More

    ಕೆಜಿಎಫ್​ ಬಾಬು ಮನೆ ಮೇಲೆ ಐಟಿ ದಾಳಿ ಪ್ರಕರಣ; ಸಾವಿರಾರು ಸೀರೆಗಳು-ಡಿಡಿಗಳು ವಶಕ್ಕೆ

    ಬೆಂಗಳೂರು: ಉದ್ಯಮಿ, ಕಾಂಗ್ರೆಸ್​ ಮುಖಂಡ ಯೂಸುಫ್​ ಶರೀಪ್​ ಅಲಿಯಾಸ್​ ಕೆಜಿಎಫ್​ ಬಾಬು ಮನೆ ಮೇಲೆ ಆದಾಯ ತೆರಿಗೆ ಇಲಾಖೆ(IT) ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಬೆಳಗ್ಗೆ 6 ಘಂಟೆ ಸುಮಾರಿಗೆ ಹೈಗ್ರೌಂಡ್ಸ್​ ಬಳಿ ಇರುವ ರುಕ್ಸಾನಾ ಪ್ಯಾಲೇಸ್​ ಮೇಲೆ ದಾಳಿ ನಡೆದಿದ್ದು ಮೂರು ಕಾರುಗಳಲ್ಲಿ ಬಂದಿದ್ದ IT ಅಧಿಕಾರಿಗಳ ತಂಡವು ಲೆಕ್ಕ ಪತ್ರ ಪರಿಶೀಲನೆಯಲ್ಲಿ ತೊಡಗಿದೆ.

    ಸೀರೆ-ಡಿಡಿ ವಶಕ್ಕೆ

    ದಾಳಿ ವೇಳೆ ಸುಮಾರು 2,000 ಸಾವಿರಕ್ಕೂ ಹೆಚ್ಚು ಡಿಮ್ಯಾಂಡ್​ ಡ್ರಾಫ್ಟ್​(DD) ಹಾಗೂ 5,000 ಸಾವಿರ ರೇಷ್ಮೆ ಸೀರೆ ದೊರೆತಿದ್ದು ಇವುಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    It Raid

    ಇದನ್ನೂ ಓದಿ: ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ; ಚುನಾವಣಾ ಸಮಯದಲ್ಲಿ ಶಾಕ್!

    ಉಮ್ರಾ ಪೌಂಡೇಶನ್​ ಹೆಸರಿನಲ್ಲಿ ತಲಾ 1,105 ಸಾವಿರ ರೂ ಮೌಲ್ಯದ ಡಿಡಿ ಹಾಗೂ 5,000 ಸಾವಿರ ರೂ ಬೆಲೆಯ ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಡಿಡಿ ಮೇಲೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳ ಹೆಸರನ್ನು ನಮೂದಿಸಲಾಗಿತ್ತು ಎಂದು ತಿಳಿದು ಬಂದಿದೆ.

    ಲಾಠಿ ಚಾರ್ಜ್​

    ಇನ್ನು ಕೆಜಿಎಫ್​ ಬಾಭು ಮನೆ ಮೇಲೆ ಐಟಿ ದಾಳಿಯಾಗಿರುವ ವಿಷಯ ತಿಳಿದು ಅವರ ನಿವಾಸದ ಬಳಿ ಅಭಿಮಾನಿಗಳು ಜಮಾಯಿಸಿದ್ದು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಭಯಗೊಂಡು ಅವರ ಮನೆ ಮೇಲೆ ದಾಳಿ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ಇನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಕಾರಣ ಪೊಲೀಸರು ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಿ ಪರಿಸ್ಥಿತಿಯನ್ನು ಹತ್ತೋಟಿಗೆ ತಂದಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts