More

    ಈಗಾಗಲೇ ಪತಿಯಿಂದ ಬೇರೆಯಾಗಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ವಿಚ್ಛೇದನದ ವದಂತಿ ನಡುವೆ ಶೋಯೆಬ್ ಜತೆ ದುಬೈನಲ್ಲಿ ಸಾನಿಯಾ..!

    ಸಾನಿಯಾ ಮಿರ್ಜಾ 2010ರಲ್ಲಿ ಪಾಜಕಿಸ್ತಾನಿ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾ ತಂಡದ ನಾಯಕನಾಗಿದ್ದ ಶೋಯೆಬ್ ಮಲಿಕ್​​ನನ್ನು ಮದುವೆಯಾಗಿದ್ದರು. ಇತ್ತೀಚೆಗೆ ಇವರಿಬ್ಬರೂ ವಿಚ್ಛೇದನ ಕೊಡಲಿದ್ದಾರೆಂಬ ಸಾಕಷ್ಟು ಸುದ್ದಿಗಳು ಮತ್ತು ಗಾಸಿಪ್​ಗಳು ಹರಿದಾಡುತ್ತಲೇ ಇವೆ.


    ಈಗಾಗಲೇ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಆದರೆ ಇತ್ತೀಚೆಗೆ ಇವರಿಬ್ಬರೂ ತಮ್ಮ ಮಗನ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸುತ್ತಿರುವುದು ಇವರಿಬ್ಬರ ಅಭಿಮಾನಿಗಳಿಗೆ ಖುಷಿ ತಂದಿದೆ.

    ಈಗಾಗಲೇ ಪತಿಯಿಂದ ಬೇರೆಯಾಗಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ವಿಚ್ಛೇದನದ ವದಂತಿ ನಡುವೆ ಶೋಯೆಬ್ ಜತೆ ದುಬೈನಲ್ಲಿ ಸಾನಿಯಾ..!


    ಸಾನಿಯಾ ಹಾಗೂ ಶೋಯೆಬ್​ ಪುತ್ರ ಇಝಾನ್ ಮಿರ್ಜಾ ಮಲಿಕ್​ಗೆ ಒಂದು ವರ್ಷ ತುಂಬಿದ್ದು, ಸಾನಿಯಾ ಮತ್ತು ಶೋಯೆಬ್ ಇಬ್ಬರೂ ಜತೆಯಲ್ಲಿ ಮಗುನ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ.

    ಈಗಾಗಲೇ ಪತಿಯಿಂದ ಬೇರೆಯಾಗಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ವಿಚ್ಛೇದನದ ವದಂತಿ ನಡುವೆ ಶೋಯೆಬ್ ಜತೆ ದುಬೈನಲ್ಲಿ ಸಾನಿಯಾ..!


    ಶೋಯೆಬ್ ಮಲಿಕ್ ಹುಟ್ಟು ಹಬ್ಬದ ಆಚರಣೆಯ ಫೋಟೋಗಳನ್ನ ತಮ್ಮ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೇಕ್ ಮುಂದೆ ಸಾನಿಯಾ ಕುಟುಂಬ ಖುಷಿಯಾಗಿ ಪೋಸ್​​ ಕೊಟ್ಟಿರೋದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.


    ಸದ್ಯ ವಿಚ್ಛೇದನದ ವದಂತಿ ಬೆನ್ನಲ್ಲೇ ಈ ಜೋಡಿ ಹೀಗೆ ಕ್ಯಾಮೆರಾಗೆ ಪೋಸ್​​ ಕೊಟ್ಟಿರೋದು ಎಲ್ಲರ ಖುಷಿ ಹೆಚ್ಚಿಸಿದೆ.
    ಶೋಯೆಬ್​​ ಹಂಚಿಕೊಂಡ ಫೋಟೋದಲ್ಲಿ ಸಾನಿಯಾ ಮಿರ್ಜಾ ಕೂಡ ಕಾಣಿಸಿಕೊಂಡಿದ್ದು, ಅವರು ಪುತ್ರಿ ದುವಾಳನ್ನ ಹಿಡಿದುಕೊಂಡಿದ್ದಾರೆ.


    ಇನ್ನು ಸಾನಿಯಾ ಮಿರ್ಜಾ ಅಥವಾ ಶೋಯೆಬ್​​ ತಮ್ಮ ವಿಚ್ಛೇದನದ ಕುರಿತಂತೆ ಯಾವುದೇ ನಿಲುವನ್ನ ಈವರೆಗೂ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ.
    ಆದರೆ ಸಾನಿಯಾ ಮಿರ್ಜಾ ಅಭಿಮಾನಿಗಳು ಮತ್ತು ಶೋಯೆಬ್​ ಹಿತೈಶಿಗಳು ಇಜಾನ್​ ಅವರ ಹುಟ್ಟುಹಬ್ಬವನ್ನ ಆಚರಿಸೋಕೆ ಖುಷಿ ಪಟ್ಟಿದ್ದಾರೆ.


    ಇಬ್ಬರನ್ನೂ ಜತೆಯಾಗಿ ಕಂಡು ಫ್ಯಾನ್ಸ್​​ ಇವರಿಬ್ಬರೂ ವಿಚ್ಛೇದನ ನೀಡದೇ ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts