More

    ಹ್ಯಾಟ್ರಿಕ್ ಸಾಧನೆಯತ್ತ ಹೆದ್ದಾರಿಗಳ ಸರದಾರ?: ಆರೆಸ್ಸೆಸ್ ಕೇಂದ್ರಸ್ಥಾನ ನಾಗ್ಪುರದಲ್ಲಿ ಬಿಜೆಪಿ-ಕಾಂಗ್ರೆಸ್ ಹಣಾಹಣಿ

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್​ನಲ್ಲಿ ಮಂತ್ರಿ ಸ್ಥಾನವನ್ನು ಅತ್ಯುತ್ತಮವಾಗಿ ನಿಭಾಯಿಸಿದವರು ಯಾರೆಂದು ಕೇಳಿದರೆ ವಿಪಕ್ಷ ನಾಯಕರು ಕೂಡ ಹೇಳುವುದು ಕೇಂದ್ರ ಹೆದ್ದಾರಿ, ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಸರನ್ನೇ.

    ದೇಶಾದ್ಯಂತ ಹೆದ್ದಾರಿಗಳನ್ನು ತ್ವರಿತಗತಿಯಲ್ಲಿ ನಿರ್ಮಾಣ ಮಾಡಿ, ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿದ, ಮುಖ್ಯವಾಗಿ ಸಂಸದರ ಪ್ರೀತಿಗೆ ಪಾತ್ರರಾಗಿರುವ ಗಡ್ಕರಿ, ಮೂರನೇ ಬಾರಿಗೆ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೆದ್ದಾರಿ ಸಚಿವರಿಗೆ ಈ ಬಾರಿ ನಾಗ್ಪುರ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಕಾಸ್ ಠಾಕ್ರೆ ಸವಾಲೊಡ್ಡಿದ್ದಾರೆ.

    ಆರ್​ಎಸ್​ಎಸ್​ನ ಕೇಂದ್ರ ಕಚೇರಿ ಇರುವುದು ನಾಗ್ಪುರದಲ್ಲೇ. ಹಾಗಂತ, ಇದು ಬಿಜೆಪಿ ಭದ್ರಕೋಟೆಯೇನಲ್ಲ ಎನ್ನುವುದನ್ನು ಇತಿಹಾಸವೇ ಹೇಳುತ್ತದೆ. 1952ರಿಂದ 3 ಬಾರಿ (1999, 2014, 2019) ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಕ್ಷೇತ್ರದ ಮತದಾರರು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಏಪ್ರಿಲ್ 19ರ ಮೊದಲ ಚರಣದಲ್ಲೇ ನಾಗ್ಪುರದಲ್ಲಿ ಮತದಾನ ನಡೆಯುತ್ತಿದೆ.

    ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಠಾಕ್ರೆ, ನಾಗ್ಪುರ ಜಿಲ್ಲಾಧ್ಯಕ್ಷ ಮತ್ತು ನಾಗ್ಪುರ ಪಾಲಿಕೆಯ ಮಾಜಿ ಮೇಯರ್ ಕೂಡ ಹೌದು. ನಗರದ ಮೂಲಭೂತ ಸಮಸ್ಯೆಗಳ ಬಗ್ಗೆ ರ್ಚಚಿಸುತ್ತ, ಜನಮನ ಸೆಳೆಯಲು ಯತ್ನಿಸಿದ್ದಾರೆ. 2019ರ ಚುನಾವಣೆಯಲ್ಲಿ ಗಡ್ಕರಿ ವಿರುದ್ಧ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ ಸ್ಪರ್ಧಿಸಿದ್ದರು. ಆದರೆ, ಗಡ್ಕರಿ ಕಾರ್ಯವೈಖರಿ ಮತ್ತು ಪ್ರಭಾವಳಿ ಮುಂದೆ ಪಾಟೋಲೆಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಪಾಟೋಲೆ ಮೊದಲು ಬಿಜೆಪಿಯಲ್ಲಿದ್ದರು. ಆದರೆ, ಪಿಎಂ ಮೋದಿ ವಿರುದ್ಧ ಅಸಮಾಧಾನಗೊಂಡು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರು. ನಂತರ, ಗಡ್ಕರಿ ವಿರುದ್ಧವೇ ಸ್ಪರ್ಧಿಸಿ, ಸೋತರು.

