More

    34 ವರ್ಷಗಳ ಹಿಂದೆಯೇ ಕನ್ನಡದಲ್ಲಿ ಕೆಲಸ ಮಾಡಿದ್ದರು ಸರೋಜ್​ ಖಾನ್​

    ಬಾಲಿವುಡ್​ನ ಹಿರಿಯ ಮತ್ತು ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್​ ಖಾನ್​, ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಸಾವಿಗೆ ಭಾಷೆ ಮತ್ತು ಗಡಿಯ ಹಂಗಿಲ್ಲದೆ ಎಲ್ಲಾ ಸೆಲೆಬ್ರಿಟಿಗಳು ಸಹ ಕಂಬನಿ ಮಿಡಿದಿದ್ದಾರೆ.

    ಇದನ್ನೂ ಓದಿ: ತಂದೆಯಿಲ್ಲದ ಮುಸ್ಲಿಂ ಯುವತಿ ಮದುವೆಗೆ ಸುದೀಪ್​ ನೆರವು

    ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದ ಸರೋಜ್​ ಅವರು ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತೇ. ಕಳೆದ ವರ್ಷ ಬಿಡುಗಡೆಯಾದ ಮುರಳೀಕೃಷ್ಣ ನಿರ್ದೇಶನದ ‘ಗರ’ ಚಿತ್ರದ ಹಾಡಿಗೆ ಮುಂಬೈನಿಂದ ಬಂದು ಸರೋಜ್​ ಅವರು ನೃತ್ಯ ನಿರ್ದೇಶನ ಮಾಡಿಸಿದ್ದರು. ಈ ಸಂದರ್ಭದಲ್ಲಿ ಅದೇ ಅವರು ನೃತ್ಯ ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರ ಎಂದು ಹೇಳಲಾಗಿತ್ತು.

    ಆದರೆ, 30 ವರ್ಷಗಳ ಮುನ್ನವೇ ಸರೋಜ್​ ಖಾನ್​ ಅವರು ಕನ್ನಡದ ಚಿತ್ರವೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹೌದು, 34 ವರ್ಷಗಳ ಹಿಂದೆ ಬಿಡುಗಡೆಯಾದ ‘ಆಫ್ರಿಕಾದಲ್ಲಿ ಶೀಲಾ’ ಚಿತ್ರಕ್ಕೆ ಸರೋಜ್​ ಖಾನ್​ ನೃತ್ಯ ಸಂಯೋಜನೆ ಮಾಡಿದ್ದರು. ಅವರನ್ನು ಕನ್ನಡ ಚಿತ್ರರಂಗಕ್ಕೆ ಮೊದಲು ಪರಿಚಯಿಸಿದ್ದು ಹಿರಿಯ ನಟ-ನಿರ್ದೇಶಕ ದ್ವಾರಕೀಶ್​.

    ‘ಆಫ್ರಿಕಾದಲ್ಲಿ ಶೀಲಾ’ ಏಕಕಾಲಕ್ಕೆ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾದ ಚಿತ್ರ. ಕನ್ನಡದಲ್ಲಿ ಚಿತ್ರದ ಹೆಸರು ‘ಆಫ್ರಿಕಾದಲ್ಲಿ ಶೀಲಾ’ ಎಂದಿದ್ದರೆ, ಹಿಂದಿಯಲ್ಲಿ ಚಿತ್ರಕ್ಕೆ ‘ಶೀಲಾ’ ಎಂಬ ಹೆಸರು ಇಡಲಾಗಿತ್ತು. ಈ ಚಿತ್ರದಲ್ಲಿ ಬಾಲಿವುಡ್​ನ ಹಲವು ಕಲಾವಿದರು ಮತ್ತು ತಂತ್ರಜ್ಱರು ಕೆಲಸ ಮಾಡಿದ್ದರು. ಪ್ರಮುಖವಾಗಿ ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಬಪ್ಪಿ ಲಹರಿ, ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಇನ್ನು ಸರೋಜ್​ ಖಾನ್​ ನೃತ್ಯ ನಿರ್ದೇಶನ ಮಾಡಿದ್ದರು. ಖ್ಯಾತ ನೃತ್ಯ ನಿರ್ದೇಶಕ ಅಹ್ಮದ್​ ಖಾನ್​, ಈ ಚಿತ್ರಕ್ಕೆ ಸರೋಜ್​ ಅವರಿಗೆ ಅಸಿಸ್ಟ್​ ಮಾಡಿದ್ದರು. ಅವರಿಬ್ಬರ ಹೆಸರುಗಳನ್ನು ಚಿತ್ರದ ಟೈಟಲ್​ ಕಾರ್ಡ್​ನಲ್ಲಿ ನೋಡಬಹುದು. ಇದಲ್ಲದೆ ಬಾಲಿವುಡ್​ ನಟಿಯರಾದ ಸಾಹಿಲಾ ಚಡ್ಡಾ, ರಂಜಿತಾ ಮುಂತಾದವರು ನಟಿಸಿದ್ದರು.

    ಇದನ್ನೂ ಓದಿ: ಓಟಿಟಿ ವೇದಿಕೆಯತ್ತ ಪ್ರಿಯಾಂಕಾ ಉಪೇಂದ್ರ ‘ಸೇಂಟ್​ ಮಾರ್ಕ್ಸ್​ ರಸ್ತೆ’

    ಅದಕ್ಕೂ ಮುನ್ನ ಹಿಂದಿಯ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶಿಸಿದ್ದ ಸರೋಜ್​ ಖಾನ್​ ಅವರು, ‘ಆಫ್ರಿಕಾದಲ್ಲಿ ಶೀಲಾ’ ಬಿಡುಗಡೆಯಾಗಿ ಎರಡು ವರ್ಷಗಳ ನಂತರ ‘ತೇಜಾಬ್​’ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದರು. ಈ ಚಿತ್ರದ ‘ಏಕ್​ ದೋ ತೀನ್​’ ಹಾಡು ಜನಪ್ರಿಯವಾಗಿ, ಮುಂದಿನ ಎರಡು ದಶಕಗಳ ಕಾಲ ಸರೋಜ್​ ಅವರು ಬಾಲಿವುಡ್​ನ ಬೇಡಿಕೆಯ ನೃತ್ಯ ನಿರ್ದೇಶಿಕಿಯಾದರು. ಹಾಗಾಗಿ ‘ಆಫ್ರಿಕಾದಲ್ಲಿ ಶೀಲಾ’ ನಂತರ ಸರೋಜ್​ ಅವರು ಕಳೆದ ವರ್ಷದ ತನಕ ಯಾವುದೇ ಕನ್ನಡ ಚಿತ್ರಕ್ಕೂ ಕೆಲಸ ಮಾಡಿರಲಿಲ್ಲ ಎಂಬುದು ಗಮನಾರ್ಹ.

    VIDEO| ಮಗಳು ವಂಶಿಕಾಗೆ ನಟಿ ಮಾನ್ಯಾ ಕನ್ನಡ ಪಾಠ ಹೇಗಿದೆ ನೋಡಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts