More

    ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಸೆಲೆಬ್ರಿಟಿಗಳೆಲ್ಲ ಮನೆಯಲ್ಲೇ ಲಾಕ್ ಆಗಿರುವ ನಡುವೆ ಅವರು ಪರಸ್ಪರ ಮಾತನಾಡುತ್ತ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸಲು ಆನ್‌ಲೈನ್ ಚಾಟ್ ಶೋಗಳು ನೆರವಾಗುತ್ತಿವೆ. ಇದು ಕೆಲವು ತಮಾಷೆಯ ಪ್ರಸಂಗಗಳನ್ನೂ ಸೃಷ್ಟಿಸುತ್ತಿದೆ. ಪಾಕಿಸ್ತಾನದ ಕ್ರಿಕೆಟಿಗರ ಶೋಯಿಬ್ ಮಲಿಕ್ ಇತ್ತೀಚೆಗೆ ಪಾಕಿಸ್ತಾನದ ನಟಿ ಮಹಿರಾ ಖಾನ್ ಜತೆಗೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತುಕತೆಗೆ ಬಂದಿದ್ದರು. ಈ ವೇಳೆ ಅವರು ಮಹಿರಾ ಜತೆಗೆ ಫ್ಲರ್ಟಿಂಗ್‌ನಲ್ಲಿ ತೊಡಗಿದ್ದು, ಅವರ ಪತ್ನಿ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಣ್ಣು ಕೆಂಪಾಗಿಸಿದೆ!

    ಇದನ್ನೂ ಓದಿ: ಸೆರೇನಾ ವಿಲಿಯಮ್ಸ್ ಮನೆಯಲ್ಲೇ ಟೆನಿಸ್ ಕೋರ್ಟ್ ನಿರ್ಮಾಣ!

    ಇನ್‌ಸ್ಟಾಗ್ರಾಂ ಲೈವ್ ವೇಳೆ ಮಲಿಕ್ ಮತ್ತು ಮಹಿರಾ ಇಂಟರ್‌ನೆಟ್ ಸಮಸ್ಯೆಯಿಂದಾಗಿ ಪರಸ್ಪರ ಸಂಪರ್ಕ ಸಾಧಿಸಲು ಕಷ್ಟಪಡುತ್ತಿದ್ದರು. ಆಗ ಮಹಿರಾ, ನಮ್ಮಿಬ್ಬರಿಗೂ ವಯಸ್ಸಾಗುತ್ತಿರುವುದರಿಂದಾಗಿ ಸಂಪರ್ಕ ಸಾಧಿಸುವುದು ಸವಾಲೆನಿಸುತ್ತಿರಬಹುದು ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಮಲಿಕ್, ನನಗೆ ವಯಸ್ಸಾಗುತ್ತಿರುವುದು ನಿಜ. ಆದರೆ ನಿಮಗಲ್ಲ ಎಂದು ಮಹಿರಾ ಜತೆ ಫ್ಲರ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮಹಿರಾ, ನಮ್ಮನ್ನು ಬಾಬಿ (ಅತ್ತಿಗೆ) ನೋಡುತ್ತಿರಬಹುದು ಎಂದಿದ್ದರು. ಆಗ ಮಲಿಕ್, ಹೌದು ಅವಳು (ಸಾನಿಯಾ ಮಿರ್ಜಾ) ನೋಡುತ್ತಿದ್ದಾಳೆ. ಆದರೆ ಅವಳು ನನಗೆ ಅತ್ತಿಗೆಯಲ್ಲ ಎಂದಿದ್ದರು. ಆಗ ಮಹಿರಾ ಜೋರಾಗಿ ನಕ್ಕಿದ್ದರು. ಇದಕ್ಕೆ ಪ್ರತಿಯಾಗಿ ಮಲಿಕ್, ನನ್ನ ಮಾತಿನ ಅರ್ಥ ನಿನಗೆ ಅವಳು ಅತ್ತಿಗೆ ಎಂದಲ್ಲ. ಅವಳು (ಸಾನಿಯಾ) ಇಡೀ ಪಾಕಿಸ್ತಾನಕ್ಕೆ ಅತ್ತಿಗೆ’ ಎಂದಿದ್ದರು. ಮಲಿಕ್-ಮಹಿರಾ ಮಾತಿನ ನಡುವೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಸಾನಿಯಾರಿಂದ, ‘ಹೌದು, ನಾನು ನೋಡುತ್ತಿದ್ದೇನೆ. ನೀವಿಬ್ಬರು ಏನು ಮಾತನಾಡಿಕೊಳ್ಳುತ್ತಿದ್ದೀರಿ’ ಎಂಬ ಕಮೆಂಟ್ ಬಂದಿತ್ತು.

    ಇದನ್ನೂ ಓದಿ: ಬಾಬರ್ ಅಜಮ್‌ಗೆ ಸಾನಿಯಾ ಮಿರ್ಜಾ ಕೊಲೆ ಬೆದರಿಕೆ!

    ಮಹಿರಾ ಜತೆಗೆ ಮಾತುಕತೆ ಮುಂದುವರಿಸುತ್ತ ಮಲಿಕ್, ನೀನು ಡೇಟಿಂಗ್‌ಗೆ ಹೋದ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಗೂಗಲ್‌ನಲ್ಲಿ ಹುಡುಕಾಡಿ ತಿಳಿದುಕೊಳ್ಳುವ ಪ್ರಸಂಗ ಬಂದಿತ್ತೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಯಾಗಿ ಮಹಿರಾ, ‘ನಿಮ್ಮಂತೆ ಸಾನಿಯಾ ಮಿರ್ಜಾ ಅವರಂಥ ವ್ಯಕ್ತಿಗಳ ಜತೆ ನಾನು ಡೇಟಿಂಗ್‌ಗೆ ಹೋಗಿಲ್ಲ. ಸಾನಿಯಾ ಬಗ್ಗೆಯಾದರೆ ಗೂಗಲ್‌ನಲ್ಲಿ ಹುಡುಕಾಡಿ ತಿಳಿದುಕೊಳ್ಳಬಹುದು’ ಎಂದು ಹೇಳಿದ್ದರು. ಆಗ ಮತ್ತೆ ಇಬ್ಬರೂ ಜೋರಾಗಿ ನಕ್ಕಿದ್ದರು.

    ಪಿಟಿ ಉಷಾ ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts