More

    ಮೋದಿ ಮಾತೇ ಸ್ಫೂರ್ತಿಯಾಯ್ತಾ? ಲೋಕಲ್​ ಬ್ರ್ಯಾಂಡ್‌ಗಳಿಗೆ ಪ್ರಚಾರ ಕೊಡ್ತಾರಂತೆ ಸಾನಿಯಾ ಮಿರ್ಜಾ

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕುಸಿತ ಕಂಡಿರುವ ದೇಶದ ಆರ್ಥಿಕತೆಗೆ ಬಲತುಂಬಲು ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೆ ಆತ್ಮನಿರ್ಭರ್ ಘೋಷಣೆಯೊಂದಿಗೆ ಸ್ಥಳೀಯ ವಸ್ತುಗಳನ್ನೇ ಖರೀದಿಸಿ ಎಂಬ ಕರೆ ನೀಡಿದ್ದಾರೆ. ಇದರಿಂದ ಸ್ಫೂರ್ತಿ ಪಡೆದುಕೊಂಡಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ, ದೇಶೀಯ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಆಸಕ್ತಿ ತೋರಿದ್ದಾರೆ.

    ಮೋದಿ ಮಾತೇ ಸ್ಫೂರ್ತಿಯಾಯ್ತಾ? ಲೋಕಲ್​ ಬ್ರ್ಯಾಂಡ್‌ಗಳಿಗೆ ಪ್ರಚಾರ ಕೊಡ್ತಾರಂತೆ ಸಾನಿಯಾ ಮಿರ್ಜಾ

    ಇನ್‌ಸ್ಟಾಗ್ರಾಂ ಪೋಸ್ಟ್ ಒಂದರ ಮೂಲಕ ಸಾನಿಯಾ, ಸ್ಥಳೀಯ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ತಾವು ಸಿದ್ಧವಾಗಿರುವುದನ್ನು ಘೋಷಿಸಿದ್ದಾರೆ. ‘ನಾನು ಸ್ಥಳಿಯ ಮತ್ತು ವಿಶೇಷವಾದ ಭಾರತೀಯ ಬ್ರ್ಯಾಂಡ್‌ಗಳನ್ನು ಎದುರು ನೋಡುತ್ತಿದ್ದೇನೆ. ನೀವು ಅದನ್ನು ಹೊಂದಿದ್ದರೆ ಕೈಎತ್ತಿ. ನನಗೊಂದು ಇ-ಮೇಲ್ ಕಳುಹಿಸಿ ಮತ್ತು ನಿಮ್ಮಲ್ಲಿ ಏನಿದೆ ಎಂದು ತಿಳಿಸಿ’ ಎಂಬುದಾಗಿ ಸಾನಿಯಾ ಜಾಹೀರಾತಿನ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಇದನ್ನೂ ಓದಿ: ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲ್ವಂತೆ ನಿತ್ಯಾ ಮೆನನ್

    ಜತೆಗೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಸ್ಥಳೀಯರನ್ನು ಪ್ರೋತ್ಸಾಹಿಸೋಣ. ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಸಮಯ ಇದಾಗಿದೆ. ಭಾರತದಲ್ಲಿ ತಯಾರಾಗುವ ಯಾವುದೇ ಬ್ರ್ಯಾಂಡ್‌ಗಳಿಗೆ ಪ್ರಚಾರ ನೀಡಲು ನಾನು ಸಿದ್ಧಳಾಗಿದ್ದೇನೆ. ನಿಮ್ಮ ಮಾಹಿತಿಗಳನ್ನು ನನಗೆ ನೀಡಿ. ಆಯ್ದ 20 ನನ್ನ ನೆಚ್ಚಿನ ಆಯ್ಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲೇ ಪ್ರಚಾರ ನೀಡುವೆ ಎಂದು 33 ವರ್ಷದ ಸಾನಿಯಾ ವಿವರಿಸಿದ್ದಾರೆ. ತಮ್ಮ ಈ ಯೋಚನೆಗೆ ‘ಸಪೋರ್ಟ್ ಸ್ಮಾಲ್ ಬೈ ಸಾನಿಯಾ’ ಎಂಬ ಹ್ಯಾಷ್‌ಟ್ಯಾಗ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts