More

    ಸನ್ಮಾನರ್ಗಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯ

    ದೇವರಹಿಪ್ಪರಗಿ: ಪ್ರತಿಯೊಬ್ಬ ಮಾನವನು ಪುರಾಣ ಪ್ರವಚನಗಳನ್ನು ಆಲಿಸಿ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕು ಪಾವನವಾಗುತ್ತದೆ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ವೀರಭದ್ರೇಶ್ವರ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆಯ 11ನೇ ವರ್ಷದ ಕಾರ್ತಿಕೋತ್ಸವ ಹಾಗೂ ದೀಪೋತ್ಸವದ ಪ್ರಯುಕ್ತ 21ದಿನಗಳವರೆಗೆ ನಡೆಯುವ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಆಧುನಿಕ ಯುಗದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ಉತ್ಸಾಹ ಬದುಕು ಬದುಕದೇ ಆಲಸ್ಯದ ಜೀವನ ನಡೆಸುತ್ತಿದ್ದಾರೆ. ಅಧರ್ಮದ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಮನುಷ್ಯ ಜೀವನ ಸಾರ್ಥಕಗೊಳಿಸಬೇಕಾದ ಸಂಸ್ಕಾರ ಮರೆತು ಜೀವನ ನಡೆಸುತ್ತಿದ್ದಾರೆ. ಮನುಷ್ಯ ಸಂಸ್ಕಾರವಂತನಾಗಿ ಬದುಕಬೇಕಾದರೆ ಪುರಾಣ ಪ್ರವಚನಗಳ ಜತೆಗೆ ಮನೆಯ ಹಿರಿಯರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಮನುಷ್ಯ ಜೀವನ ಸನ್ಮಾರ್ಗದ ಕಡೆ ಹೋಗುತ್ತದೆ. ಅದಕ್ಕಾಗಿ ಎಲ್ಲರೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಮನುಷ್ಯ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಸದಯ್ಯನ ಮಠದ ವೀರಗಂಗಾಧರ ಶಿವಾಚಾರ್ಯರು ಮಾತನಾಡಿ, 12ನೇ ಶತಮಾನದಲ್ಲಿ ಪವಾಡಗಳನ್ನು ಮಾಡುವುದರ ಜತೆಗೆ ಅಂಧಕಾರವನ್ನು ತೊಲಗಿಸಿ ಸಮಾನತೆಗಾಗಿ ಶರಣರ ಜತೆ ಕೈಜೋಡಿಸಿ ನಿರಂತರ ದಾಸೋಹ ಮಾಡಿದ ಮಹಾತಾಯಿ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಆಲಿಸಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

    ಪುರಾಣ ಪ್ರವಚನಕಾರ ಜಡಿಮಠದ ಜಡೆಸಿದ್ಧೇಶ್ವರ ಶ್ರೀಗಳು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ವೀರಭದ್ರೇಶ್ವರ ದೇವಸ್ಥಾನ ಕಮಿಟಿಯವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಸದ್ಭಕ್ತರೆಲ್ಲರೂ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

    ವೀರಭದ್ರೇಶ್ವರ ಜಾತ್ರಾ ಕಮಿಟಿಯ ಮುಖ್ಯಸ್ಥ ಚನ್ನವೀರ ಕುದರಿ ಮಾತನಾಡಿದರು. ಜಾತ್ರಾ ಕಮಿಟಿಯ ಮುಖಂಡರಾದ ಬಾಬುಗೌಡ ಪಾಟೀಲ (ಜಿಡ್ಡಿಮನಿ), ಮಡಿವಾಳಪ್ಪ ಮಣೂರು, ಸೋಮಶೇಖರ ಹಿರೇಮಠ, ತೇಜಪ್ಪ ಕಕ್ಕಳಮೇಲಿ, ರಮೇಶ ಮಶಾನವರ, ಆನಂದ ಜಡಿಮಠ, ಶಂಕರಗೌಡ ಪಾಟೀಲ, ಸಂಗಪ್ಪ ಮಣೂರು, ಸಂಗನಗೌಡ ಪಾಟೀಲ, ಜಿ.ಆರ್. ಬಿರಾದಾರ, ಯಲಗೂರಿ ದೇವುರ, ಕಾಶಿನಾಥ ಕೋರಿ, ಅಪ್ಪುಗೌಡ ಪಾಟೀಲ, ವೀರೇಶ ಕುದುರಿ, ರವಿ ಯಾಳಗಿ, ಲಿಂಬೇನಪ್ಪ ದುತ್ತರಗಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts