More

    ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ?

    ಮುಂಬೈ: ಇದು ರಂಜಾನ್ ತಿಂಗಳು. ಮುಸ್ಲಿಂಮರಿಗೆ ತುಂಬಾ ಪವಿತ್ರವಾದ ತಿಂಗಳು. ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಈ ತಿಂಗಳನ್ನು ಮುಸ್ಲಿಂಮರು ಅದ್ಧೂರಿಯಾಗಿ ಆಚರಿಸುತ್ತಾರೆ. ಅವರ ಸ್ನೇಹಿತರ ಹಾಗೂ ಬಂಧುಗಳ ಮನೆಗೆಳಿಗೆ ತೆರಳಿ ಹಲವು ಔತಣಕೂಟಗಳಲ್ಲಿ ಭಾಗಿಯಾಗುತ್ತಾರೆ. ಹಾಗೆಯೇ, ಸದ್ಯ ಬಾಲಿವುಡ್​ನ ಮೂವ್ವರು ಖಾನ್ ದಿಗ್ಗಜರು ಒಂದು ಕಡೆ ಸೇರಿದ್ದಾರೆ. ಹೌದು, ನಟ ಶಾರುಖ್ ಅವರು ಮುಂಬೈನ ನಿವಾಸ ಮನ್ನತ್​ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ನಟ ಶಾರುಖ್ ಖಾನ್ ಅವರ ಈ ಪಾರ್ಟಿಯಲ್ಲಿ ನಟ ಸಲ್ಮಾನ್ ಖಾನ್, ನಟ ಸೈಫ್ ಅಲಿ ಖಾನ್ ಕೂಡಾ ಭಾಗಿಯಾಗಿದ್ದಾರೆ. ಇನ್ನು, ಇಲ್ಲಿ ಗಮನಿಸುವ ವಿಷವೆಂದರೆ ಅದು ನಟ ಅಕ್ಷಯ್ ಕುಮಾರ್ ಅವರು ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದು.

    ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ?

    ಹೀಗಿದ್ದರೂ, ಸದ್ಯ ಈ ಪಾರ್ಟಿಯಲ್ಲಿ ಸೌದಿ ಸಚಿವ ಹಾಗೂ ರೆಡ್ ಸೀ ಫಿಲ್ಮ್ ಫೆಸ್ಟಿವಲ್ ಅಧ್ಯಕ್ಷ ಆಗಿರುವ ಮೊಹಮ್ಮದ್ ಅಲ್ ಟರ್ಕಿ ಅವರು ಭಾಗಿಯಾಗಿದ್ದು ಮಾತ್ರ ಎಲ್ಲರ ಗಮನವನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಇನ್ನು, ಈ ನಾಲ್ಕು ನಟರ ಜತೆಗೆ ಸೌದಿ ಸಚಿವ ಮೊಹಮ್ಮದ್ ಅಲ್ ಟರ್ಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಸೌದಿ ಸಚಿವ ಭಾಗಿಯಾಗಿದ್ದರು ಎಂದ ತಕ್ಷಣ ಯಾವ ಉದ್ದೇಶಕ್ಕೆ ಈ ಸಮ್ಮಿಲನ ಆಗಿದೆ?’ ಎಂಬ ಪ್ರಶ್ನೆ ನಟರ ಅಭಿಮಾನಿಗಳನ್ನು ಹಾಗೂ ದೇಶದ ಜನತೆಯನ್ನು ಕಾಡುತ್ತಿದೆ. ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಟರ್ಕಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಪೋಸ್ಟ್​ಗೆ ಭಾರತದಲ್ಲಿರುವ ನನ್ನ ಸಹೋದರ ಶಾರುಖ್ ಅವರಿಂದ ರಂಜಾನ್ ಹಬ್ಬದ ಶುಭಾಶಯಗಳು ಸಿಕ್ಕಿವೆ”, ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ

    ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ?

    ಇನ್ನು, ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಬೇದರ್ ಬಿನ್ ಫರ್ಹಾನ್​ ಅಲ್​ಸೌದ್​ ಜೊತೆ ಕೂಡಾ ಬಾಲಿವುಡ್ ನಟರು ಕಾಲ ಕಳೆದಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಫರ್ಹಾನ್ ಅಲ್ ಸೌದ್ ಅವರು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇವರ ಫೋಟೋಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಬೇದರ್ ಬಿನ್ ಫರ್ಹಾನ್​ ಅಲ್​ಸೌದ್ ಅವರು ಬಾಲಿವುಡ್ ಸೂಪರ್ ಸ್ಟಾರ್​ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಜೊತೆ ಸಿನಿಮಾ ಜಗತ್ತಿನ ಸುಂದರ ವಿಷಯಗಳ ಬಗ್ಗೆ ಸಂವಾದ ಮಾಡಿದ್ದಕ್ಕೆ ಖುಷಿ ಆಯಿತು”, ಎಂದಿದ್ದಾರೆ

    ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ?

    ಈ ಮೂಲಕ ಇದೊಂದು ಸಹಜವಾದ ಭೇಟಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ, ಕೆಲವರು ಮಾತ್ರ ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಬೇದರ್ ಬಿನ್ ಫರ್ಹಾನ್​ ಅಲ್​ಸೌದ್ ಔತಣಕೂಟದಲ್ಲಿ ಭಾಗವಹಿಸಿದ್ದರಿಂದ ಇದು ಬಹುಶಃ ಮುಂದೆ 2022 ರಲ್ಲಿ ಡಿಸೆಂಬರ್ 1 ರಿಂದ 10 ರವರೆಗೆ ನಡೆಯಲಿರುವ ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕುರಿತು ಆಗಿರಬಹುದು ಎಂದು ಊಹಿಸುತ್ತಿದ್ದಾರೆ. ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಳೆದ ಬಾರಿ 67 ದೇಶಗಳಲ್ಲಿನ 34 ಭಾಷೆಗಳ 138 ಸಿನಿಮಾಗಳನ್ನು ಪ್ರದರ್ಶನ ಮಾಡಲಾಗಿತ್ತು

    ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ? ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ? ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ?

    ಬ್ರಾಲೆಟ್ ಧರಿಸಿದ ಸಮಂತಾ; ನಿನ್ನ ಡ್ರೆಸ್ಸಿಂಗ್ ಓವರ್ ಆಗುತ್ತಿದೆ ಎಂದ ನೆಟ್ಟಿಗರು!

    ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 2022 ರಲ್ಲಿ ಮದುವೆಯಾಗಲಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts