More

    ತಾಲೂಕಿಗೊಂದು ಸಂಜೀವಿನಿ ಮಳಿಗೆ – ಏನಿದರ ವಿಶೇಷ..?

    ಕಾರವಾರ:ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನ ಮಾರಾಟಕ್ಕೆ ಇಲಾಖೆಯ ನೆರವಿನಲ್ಲೇ ಅಂಗಡಿಗಳನ್ನು ತೆರೆಯಲಾಗಿದೆ.

    `ಸಂಜೀವಿನಿ ಮಾರ್ಟ್’ ಹೆಸರಿನ ಈ ಅಂಗಡಿಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಮಾರಾಟ, ನಡೆಯಲಿದೆ.

    ರಾಜ್ಯದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದೆ.

    ಜಿಲ್ಲೆಯ ಮುರುಡೇಶ್ವರ, ಸಿದ್ದಾಪುರ ಮತ್ತು ಕುಮಟಾಗಳಲ್ಲಿ ಸಂಜೀವಿನಿ ಮಾರ್ಟ್ ಪ್ರಾರಂಭಿಸಲಾಗಿದ್ದು ಆಗಸ್ಟ್ ಅಂತ್ಯದೊಳಗಾಗಿ ಜಿಲ್ಲೆಯ ಬಾಕಿ ಉಳಿದ ತಾಲೂಕಿನಲ್ಲಿಯೂ ಈ ಮಾರ್ಟ್ಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ಜಿಪಂ ಸಿಇಒ ಈಶ್ವರ ಕಾಂದೂ ತಿಳಿಸಿದ್ದಾರೆ.
    ಜಿಯೋ ಮ್ಯಾಪ್:
    ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನಗಳಿಗೆ ಪ್ರಚಾರ ನೀಡುವ ಉದ್ದೇಶದಿಂದ ಎನ್‌ಆರ್‌ಎಲ್‌ಎಂ ಯೋಜನೆಯಡಿ ಜಿಯೋ ಮ್ಯಾಪ್ ಒಂದನ್ನು ತಯಾರಿಸಲಾಗಿದೆ.

    ಇದನ್ನೂ ಓದಿ:ರಾತ್ರಿ ಊಟ ಮಾಡಿ ಮಲಗಿದ್ದ ಬಾಲಕಿ ಬೆಳಗ್ಗೆ ಅಸ್ವಸ್ಥ; ಮುರಾರ್ಜಿ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು!

    ಇದು ಜಿಲ್ಲೆಯಲ್ಲಿರುವ ಸಂಜೀವಿನಿ ಮಳಿಗೆಗಳು, ಅವುಗಳಲ್ಲಿ ಸಿಗುವ ಉತ್ಪನ್ನಗಳು, ಜಿಲ್ಲೆಯ ಸ್ವ ಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತದೆ.

    ಕುಮಟಾದಲ್ಲಿ ಚಾಲನೆ:
    ಕುಮಟಾ ಶಾಸಕ ದಿನಕರ ಶಟ್ಟಿ ಅವರು ಕುಮಟಾ ಸಂಜೀವಿನಿ ಮಾರ್ಟ್ನ್ನುನ್ನು ಗಿಬ್ ಸರ್ಕಲ್ ಬಳಿಯ ಪ್ರಮಿಳಾ ಕಾಂಪ್ಲೆಕ್ಸ್ನಲ್ಲಿ ಬುಧವಾರ ಉದ್ಘಾಟಿಸಿದರು. ಮಹಿಳಾ ಸ್ವಾವಲಂಬನೆಗೆ ಇದೊಂದು ಪ್ರಮುಖ ಹೆಜ್ಜೆಯಗಿದೆ. ಅಗತ್ಯ ನೆರವನ್ನು ಒದಗಿಸುವುದಾಗಿ ತಿಳಿಸಿದರು. ತಾಪಂ ಇಒ ನಾಗರತ್ನಾ ನಾಯಕ ಇದ್ದರು.
    ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರಿನ ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆ ಹಾಗೂ ಕಲ್ಲಬ್ಬೆಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಿಂದ ಈ ಮಾರ್ಟ್ ತೆರೆಯಲಾಗಿದೆ.



    ಎನ್‌ಆರ್‌ಎಲ್‌ಎಂ ಅಡಿ ಜಿಲ್ಲೆಯ ಮಹಿಳೆಯರ ಸ್ವಾವಲಂಬನೆಗೆ ಬೇಕಾದ ಹಲವು ಯೋಜನೆಗಳನ್ನು ಜಿಪಂ, ತಾಪಂ ವತಿಯಿಂದ ಜಾರಿಗೆ ತರಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಯೋಜನೆಯಡಿ ತರಬೇತಿ, ಪ್ರೋತ್ಸಾಹ ಹಾಗೂ ಸಹಾಯಧನದ ನೆರವೂ ದೊರೆಯಲಿದೆ. ಆಸಕ್ತರು ಇಲಾಖೆ ಸಂಪರ್ಕಿಸಿ ಯೋಜನೆಯ ಪ್ರಯೋಜನ ಪಡೆಯಬೇಕು.
    ಈಶ್ವರ ಕಾಂದೂ
    ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts