More

    ಇಂದಿನಿಂದ ಸಾಣೂರು ಉರುಸ್

    ಕಾರ್ಕಳ: ಸರ್ವಧರ್ಮೀಯರ ಆರಾಧನಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾಣೂರು ಅಸ್ಸಯ್ಯದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ಉರುಸ್ ಫೆ.20ರಿಂದ 22ರ ತನಕ ಜರುಗಲಿದೆ. ಸಾಣೂರು ಶಾಂಭವಿ ನದಿ ತಟದಲ್ಲಿ ಇರುವ ದರ್ಗಾದಲ್ಲಿ ನಡೆಯುವ 63ನೇ ಉರುಸ್ ವಾರ್ಷಿಕೋತ್ಸವ ಇದಾಗಿದೆ. ದಕ್ಷಿಣ ಭಾರತದಲ್ಲಿ ಸಾವಿರಾರು ಕರಾಮತ್‌ಗಳಿಂದ ಖ್ಯಾತಿ ಪಡೆದಿರುವ ತಮಿಳುನಾಡಿನ ಏರ್‌ವಾಡಿ ಸೈಯ್ಯದ್ ಇಬ್ರಾಹಿಂ ಪರಂಪರೆಯಲ್ಲಿ ಧನ್ಯಗೊಂಡ ಕಾರ್ಕಳ ತಾಲೂಕಿನ ಸಾಣೂರು ಊರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಸೈಯ್ಯದ್ ಶಾಹುಲ್ ಹಮೀದ್ ಇವರ ಉರುಸ್ ಇದಾಗಿದೆ. ಸಾಣೂರು ದರ್ಗಾ ದೇಶವ್ಯಾಪ್ತಿ ಭಕ್ತರನ್ನು ಹೊಂದಿದೆ. ಅದರಲ್ಲೂ ವಿಶೇಷ ಎಂಬಂತೆ ಝಿಯಾರತ್ ನಡೆಯುತ್ತದೆ. ದುಷ್ಟಶಕ್ತಿಯ ಪ್ರಭಾವಕ್ಕೆ ತುತ್ತಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಿಗೆ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿ ವಿಧಾನದೊಂದಿಗೆ ಯೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ಶಕ್ತಿ ತಮಿಳುನಾಡಿನ ಏರ್‌ವಾಡಿ ಸೈಯ್ಯದ್ ಇಬ್ರಾಹಿಂ ದರ್ಗಾ ಹೊಂದಿದೆ. ಆದುದರಿಂದಲೇ ದೇಶದ ನಾನಾ ಕಡೆಗಳಿಂದ ಅಸಂಖ್ಯಾತ ಭಕ್ತರು ಸಾಣೂರು ದರ್ಗಾಕ್ಕೆ ಆಗಮಿಸಿ ನೆಮ್ಮದಿಯ ಬದುಕು ನಿರ್ವಹಿಸುತ್ತಿದ್ದಾರೆ. ನಾನಾ ಪವಾಡಗಳು ಅಗೋಚರ ಶಕ್ತಿ ಹೊಂದಿರುವಂಥ ಈ ಪುಣ್ಯಭೂಮಿಗೆ ಸರ್ವಧರ್ಮೀಯರು ಆಗಮಿಸುತ್ತಾರೆ ಎನ್ನುವುದು ಮತ್ತೊಂದು ಗಮನಾರ್ಹ ಸಂಗತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts