More

    ಸರ್ವ ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡಿ

    ತಾವರಗೇರಾ: ಭಕ್ತಿಯಿಂದ ಗಣೇಶ ಹಬ್ಬವನ್ನು ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಮಂಗಳವಾರ ಹೇಳಿದರು.

    ಇದನ್ನೂ ಓದಿ: ಗಣೇಶ-ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ಆಚರಿಸಿ: ಎಸ್ಪಿ ಸುಜಿತಾ ಮನವಿ

    ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಡಿಜೆಯನ್ನು ಯಾರು ಸಹ ಬಳಸಬಾರದು, ಒಂದು ವೇಳೆ ಬಳಸಿದರೇ ಅಂತಹವರ ವಿರುದ್ಧ ಪ್ರಕರಣ ದಾಖಲಾಗಿಸುತ್ತದೆ.

    ಜನರು ಕುಟುಂಬ ಸಮೇತರಾಗಿ ಬಂದು ಗಣೇಶನನ್ನು ವೀಕ್ಷಣೆ ಮಾಡುವಂತೆ ಇರಬೇಕು. ಅಷ್ಟೊಂದು ಅಂದ, ಚಂದವಾಗಿ ಗಣೇಶನನ್ನು ಸ್ಥಾಪಿಸಬೇಕು. ಯಾವುದೇ ಅವಘಡಗಳು ಆಗದಂತೆ ಸುರಕ್ಷತೆಯಿಂದ ಪ್ರತಿಷ್ಠಾಪಿಸಬೇಕು.

    ಸ್ವಯಂ ಸೇವಕರು ಸುರಕ್ಷಾ ಸಲಕರಣೆಗಳಾದ ನೀರು, ಮರಳು ಸೇರಿ ಸುರಕ್ಷತಾ ಸಲಕರಣೆಗಳನ್ನು ಇಟ್ಟು ಸ್ವಯಂ ಸೇವಕರು ಗಣೇಶನನ್ನು ಕಾಯಬೇಕು. ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತ ಕೆಲಸ ಮಾಡಬಾರದು.

    ಗಣೇಶ ಹಬ್ಬ ಇದೇ 19ರಂದು ಪ್ರಾರಂಭವಾಗುತ್ತಿದ್ದು, ಅದರಂತೆ ಇದೇ 28 ರಂದು ಈದ್ ಮಿಲಾದ್ ಹಬ್ಬವಿದ್ದು ಈ ಎರಡು ಹಬ್ಬಗಳನ್ನು ಸರ್ವಧರ್ಮದವರು ಶಾಂತಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಹೋಗಬೇಕು, ಸರ್ವ ಧರ್ಮದವರು ಒಂದಾಗಿ ಶಾಂತಿ ಸುವ್ಯವಸ್ಥಿತವಾಗಿ ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.

    ಕೆಇಬಿ ಸೆಕ್ಷನ್ ಅಧಿಕಾರಿ ರಶ್ಮೀ ಮಾತನಾಡಿ, ಗಣೇಶನ್ನು ಕೂಡಿಸುವಾಗ ನಮ್ಮ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡು ಗಣೇಶ ಪ್ರತಿಷ್ಠಾನೆ ಮಾಡಬೇಕು. ಎಚ್‌ಟಿ ಲೈನ್ ಕೆಳಗೆ ಗಣೇಶನನ್ನು ಕೂಡಿಸಬಾರದು. ವಿದ್ಯುತ್ ಅವಘಡಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

    ಸ್ಥಳೀಯ ಪಿಎಸ್‌ಐ ನಾಗರಾಜ, ಪಪಂ ಆರೋಗ್ಯ ನಿರೀಕ್ಷಕ ಹುಲ್ಲಪ್ಪ ಗಾಂಜಿ, ಪಪಂ ಸಿಬ್ಬಂದಿ ಶರಣಬಸವ ಸೈಂದರ್,
    ಕೆಇಬಿ ಸಿಬ್ಬಂದಿ ರಾಚಯ್ಯ, ಪಪಂ ಸದಸ್ಯ ವೀರನಗೌಡ ಪಾಟೀಲ್, ಶಫಿವುಲ್ಲಾ, ಯುವ ಮುಖಂಡರಾದ ಮಂಜುನಾಥ ಜೂಲಕುಂಟಿ,
    ಚನ್ನಪ್ಪ ನಾಲತವಾಡ, ಬಬ್ರುವಾಹನ್ ಗುಳೇದ, ಸಿದ್ಧನಗೌಡ ಪುಂಡಗೌಡ್ರು ಬಸವರಾಜ ಇಂಗಳದಾಳ, ವೀರೇಶ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts