More

    ಸವಳಂಗ ರಸ್ತೆ ಮೇಲ್ಸೇತುವೆ ಅವ್ಯವಸ್ಥೆ; ಕಾನೂನು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

    ಶಿವಮೊಗ್ಗ: ಸವಳಂಗ ರಸ್ತೆಯ ಮೇಲ್ಸೇತುವೆ ಕಾಮಗಾರಿ ಅವ್ಯವಸ್ಥೆಯಿಂದ ಸಾರ್ವಜನಿಕರ ಜೀವ ಮತ್ತು ಜೀವನಕ್ಕೆ ತೊಂದರೆ ಎದುರಾಗುತ್ತಿದೆ ಎಂದು ಆರೋಪಿಸಿ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿ 2022ರ ೆ.8ರಂದು ಪ್ರಾರಂಭವಾಗಿತ್ತು. ಇದೇ ಸಂದರ್ಭದಲ್ಲಿಯೇ ಕಾಶಿಪುರ ರೈಲ್ವೆ ಗೇಟ್ ಮತ್ತು ವಿದ್ಯಾನಗರ ರೈಲ್ವೆ ಗೇಟ್ ಬಳಿಯೂ ಕಾಮಗಾರಿ ಆರಂಭವಾಗಿತ್ತು. ಆದರೆ ಅವೆರಡೂ ಮೇಲ್ಸೇತುವೆಗಳಿಗೆ ಹೋಲಿಸಿದರೆ ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದು ಕೆಲವರ ಜೀವಕ್ಕೂ ಎರವಾಗುತ್ತಿದೆ ಎಂದು ದೂರಿದರು.
    ಮಂದಗತಿ ಕಾಮಗಾರಿಯಿಂದ ಅನೇಕ ಅನಾನುಕೂಲಗಳು ಸೃಷ್ಟಿಯಾಗಿವೆ. ವಾಹನ ಸಂಚಾರಕ್ಕೆ ಬದಲಿ ರಸ್ತೆ ಗುರುತಿಸಿಲ್ಲ. ಇದರಿಂದ ರೈಲ್ವೆ ಗೇಟ್ ಹಾಕಿದ ಸಂದರ್ಭದಲ್ಲಿ ಗಂಟೆಗಟ್ಟಲೇ ವಾಹನ ದಟ್ಟಣೆ ಉಂಟಾಗುತ್ತಿದೆ. ಈಗಾಗಲೇ ಬೃಹತ್ ಗುಂಡಿಗಳನ್ನು ತೋಡಲಾಗಿರುವುದರಿಂದ ಸೂಚನಾ ಲಕಗಳು ಕಣ್ಮರೆಯಾಗಿವೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಉಡಾೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಧೂಳು ಹೆಚ್ಚಾಗುವ ಕಾರಣ ಸ್ಥಳೀಯರಲ್ಲಿ ಆರೋಗ್ಯ ಸಮಸ್ಯೆಗೂ ಹೆಚ್ಚಾಗುತ್ತಿದೆ. ರಸ್ತೆ ಬೀದಿ ದೀಪಗಳಿಲ್ಲ. ಇದರಿಂದ ಅಪಘಾತ, ಕಳ್ಳತನ, ಗುಂಡಿಗಳಿಗೆ ದನ-ಕರುಗಳು ಬೀಳುವುದು ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿವೆ. ರೈಲ್ವೆ ಗೇಟ್ ಹಾಕಿದಾಗ ಆ್ಯಂಬುಲೆನ್ಸ್‌ಗಳು ಬಂದರೆ ವಾಹನ ದಟ್ಟಣೆ ನಡುವೆ ರೈಲ್ವೆ ಹಳಿ ದಾಟಲು ದೀರ್ಘಾವಧಿ ಸಮಯ ಹಿಡಿಯುತ್ತಿದೆ. ಆ್ಯಂಬುಲೆನ್ಸ್ ಸಂಚಾರಕ್ಕೆ ಯಾವುದೇ ಪರ್ಯಾಯ ಮಾರ್ಗ ಕಲ್ಪಿಸಲಾಗಿಲ್ಲ. ಈ ಸಮಸ್ಯೆಯಿಂದ ೆ.14ರಂದು ರಾತ್ರಿ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಆರ್.ಜಗದೀಶ್ ಅವರಿಗೆ ಹೃದಯಾಘಾತ ಆದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಲು ವಿಳಂಬ ಆಯಿತೆಂದು ಆಕ್ರೋಶ ವ್ಯಕ್ತಪಡಿಸಿದರು.
    ಅಂದು ಪ್ರೊ. ಜಗದೀಶ್ ಅವರನ್ನು ಕರೆತರುವಾಗ ಸವಳಂಗ ರಸ್ತೆಯ ರೈಲ್ವೆ ಗೇಟ್ ಬಳಿ ವಾಹನ ದಟ್ಟಣೆ ನಡುವೆ ಸುಮಾರು 25 ನಿಮಿಷ ಸಿಲುಕಿಕೊಂಡಿದ್ದರು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದ ಕಾರಣ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಈ ರೀತಿಯ ಅವಘಡಗಳು ಸಂಭವಿಸಬಾರದೆಂಬ ದೃಷ್ಟಿಯಿಂದ ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸಬೇಕು. ದಕ್ಷರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
    ವೇದಿಕೆ ಅಧ್ಯಕ್ಷೆ ಸ್ಮಿನ್ನು, ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ಶರತ್ ಮಳವಳ್ಳಿ, ದರ್ಶನ್, ತೇಜುಕುಮಾರ್, ಅರುಣ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು. ಅದಕ್ಕೂ ಮುನ್ನ ನಗರದ ವಿವಿಧ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts