More

    ರೈತರ ಹೋರಾಟ ಬೆಂಬಲಿಸಿ ಉಪವಾಸ ಸತ್ಯಾಗ್ರಹ

    ಹಾನಗಲ್ಲ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಬೆಂಬಲಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು.

    ಮಾಜಿ ಸಚಿವ ಮನೋಹರ ತಹಸೀಲ್ದಾರ್ ಮಾತನಾಡಿ, ದೇಶದಲ್ಲಿ ಸುಮಾರು 65 ಕೋಟಿ ರೈತರಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಅವರ ಬದುಕಿನ ಮೇಲೆ ಬರೆ ಎಳೆಯುವ ಕಾಯ್ದೆ ಜಾರಿಗೊಳಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಿರುವ ಕಾಯ್ದೆಯನ್ನು ವಿರೋಧಿಸುತ್ತೇವೆ ಎಂದರು.

    ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿದರು. ನಂತರ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು.

    ಅಸಂಘಟಿತ ಕಾರ್ವಿುಕರ ಸಂಘಟನೆ ಜಿಲ್ಲಾಧ್ಯಕ್ಷ ನಿಯಾಜ್ ಶೇಖ್, ಕೆಪಿಸಿಸಿ ಮೀನುಗಾರರ ವಿಭಾಗದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸುಣಗಾರ, ಜಿಪಂ ಸದಸ್ಯ ರಾಘವೇಂದ್ರ ತಹಸೀಲ್ದಾರ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಚನ್ನಬಸನಗೌಡ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎಸ್.ಎಂ. ಕೋತಂಬ್ರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಖಾದರ್​ವೊಹಿದ್ದೀನ್ ಶೇಖ್, ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹನುಮಂತಪ್ಪ ಕೋಣನಕೊಪ್ಪ, ಕುರುಬರ ಸಂಘದ ತಾಲೂಕಾಧ್ಯಕ್ಷ ಸುರೇಶ ದೊಡ್ಡಕುರುಬರ, ಪುರಸಭೆ ಸದಸ್ಯ ನಾಗಪ್ಪ ಸೌದತ್ತಿ, ಮುಖಂಡರಾದ ಪುಟ್ಟಪ್ಪ ವಾಸನ, ಹನುಮಂತಪ್ಪ ಕಲ್ಲೇರ, ವಿ.ಎಚ್.ಜಾಧವ, ರವೀಂದ್ರ ಚಿಕ್ಕೇರಿ, ಪ್ರಭು ದೊಡ್ಡಕುರುಬರ, ಅಸಂಘಟಿತ ಕಾರ್ವಿುಕರ ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿ ಮಂಜುನಾಥ ತೊರವಂದ, ಗುಡದಯ್ಯ ಸುಂಕದ, ಬಸನಗೌಡ ಪಾಟೀಲ, ಮಾಲತೇಶ ಸುಂಕದ, ಪ್ರಭಯ್ಯ ಹಿರೇಮಠ, ಸಿದ್ದಪ್ಪ ಹೊಸನಗರ, ಬಸಣ್ಣ ನಿಟಗಿನಕೊಪ್ಪ, ರಾಮಲಿಂಗ ವಗ್ಗಣ್ಣನವರ, ಶಿವಾನಂದಪ್ಪ ಮನ್ನಂಗಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts