More

    ಭಾರತೀಯರಿಗಾಗಿ ಮಿಡಿದ ಸೌದಿ ಕಂಪನಿ; 9 ವಿಮಾನಗಳಲ್ಲಿ ಸ್ವದೇಶಕ್ಕೆ ರವಾನೆ

    ನವದೆಹಲಿ: ಕೋವಿಡ್​ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತವಾಗಿದೆ. ಇದೇ ಕಾರಣಕ್ಕಾಗಿ ಸಾವಿರಾರು ವಿದೇಶಿಗರು ತಮ್ಮ ದೇಶಕ್ಕೆ ತೆರಳಲಾಗದೇ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಸೌದಿ ಅರೇಬಿಯಾದ ಕಂಪನಿಯೊಂದು ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದಿದೆ.

    ಸೌದಿ ಅರೇಬಿಯಾದ ದಮ್ಮಂ ವಿಮಾನ ನಿಲ್ದಾಣದಿಂದ ಆರು ವಿಮಾನಗಳು ಮಂಗಳೂರು, ಚೆನ್ನೈ, ಕೊಚ್ಚಿ, ಹೈದರಾಬಾದ್​, ದೆಹಲಿ, ಅಹಮದಾಬಾದ್​ಗೆ ಆಗಮಿಸಿವೆ. ಜೂನ್​ 11ರವರೆಗೂ ಇದು ಮುಂದುವರಿಯಲಿದ್ದು, ಇನ್ನೂ 3 ವಿಮಾನಗಳು ಭಾರತೀಯರನ್ನು ಕರೆತರಲಿವೆ. ಈ ವಿಮಾನಗಳಲ್ಲಿ 1,600ಕ್ಕೂ ಅಧಿಕ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದಾರೆ. ಈ ಪೈಕಿ ಮಂಗಳೂರು ಹಾಗೂ ಕೊಚ್ಚಿಗೆ ತಲಾ ಎರಡು ವಿಮಾನಗಳಲ್ಲಿ ಭಾರತೀಯರು ಮರಳಿದ್ದಾರೆ.

    ಇದನ್ನೂ ಓದಿ; ಹುಟ್ಟುಹಬ್ಬದಂದೇ ಕರೊನಾಗೆ ಬಲಿಯಾದ ಶಾಸಕ; ಜನಪ್ರತಿನಿಧಿ ಸಾವಿನ ಮೊದಲ ಪ್ರಕರಣ

    ಇದಲ್ಲದೇ, ಬೇರೆ ದೇಶಗಳಿಗೆ ತೆರಳುವ ತನ್ನ ಉದ್ಯೋಗಿಗಳಿಗೂ ಇನ್ನೂ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಆ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಖಾಸಗಿ ಕಂಪನಿಯೊಂದು ನಡೆಸಿದ ಅತಿದೊಡ್ಡ ಮಹಾ ಮರುವಲಸೆ ಇದಾಗಿದೆ ಎಂದು ಎಕ್ಸ್​ಪರ್ಟೈಸ್​ ಕಾಂಟ್ರಾಕ್ಟಿಂಗ್​ ಕಂಪನಿ ತಿಳಿಸಿದೆ.

    ಸೌದಿಯಲ್ಲಿ ತೈಲೋತ್ಪನ್ನ ಹಾಗೂ ಭಾರಿ ಸಲಕರಣೆಗಳ ಕ್ಷೇತ್ರದಲ್ಲಿ ಕಂಪನಿ ಕೆಲಸ ಮಾಡುತ್ತಿದೆ. ಗಲ್ಫ್​ನಲ್ಲಿ 10,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಹೆಚ್ಚಿನವರು ಸೌದಿಯ ಜುಬೈಲ್​ನಲ್ಲಿ ನೆಲೆಸಿದ್ದಾರೆ. ಈ ಪೈಕಿ 2,000 ಉದ್ಯೋಗಿಗಳನ್ನು ಅವರವರ ದೇಶಕ್ಕೆ ಕಳುಹಿಸಲಾಗಿದೆ. ಇವರಲ್ಲಿ 1,665 ಜನ ಭಾರತೀಯರಾಗಿದ್ದಾರೆ ಎಂದು ಕಂಪನಿಯ ನಿರ್ದೇಶಕ ಕೆ.ಎಸ್​. ಶೇಖ್​ ಹೇಳಿದ್ದಾರೆ.

    ಇದನ್ನೂ ಓದಿ; ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….! 

    ವೈದ್ಯಕೀಯ ನೆರವು ಅಗತ್ಯವಿದ್ದವರು, ಅನಾರೋಗ್ಯದಿಂದ ಬಳಲುತ್ತಿದ್ದವರು, 50 ವರ್ಷಕ್ಕಿಂತ ಮೇಲ್ಪಟ್ಟವರನ್ನು ಆದ್ಯತೆ ಮೇರೆಗೆ ಕಳುಹಿಸಲಾಗಿದೆ. ಕೋವಿಡ್​ ಸಂಕಷ್ಟ ಮುಗಿದ ಮೇಲೆ ಅವರನ್ನು ಪ್ರಯಾಣದ ವೆಚ್ಚ ಭರಿಸಿ ವಾಪಸ್​ ಉದ್ಯೋಗಕ್ಕೆ ಕರೆಯಿಸಿಕೊಲ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ನಾವಷ್ಟೇ ಅಲ್ಲ, ಅಂಡಾಣು ಕೂಡ ಹುಡುಕುತ್ತೆ ಸಂಗಾತಿ, ಗರ್ಭಾಶಯದಲ್ಲೂ ನಡೆಯುತ್ತೆ ಪರಸಂಗ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts