More

    ದೀದಿಗೆ ಕೈ ಕೊಡಲು ಸಿದ್ಧರಾಗಿದ್ದಾರಂತೆ ಅವರ ಬಲಗೈ ಬಂಟ; ಅಮಿತ್​ ಷಾ ಕಾಲಿಟ್ಟ ನೆಲದಲ್ಲಿ ಭಾರಿ ಸಂಚಲನ

    ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ರಾಜಕೀಯ ಮಾಂತ್ರಿಕ ಎಂದು ಹಲವರು ಕರೆಯುತ್ತಾರೆ. ಬಿಜೆಪಿಗೆ ಅಡಿಪಾಯವೇ ಇಲ್ಲದ ರಾಜ್ಯಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿ ಅವರಲ್ಲಿದೆ ಎನ್ನುವ ಮಾತು ಕೇಳಿಬರುತ್ತಿರುತ್ತದೆ. ಮುಂದಿನ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇತ್ತೀಚೆಗೆ ಅಲ್ಲಿಗೂ ಅಮಿತ್​ ಷಾ ಪ್ರವಾಸ ನಡೆಸಿ ಬಂದಿದ್ದಾರೆ. ಅಮಿತ್​ ಷಾ ರಾಜ್ಯಕ್ಕೆ ಕಾಲಿಟ್ಟ ಕೆಲವೇ ದಿನದಲ್ಲಿ ಅಲ್ಲಿನ ಬಿಜೆಪಿ ನಾಯಕರ ಬಾಯಲ್ಲಿ ಕೆಲವು ಸ್ಫೋಟಕ ವಿಚಾರಗಳು ಹೊರಬಿದ್ದಿವೆ.

    ಇದನ್ನೂ ಓದಿ: ಹಿಂದುಳಿದವರ ಆಶಾಕಿರಣ ಕೆಂಗಲ್ ಹನುಮಂತಯ್ಯ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಭಿಮತ

    ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಂತಿರುವ ಸಚಿವ ಸೌಗತ​ ರಾಯ್​ ಟಿಎಂಸಿಯನ್ನು ತೊರೆದು ಬಿಜೆಪಿ ಸೇರಲು ಸಿದ್ಧರಿದ್ದಾರಂತೆ. ಅವರಷ್ಟೇ ಅಲ್ಲ, ಅವರೊಂದಿಗೆ ನಾಲ್ವರು ಸಂಸದರೂ ಬಿಜೆಪಿ ಸೇರಲು ಸಿದ್ಧರಾಗಿದ್ದಾರಂತೆ. ಹೀಗೆಂದು ಹೇಳಿರುವುದು ರಾಜ್ಯದ ಬಿಜೆಪಿ ಸಂಸದ ಅರ್ಜುನ್​ ಸಿಂಗ್​.

    ಸೌಗತ ಅವರು ಕ್ಯಾಮೆರಾ ಎದುರು ಮಾತ್ರ ಟಿಎಂಸಿ ನಾಯಕರಾಗಿರುತ್ತಾರೆ. ಒಮ್ಮೆ ಕ್ಯಾಮೆರಾ ತೆಗೆದು ನೋಡಿದರೆ ಅವರು ಬಿಜೆಪಿಯವರಾಗುತ್ತಾರೆ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಲು ಮುಖ್ಯ ಕಾರಣ ಸೌಗತ​ ಅವರು. ಇದೀಗ ಅವರೇ ಟಿಎಂಸಿ ತೊರೆಯಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಪ್ರವಾಸಿ ಕ್ಷೇತ್ರಗಳ ಪುನಶ್ಚೇತನಕ್ಕೆ ಆದ್ಯತೆ ; ಉಮಾಮಹದೇವನ್ ಹೇಳಿಕೆ

    ಮುಂದಿನ ಚುನಾವಣೆಯಲ್ಲಿ ಸೌಗತ​ ಅವರು ಬಿಜೆಪಿಯ ಪರವಾಗಿರುತ್ತಾರೆ. ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರ ಆಡಳಿತ ಅಂತ್ಯವಾಗಿ ಬಿಜೆಪಿ ಸರ್ಕಾರ ಅಡಳಿತಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಯೋಗಿ ಸರ್ಕಾರದಲ್ಲಿ ಲವ್​ ಜಿಹಾದ್​ ಬಗ್ಗೆ ಮಸೂದೆ ಸಿದ್ಧವಾಗುತ್ತಿಲ್ಲ; ಹಾಗಾದರೆ ಇಷ್ಟು ದಿನ ಹೇಳಿದ್ದು ಸುಳ್ಳಾ?

    ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts