ಬೆಂಗಳೂರು: ಬಾಲಿವುಡ್ ಮುನ್ನಾಬಾಯಿ ಸಂಜಯ್ ದತ್ ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದು, ಕೆಜಿಎಫ್ 2 ಚಿತ್ರತಂಡದಿಂದ ಅಧೀರನ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮುನ್ನಾಬಾಯ್ಗೆ ಶುಭಾಶಯ ಕೋರಿದ್ದಾರೆ.
"War is meant for progress, even the vultures will agree with me" – #Adheera, Happy Birthday @duttsanjay.#KGFChapter2 @TheNameIsYash @prashanth_neel @VKiragandur @hombalefilms @TandonRaveena @SrinidhiShetty7 @excelmovies @VaaraahiCC @PrithvirajProd @DreamWarriorpic @LahariMusic pic.twitter.com/llYfi2ggNJ
— Hombale Films (@hombalefilms) July 29, 2021
ಇದನ್ನೂ ಓದಿ: ಸಂಜಯ್ ದತ್ ಹುಟ್ಟುಹಬ್ಬಕ್ಕೆ ಅಧೀರನ ಟೀಸರ್?
ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಭಾಗ 2 ರಲ್ಲಿ ಅಧೀರನ ಪಾತ್ರಕ್ಕೆ ಮುನ್ನಾಬಾಯ್ ಬಣ್ಣ ಹಚ್ಚಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ.
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಹೊಂಬಾಳೆ ಫಿಲಂ ಹಾಗೂ ಕೆಜಿಎಫ್ 2 ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿ ಶುಭಾಶಯ ಕೋರಿದೆ.
@TandonRaveena @SrinidhiShetty7 @excelmovies @VaaraahiCC @PrithvirajProd @DreamWarriorpic @LahariMusic
— Sanjay Dutt (@duttsanjay) July 29, 2021
ಎಲ್ಲಾ ಸರಿಯಾಗಿದ್ದರೆ ಇದೇ ತಿಂಗಳು ಕೆಜಿಎಫ್ 2 ಚಿತ್ರ ತೆರೆ ಮೇಲೆ ಬರಲು ಸಿದ್ದವಾಗಿತ್ತು. ಆದರೆ ಕೊರೊನಾ ಮಹಾಮಾರಿಯಿಂದ ಇದು ಸಾಧ್ಯವಾಗಿಲ್ಲ. (ಏಜೆನ್ಸೀಸ್)