    2014 ಮತ್ತು 2019ರ ಎರಡೂ ಚುನಾವಣೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅಂತರದ ಮತಗಳಲ್ಲಿ ಗೆದ್ದಿರುವ ಗಡ್ಕರಿ, ಇಲಾಖೆ ಮೂಲಕ ಗ್ಯಾಸೋಲಿನ್​ನಲ್ಲಿ ಎಥೆನಾಲ್ ಮಿಶ್ರಣ ಹೆಚ್ಚಿಸುವುದು, ಡಾಂಬರಿನಲ್ಲಿ ಪ್ಲಾಸ್ಟಿಕ್ ಮಿಶ್ರಣ, ಭಾರತ್ ನ್ಯೂ ಕಾರ್ ಅಸೆಸ್​ವೆುಂಟ್ ಪ್ರೋಗ್ರಾಮ್ ಕಾರುಗಳಲ್ಲಿ ಎಬಿಎಸ್ ಮತ್ತು 6 ಏರ್​ಬ್ಯಾಗ್​ಗಳನ್ನು ಅಳವಡಿಸುವ ಹಲವು ಉತ್ತಮ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ‘ಈ ಬಾರಿ 5 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ’ ಎಂಬ ವಿಶ್ವಾಸದಲ್ಲಿದ್ದಾರೆ. 90ರ ದಶಕದಲ್ಲಿ ಬಾಳಾ ಠಾಕ್ರೆಯವರ ಗಮನೆಸೆಳೆಯುವಂತೆ ಕೆಲಸ ಮಾಡಿದ್ದ ಕೀರ್ತಿ ಗಡ್ಕರಿಯವರದ್ದು ಎಂದು ಕೆಲ ದಿನಗಳ ಹಿಂದೆ ರಾಜ್ಯದ ಸಿಎಂ ಏಕನಾಥ್ ಶಿಂದೆ ನೆನಪಿಸಿಕೊಂಡಿದ್ದರು.

    ಕೆಲಸದಲ್ಲಿ ಚಾಂಪಿಯನ್: ದೇಶದ ಹೆದ್ದಾರಿಗಳ ಸರದಾರ ಎಂದೇ ಖ್ಯಾತಿಯಾಗಿರುವ ಗಡ್ಕರಿಯವರ ಪರ ಪ್ರಚಾರ ನಡೆಸಲು ಇತ್ತೀಚೆಗೆ ನಾಗ್ಪುರಕ್ಕೆ ಬಂದಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗಡ್ಕರಿಯವರನ್ನು ‘ಅಜಾತಶತ್ರು’ ಎಂದು ಬಣ್ಣಿಸಿದರು. ಹಿಂದೊಮ್ಮೆ ಸಂಸತ್ತಿನಲ್ಲಿ ಮಾತನಾಡುತ್ತ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಗಡ್ಕರಿಯವರನ್ನು ‘ರೋಡ್ಕರಿ’ ಎಂದು ಹೊಗಳಿದ್ದರು. ಹೀಗಾಗಿ, ಇಲಾಖೆ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡಿ, ಮೂಲಸೌಕರ್ಯಕ್ಕೆ ಹೊಸ ಸ್ಪರ್ಶ ನೀಡಿದ ಗಡ್ಕರಿ, ‘ಕೆಲಸಕ್ಕೆ ಸಂಬಂಧಿಸಿದ ಯಾವುದೇ ಫೈಲ್ ಇರಲಿ, ತಕ್ಷಣವೇ ಕ್ಲಿಯರ್ ಮಾಡಿ, ಕೆಲಸಕ್ಕೆ ಚಾಲನೆ ನೀಡುವ ಮನಸ್ಥಿತಿ ಹೊಂದಿದ್ದಾರೆ. ಯಾವುದೇ ಭ್ರಮೆಗಳನ್ನು ಹುಟ್ಟಿಸುವುದಿಲ್ಲ. ವಾಸ್ತವ ಏನಿದೆಯೋ ಅದನ್ನು ಹೇಳುತ್ತ ಜನರನ್ನು ಸೆಳೆಯುತ್ತಾರೆ’ ಎಂದು ಅವರನ್ನು ಬಲ್ಲವರೊಬ್ಬರು ಹೇಳುತ್ತಾರೆ.

    ಕಾಂಗ್ರೆಸ್​ಗೆ ವಿಬಿಎ ಬೆಂಬಲ: ದೇಶದ ಹೆದ್ದಾರಿಗಳ ಸರದಾರ ಎಂದೇ ಖ್ಯಾತಿಯಾಗಿರುವ ಗಡ್ಕರಿಯವರ ಪರ ಪ್ರಚಾರ ನಡೆಸಲು ಇತ್ತೀಚೆಗೆ ನಾಗ್ಪುರಕ್ಕೆ ಬಂದಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗಡ್ಕರಿಯವರನ್ನು ‘ಅಜಾತಶತ್ರು’ ಎಂದು ಬಣ್ಣಿಸಿದರು. ಹಿಂದೊಮ್ಮೆ ಸಂಸತ್ತಿನಲ್ಲಿ ಮಾತನಾಡುತ್ತ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಗಡ್ಕರಿಯವರನ್ನು ‘ರೋಡ್ಕರಿ’ ಎಂದು ಹೊಗಳಿದ್ದರು. ಹೀಗಾಗಿ, ಇಲಾಖೆ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡಿ, ಮೂಲಸೌಕರ್ಯಕ್ಕೆ ಹೊಸ ಸ್ಪರ್ಶ ನೀಡಿದ ಗಡ್ಕರಿ, ‘ಕೆಲಸಕ್ಕೆ ಸಂಬಂಧಿಸಿದ ಯಾವುದೇ ಫೈಲ್ ಇರಲಿ, ತಕ್ಷಣವೇ ಕ್ಲಿಯರ್ ಮಾಡಿ, ಕೆಲಸಕ್ಕೆ ಚಾಲನೆ ನೀಡುವ ಮನಸ್ಥಿತಿ ಹೊಂದಿದ್ದಾರೆ. ಯಾವುದೇ ಭ್ರಮೆಗಳನ್ನು ಹುಟ್ಟಿಸುವುದಿಲ್ಲ. ವಾಸ್ತವ ಏನಿದೆಯೋ ಅದನ್ನು ಹೇಳುತ್ತ ಜನರನ್ನು ಸೆಳೆಯುತ್ತಾರೆ’ ಎಂದು ಅವರನ್ನು ಬಲ್ಲವರೊಬ್ಬರು ಹೇಳುತ್ತಾರೆ.

    ಬಾರಿಗೆ ಗಡ್ಕರಿಗೆ ಪ್ರಬಲ ಸವಾಲೊಡ್ಡಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್​ನಲ್ಲಿದೆ. ನಾಗ್ಪುರದಲ್ಲಿ ಒಟ್ಟು 6 ವಿಧಾನಸಭೆ ಕ್ಷೇತ್ರಗಳಿದ್ದು, 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ನಾಗ್ಪುರ ನೈಋತ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

    6,6,6,6,6,6…ಒಂದೇ ಓವರ್’ನಲ್ಲಿ 6 ಸಿಕ್ಸರ್: ಯುವರಾಜ್ ಸಿಂಗ್ ಕ್ಲಬ್ ಸೇರಿದ ನೇಪಾಳ ಬ್ಯಾಟರ್, ಇಲ್ಲಿದೆ ವಿಡಿಯೋ..!

    ಕೋಟ್ಯಂತರ ಮೌಲ್ಯದ ಕಳವು ಪ್ರಕರಣ ಬಯಲಿಗೆ; 1.2 ಕೋಟಿ ಮೌಲ್ಯದ ಗೋಡಂಬಿ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts