೆದ ವರ್ಷ ತಾಂತ್ರಿಕ ದೋಷದಿಂದ ಆಗಿರಲಿಲ್ಲ. ಅದನ್ನು ಸರಿಪಡಿಸಿದ ನಂತರ 16 ಲಕ್ಷ ಮನೆಗಳನ್ನು ನೀಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ತಮ್ಮ ಪಾಲನ್ನು ನೀಡಬೇಕು ಎಂದರು.
    ಧಾರವಾಡ ಕೇಂದ್ರ ಸಂವಹನ ಇಲಾಖೆ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್.ಟಿ. ಮಾತನಾಡಿ, ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಆರೋಗ್ಯದ ಜತೆಗೆ ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕು ಎಂದರು.
    ಸಿಡಿಪಿಒ ಉಮಾ ಕೆ.ಎಸ್., ಟಿಎಚ್‌ಒ ಡಾ. ಚಂದ್ರಕಲಾ ಜೆ., ಉಪನ್ಯಾಸ ನೀಡಿದರು. ಉಪವಿಭಾಗಾಧಿಕಾರಿ ಮಹಮ್ಮದ ಖಿಜರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದಾರ್ತಿ, ತಹಸೀಲ್ದಾರ್ ಗಣೇಶ ಸವಣೂರ, ರೇಣುಕಾ ದೇಸಾಯಿ, ಬಿಇಒ ಎಂ.ಎಫ್. ಬಾರ್ಕಿ ಇದ್ದರು. ಬಿಆರ್‌ಪಿ ಡಿ.ಆರ್. ತೋಟಿಗೇರ, ಕೇಂದ್ರ ಸಂವಹನ ಇಲಾಖೆ ಎಫ್‌ಪಿಎ ಮುರಳೀಧರ ಕಾರಬಾರಿ ಕಾರ್ಯಕ್ರಮ ನಿರ್ವಹಿಸಿದರು. ಗರ್ಭೀಣಿಯರಿಗೆ ಸಿಮಂತ ಕಾರ್ಯಕ್ರಮ, 6 ತಿಂಗಳ ಮಕ್ಕಳಿಗೆ ಅನ್ನಪ್ರಾಶನ, ಪೌಷ್ಠಿಕ ಆಹಾರ ಹಾಗೂ ಆಹಾರ ಪದ್ದತಿ ಛಾಯಾ ಚಿತ್ರ ಪ್ರದರ್ಶನ ಜರುಗಿತು.
    ಬಹುಮಾನ: ಪೋಷಣ ಮಾಸ-2023 ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಂಗೋಲಿ: ರೇವತಿ ಸಾತಪತಿ ಪ್ರಥಮ, ಶಶಿಕಲಾ ಹಿರೇಮಠ ದ್ವಿತೀಯ, ಮಂಜುಳಾ ಬಂಕಾಪೂರ ತೃತೀಯ. ಹಿಂದಿ ಭಾಷೆ ಪ್ರಬಂಧ: ಚೈತ್ರಾ ರಡ್ಡೆರ ಪ್ರಥಮ, ಬೀಬಿ ಜಿಲೇಖಾ ದ್ವಿತೀಯ, ಮಾದುರಿ ಸುಲಾಖೆ ತೃತೀಯ. ಆರೋಗ್ಯವಂತ ಮಗು: ಅವನಿ ಗಿತ್ತೆ ಪ್ರಥಮ, ಆರ್ಯನ್ ಪಾಟೀಲ ದ್ವಿತೀಯ, ಋತ್ವಿಕ್ ಮಠಪತಿ ತೃತೀಯ ಬಹುಮಾ,ನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts