More

    ಭೂಮಿಯ ಸಮೀಪಕ್ಕೆ ಶನಿ ಗ್ರಹ! ಇಂದು ಆಕಾಶದಲ್ಲಿ ವಿಸ್ಮಯ

    ನವದೆಹಲಿ : ಇಂದು ಆಕಾಶದೆಡೆಗೆ ನಿಮ್ಮ ದೃಷ್ಟಿ ಹರಿಸುವುದಕ್ಕೆ ಒಳ್ಳೆಯ ಸಮಯ. ಟೆಲಿಸ್ಕೋಪ್​ ಇರುವವರಿಗೆ ವಿಸ್ಮಯಪೂರ್ಣ ಅನುಭವಕ್ಕೆ ಅವಕಾಶ. ಭೂಮಿ ಮತ್ತು ಶನಿಗ್ರಹದ ನಡುವಿನ ಅಂತರ ಇಂದು ಕಡಿಮೆಯಾಗಲಿದೆ. ಒಂದು ವರ್ಷ 13 ದಿನಗಳ ನಂತರ ಈ ಪ್ರಕ್ರಿಯೆ ಕಂಡುಬರುತ್ತಿದೆ.

    ಭಾರತದಲ್ಲಿ ಇಂದು ಬೆಳಿಗ್ಗೆ 11.30 ಕ್ಕೆ ರಿಂಗ್​ಗಳನ್ನುಳ್ಳ ಬೃಹತ್​ ಶನಿಗ್ರಹವು ಆಕಾಶದಲ್ಲಿ ಹತ್ತಿರಕ್ಕೆ ಕಾಣುವುದು. ಇದೇ ಸಮಯಕ್ಕೆ ರಾತ್ರಿಯಾಗಿರುವ ದೇಶಗಳಲ್ಲಿ ಶನಿಗ್ರಹವು ಆಕಾಶದಲ್ಲಿ ಹೆಚ್ಚು ಹೊಳಪು ತೋರುವುದನ್ನು ನೋಡಬಹುದು. ಈ ತಿಂಗಳು ಪೂರ್ತಿ ಈ ಪ್ರಕ್ರಿಯೆ ಕಂಡುಬರಲಿದೆ ಎನ್ನಲಾಗಿದೆ.

    ಇದನ್ನೂ ಓದಿ: Breaking: ಹಾಕಿಯಲ್ಲಿ ದಾಖಲೆ ಬರೆದ ಭಾರತದ ವನಿತೆಯರು: 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ

    ಅಪೊಸಿಷನ್​ ಎಂದು ಕರೆಯಲಾಗುವ ಈ ಪ್ರಕ್ರಿಯೆಯಲ್ಲಿ ಭೂಮಿ ಮತ್ತು ಶನಿ ನಡುವೆ 120 ಕೋಟಿ ಕಿಲೋಮೀಟರ್ ಅಂತರ ಇರಲಿದೆ. ಇದು ಸಾಮಾನ್ಯಕ್ಕಿಂತ 50 ಕೋಟಿ ಕಿಮೀ ಕಡಿಮೆ ಅಂತರವಾಗಿದೆ ಎಂದು ಖಗೋಳಶಾಸ್ತ್ರಜ್ಞರಾದ ಡಾ.ಸುವೇಂದು ಪಟ್​​ನಾಯಕ್​ ಹೇಳಿದ್ದಾರೆ. ಇದೇ ರೀತಿಯ ಪ್ರಕ್ರಿಯೆ ಮತ್ತೆ 2022 ರ ಆಗಸ್ಟ್​ 14 ರಂದು ನಡೆಯಲಿದೆ ಎಂದಿದ್ದಾರೆ. (ಏಜೆನ್ಸೀಸ್)

    VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

    ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts