More

    ಚಂದ್ರಶೇಖರ ಗುರೂಜಿ ಕೊಲೆಗೈದ ಆರೋಪಿಗಳು ಅಷ್ಟು ಬೇಗ ಸಿಕ್ಕಿಬೀಳಲು ಆ ಒಂದು ಫೋನ್​ ಕಾಲ್ ನೆರವಾಯ್ತಾ?​

    ಬೆಳಗಾವಿ: ಮಂಗಳವಾರ (ಜುಲೈ 5) ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ನಡೆದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆ ರಾಜ್ಯದ ಜನರನ್ನು ದಿಗ್ಭ್ರಮೆಗೊಳಿಸಿದೆ. ಭಕ್ತರ ಸೋಗಿನಲ್ಲಿ ಗುರೂಜಿ ಅವರ ಬಳಿ ಹೋದ ಇಬ್ಬರು ದುಷ್ಕರ್ಮಿಗಳು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಇದೀಗ ಕೇಳಿಬಂದಿರುವ ಸುದ್ದಿಯೇನೆಂದರೆ, ಅರೋಪಿಗಳು ತಾವಾಗಿಯೇ ಪೊಲೀಸರನ್ನು ಕರೆಸಿಕೊಂಡರು ಎನ್ನಲಾಗುತ್ತಿದೆ. ನಿನ್ನೆ ಸಂಜೆಯೇ ಬೆಳಗಾವಿಯ ರಾಮದುರ್ಗದಲ್ಲಿ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ ನಿಖರ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಈ ಕಾರಣಕ್ಕೆ ವಿಚಾರಣೆ ಮುಂದುವರಿದಿದೆ.

    ಆರೋಪಿಗಳೇ ಪೊಲೀಸರಿಗೆ ಶರಣಾಗಲು ಕರೆಸಿಕೊಂಡ್ರಾ? ಹತ್ಯೆ ನಂತರ ಊರು ಬಿಡಲು ಮುಂದಾದವರು ನಂತರ ಮನಸ್ಸು ಬದಲಿಸಿದ್ರಾ? ಎಂಬ ಪ್ರಶ್ನೆಗಳು ಮೂಡುತ್ತಿದೆ. ಎಲ್ಲಿಗೆ ಹೋದರು ಪೊಲೀಸರು ಬಿಡುವುದಿಲ್ಲ ಎಂಬ ಕಾರಣಕ್ಕೆ ತಾವೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಬಂಧನ ವೇಳೆ ನಾವೇ ಪೋನ್ ಮಾಡಿ ಪೊಲೀಸರಿಗೆ ಬರಲು ಹೇಳಿದೆವು ಎಂದು ಆರೋಪಿ ಮಹಾಂತೇಶ್ ತಿಳಿಸಿದ್ದಾನೆ.

    ಇಬ್ಬರು ಆರೋಪಿಗಳನ್ನು ನಿನ್ನೆ ಸಂಜೆ ರಾಮದುರ್ಗ ಪಟ್ಟಣದ ಹೊರ ವಲಯದ ಧಾರವಾಡ ರಸ್ತೆಯಲ್ಲಿ ಬಂಧಿಸಲಾಯಿತು. ಬಂಧಿತ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಇಬ್ಬರೂ ಕಲಘಟಗಿ ತಾಕೂಕಿನ ಧುಮ್ಮವಾಡದವರು. ಆರೋಪಿ ಮಹಾಂತೇಶ ಶಿರೂರ, ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ. ಈತನ ಪತ್ನಿ ವನಜಾಕ್ಷಿಯೂ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಬಂಧಿಸಿ, ಕರೆದುಕೊಂಡು ಬರುವಾಗ ತಾವೇ ಪೊಲೀಸರನ್ನು ಕರೆಸಿಕೊಂಡಿದ್ದಾಗಿ ಆರೋಪಿ ಮಹಾಂತೇಶ್​ ಹೇಳಿದ್ದಾನೆ. (ದಿಗ್ವಿಜಯ ನ್ಯೂಸ್​)

    ಚಂದ್ರಶೇಖರ ಗುರೂಜಿ ಕಗ್ಗೊಲೆ: ಬಾಗಲಕೋಟೆ ಮೂಲದವರಾದ್ರೂ ಮುಂಬೈನಲ್ಲೇ ಇರುತ್ತಿದ್ದ ಇವರ ಹಿನ್ನೆಲೆ ಹೀಗಿದೆ…

    ಹತ್ಯೆಗೂ ಮುನ್ನ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಮುಂದೆ ಹಂತಕರ ಹೈಡ್ರಾಮ ಹೀಗಿತ್ತು…

    ಐದು ದಿನಗಳ ಹಿಂದೇ ನಡೆದಿತ್ತಾ ಚಂದ್ರಶೇಖರ್ ಗುರೂಜಿ ಕೊಲೆ ಸಂಚು?; ಇಲ್ಲಿದೆ ಅಂಥ ಒಂದು ಸುಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts