More

    ಜಾತಿ, ಮತ, ಅಂತಸ್ತು ಇಲ್ಲದ ಜಾಗ ಯಾವ್ದು? ಸತೀಶ್​ ಹೇಳ್ತಾರೆ ಕೇಳಿ …

    ಬೆಂಗಳೂರು: ಕೇಂದ್ರ ಸರ್ಕಾರ ಅನ್​ಲಾಕ್​-5 ಮಾರ್ಗಸೂಚಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್​ 15ರಿಂದ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭಗಲಿದೆ. ಇದರಿಂದಾಗಿ ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಒಂದು ಸಂಚಲನ ಪ್ರಾರಂಭವಾಗಿದೆ. ಯಾರು ಮೊದಲು ಚಿತ್ರ ಬಿಡುಗಡೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಚಿತ್ರಮಂದಿರ ಪ್ರಾರಂಭವಾದರೂ, ಜನ ಮೊದಲಿನಂತೆ ಚಿತ್ರಮಂದಿರಕ್ಕೆ ಬಂದು ಚಿತ್ರಗಳನ್ನು ನೋಡುತ್ತಾರಾ? ನೋಡುವುದಕ್ಕೆ ಕರೊನಾ ಭಯಬಿಡುತ್ತದಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ. ಚಿತ್ರಮಂದಿರಗಳನ್ನು ನೋಡುವುದಕ್ಕೆ ಚಿತ್ರಮಂದಿರಕ್ಕಿಂತ ಇನ್ನೊಂದು ಪರ್ಯಾಯವಿಲ್ಲ ಎಂದು ಪುನೀತ್​ ರಾಜಕುಮಾರ್​, ಸುದೀಪ್​, ಸತೀಶ್​ ನೀನಾಸಂ ಸೇರಿದಂತೆ ಹಲವರು ಮಾತನಾಡಿದ್ದಾರೆ.

    ಇದನ್ನೂ ಓದಿ: ಈ ಬಾರಿಯ ‘ಬಿಗ್​ ಬಾಸ್​’ ಮನೆ ಹೇಗಿದೆ? ನೀವೇ ನೋಡ್ಕೊಂಡ್​ ಬನ್ನಿ …

    ಇನ್ನು ಸತೀಶ್​ ನೀನಾಸಂ, ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ, ಚಿತ್ರಮಂದಿರಗಳ ಕುರಿತು ಒಂದು ಸಾಕ್ಷ್ಯಚಿತ್ರವನ್ನೇ ಮಾಡಿದ್ದರು. ಚಿತ್ರಮಂದಿರ ಎನ್ನುವುದು ಎಲ್ಲರ ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದು ಇದರ ಮೂಲಕ ಹೇಳಿದ್ದರು.

    ಈಗ ಅವರು ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವುದಕ್ಕೆ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ, ನಟ-ನಿರ್ಮಾಪಕ ಸತೀಶ್​ ನೀನಾಸಂ ಸಹ ಜನರ ಜತೆಗೆ ಕೂತು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಈ ಕುರಿತು ಅವರೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ಕನ್ನಡಾಭಿಮಾನಿ ಪಂಪನ ಮರ್ಡರ್ ಮಿಸ್ಟರಿ!

    ಜನರ ಜತೆಗೆ ಕೂತು ಸಿನಿಮಾ ನೋಡ್ತಾರಂತೆ ಸತೀಶ್​ ನೀನಾಸಂ

    ಕೇಂದ್ರ ಸರ್ಕಾರ ಅನ್​ಲಾಕ್​-5 ಮಾರ್ಗಸೂಚಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್​ 15ರಿಂದ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭಗಲಿದೆ. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವುದಕ್ಕೆ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ, ನಟ-ನಿರ್ಮಾಪಕ ಸತೀಶ್​ ನೀನಾಸಂ ಸಹ ಜನರ ಜತೆಗೆ ಕೂತು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಈ ಕುರಿತು ಅವರೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಅವರು ಇನ್ನೂ ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ನೀವೇ ನೋಡಿ …

    Posted by Vijayavani on Thursday, October 1, 2020

    ಈ ವಿಡಿಯೋದಲ್ಲಿ ಸತೀಶ್​ ಜಾತಿ, ಮತ, ಅಂತಸ್ತು ಎಲ್ಲವೂ ಬಿಟ್ಟು ಸೇರುವ ಒಂದೇ ಜಾಗವೆಂದರೆ ಅದು ಚಿತ್ರಮಂದಿರ ಮಾತ್ರ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿತುವ ಅವರು, ‘ಲಾಕ್​ಡೌನ್​ ತೆರವಾದ ನಂತರ, ಸರ್ಕಾರವು ಒಂದೊಂದೇ ಅನುಮತಿ ನೀಡುತ್ತಿದೆ. ಇದೀಗ ಚಿತ್ರಮಂದಿರ ಪ್ರಾರಂಭಿಸುವುದಕ್ಕೆ ಅನುಮತಿ ನೀಡಿದೆ. ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಶೇ 50ರಷ್ಟು ಮಾತ್ರ ಚಿತ್ರಮಂದಿರ ತುಂಬಬೇಕು ಎಂದು ಸರ್ಕಾರ ಹೇಳಿರುವುದರಿಂದ, ಅದರಂತೆಯೇ ನಡೆದುಕೊಳ್ಳಬೇಕಿದೆ. ನಾನು ಸಹ ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದಕ್ಕೆ ಉತ್ಸುಕನಾಗಿದ್ದೇನೆ. ಬಿಡುಗಡೆಯಾಗುವ ಮೊದಲ ಚಿತ್ರವನ್ನು ಪ್ರೇಕ್ಷಕರ ಜತೆಗೆ ಕುಳಿತು ನೋಡಬೇಕು ಎಂದು ತೀರ್ಮಾನಿಸಿದ್ದೇನೆ. ಮತ್ತೆ ಎಲ್ಲ ಒಟ್ಟಿಗೆ ಸೇರೋಣ. ಜಾತಿ, ಮತ, ಅಂತಸ್ತು ಎಲ್ಲವೂ ಬಿಟ್ಟು ಸೇರುವ ಒಂದೇ ಜಾಗವೆಂದರೆ ಅದು ಚಿತ್ರಮಂದಿರ ಮಾತ್ರ. ಆ ಚಿತ್ರಮಂದಿರಗಳು ಮತ್ತೆ ಬಾಗಿಲನ್ನು ತೆಗೆಯುತ್ತಿವೆ. ಎಲ್ಲರೂ ಬನ್ನಿ ಸಿನಿಮಾ ನೋಡೋಣ’ ಎಂದು ಅವರು ಕರೆ ನೀಡಿದ್ದಾರೆ.

    ಕಣ್ಣೀರಿಟ್ಟ ಅನುಶ್ರೀಗೆ ‘ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ’ ಎಂದ ಮತ್ತೊಬ್ಬ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts