More

    ಅಂಬರೀಷ್ ಹುಟ್ಟುಹಬ್ಬಕ್ಕೆ ಸತೀಶ್ ಕೊಟ್ಟ ಗಿಫ್ಟು ಇದು!

    ಸತೀಶ್ ನೀನಾಸಂ ಈ ಹಿಂದೆ ‘ರಾಕೆಟ್’ ಮತ್ತು ‘ಅಂಜದ ಗಂಡು’ ಚಿತ್ರಗಳಿಗೆ ಒಂದೊಂದು ಹಾಡನ್ನು ಹಾಡಿದ್ದರು. ಈಗ ಕೆಲವು ವರ್ಷಗಳ ನಂತರ ಪುನಃ ಮೈಕಿನ ಮುಂದೆ ನಿಂತು ಹಾಡಿದ್ದಾರೆ. ಈ ಬಾರಿ ಯಾವ ಚಿತ್ರಕ್ಕೆ ಎಂಬ ಪ್ರಶ್ನೆ ಸಹಜ. ಸತೀಶ್ ನೀನಾಸಂ ಈ ಬಾರಿ ಮೈಕಿನ ಮುಂದೆ ನಿಂತಿದ್ದು, ಅಂಬರೀಷ್ ಕುರಿತ ಒಂದು ಹಾಡಿಗೆ.

    ಇದನ್ನೂ ಓದಿ: ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಕನ್ನಡಿ ಮುಂದೆ ನಿಂತ ಹಾಗೆ

    ಇಂದು ಅಂಬರೀಷ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ, ಸತೀಶ್ ನೀನಾಸಂ ಒಂದು ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಮಂಡ್ಯದ ಗಂಡು ಕಲ, ಕನ್ನಡದ ಆಸ್ತಿ ಕಲ, ದೋಸ್ತಿಗೆ ಬ್ರಾಂಡು ಕಲ, ನಮ್ ಜಲೀಲ …’ ಎಂಬ ಹಾಡನ್ನು ಸತೀಶ್ ಹಾಡಿದ್ದು, ಅದೀಗ ಹುಟ್ಟುಹಬ್ಬದ ಪ್ರಯುಕ್ತ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಬೇರೆ ಧೈರ್ಯ ಬೇಕು

    ಈ ಹಾಡನ್ನು ಅಂಬರೀಷ್ ಅವರ ಚಿತ್ರಗಳ ಹಲವು ದೃಶ್ಯಗಳು ಮತ್ತು ಅವರ ಸಂಭಾಷಣೆಗಳನ್ನಿಟ್ಟುಕೊಂಡು ರೂಪಿಸಲಾಗಿದೆ. ‘ಬಹದ್ದೂರ್’ ಖ್ಯಾತಿಯ ಚೇತನ್, ಈ ಹಾಡಿಗೆ ಸಾಹಿತ್ಯ ಬರೆದರೆ, ಸಂತೋಷ್ ವೆಂಕಿ ಕಂಪೋಸ್ ಮಾಡಿದ್ದಾರೆ.

    ಈ ಹಾಡು ಯೂಟ್ಯೂಬ್‌ನ ಎ2 ಮ್ಯೂಸಿಕ್ ಚಾನಲ್‌ನಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ.

    ಹುಟ್ಟುಹಬ್ಬ ದಿನದಂದು ರೆಬೆಲ್ ಸ್ಟಾರ್ ನೆನಪುಗಳು: ಉಳಿದವರು ಕಂಡಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts