More

    ಇಂದು ಸಂಗೀತ ಸಂಜೆ: ಕಬ್ಬನ್ ಉದ್ಯಾನದ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜನೆ, ಪ್ರವೇಶ ಉಚಿತ

    ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಭಾನುವಾರ (ಫೆ. 19) ಎಂ.ಎಸ್. ಬಿಲ್ಡಿಂಗ್ ಎದುರಿನ ಕಬ್ಬನ್ ಉದ್ಯಾನ ದಲ್ಲಿರುವ ರಾಜ್ಯ ಸರ್ಕಾರಿ ಉದ್ಯೋಗಿ ಗಳ ಸಂಘದ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ‘ಸಂಗೀತ ಸಂಜೆ’ ಆಯೋಜಿಸಲಾಗಿದೆ.

    ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಖಾನ್ ಹಾಗೂ ಅಂಕುಶ್ ನಾಯಕ್ ಅವರ ಸಿತಾರ್ ಜುಗಲಬಂದಿ ನಡೆಯಲಿದ್ದು, ಪಂಡಿತ್ ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಲಿದ್ದಾರೆ. ನಂತರ ಪಂಡಿತ್ ಎಂ. ವೆಂಕಟೇಶ್​ಕುಮಾರ್ ಗಾನಸುಧೆಗೆ ನರೇಂದ್ರ ನಾಯಕ್ ಹಾಮೋನಿಯಂ ನುಡಿಸಲಿದ್ದು, ಕೇಶವ್ ಜೋಶಿ ತಬಲ ವಾದನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

    ಎಂ. ವೆಂಕಟೇಶ್ ಕುಮಾರ್ಇಂದು ಸಂಗೀತ ಸಂಜೆ: ಕಬ್ಬನ್ ಉದ್ಯಾನದ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜನೆ, ಪ್ರವೇಶ ಉಚಿತ
    ಧಾರವಾಡದವರಾದ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ಗ್ವಾಲಿಯರ್ ಮತ್ತು ಕಿರಾಣಾ ಘರಾಣಾದಲ್ಲಿ ಹಿಂದೂಸ್ತಾನಿ ಗಾಯಕರಾಗಿ ಹಲವಾರು ವರ್ಷಗಳ ಕಾಲ ಗದಗದಲ್ಲಿ ಸಂಗೀತಗಾರ ಸಂತ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಪಂ. ವೆಂಕಟೇಶ್​ಕುಮಾರ್ ಅವರ ಸಂಗೀತವು ವೈವಿಧ್ಯಮಯ ಸಂಗೀತದ ಪ್ರಭಾವಗಳ ಮಿಶ್ರಣವಾಗಿದೆ. ಇವರ ಕಲಾ ಸೇವೆಯಿಂದಾಗಿ ‘ಪದ್ಮಶ್ರೀ’ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

    ಉಸ್ತಾದ್ ರಫೀಕ್ ಖಾನ್ಇಂದು ಸಂಗೀತ ಸಂಜೆ: ಕಬ್ಬನ್ ಉದ್ಯಾನದ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜನೆ, ಪ್ರವೇಶ ಉಚಿತ
    ಧಾರವಾಡದ ರಫೀಕ್ ಖಾನ್​ರದ್ದು ಸಂಗೀತ ಮನೆತನ. ತಂದೆ ಉಸ್ತಾದ್ ಅಬ್ದುಲ್ ಕರೀಂ ಖಾನ್ ಮತ್ತು ಅಜ್ಜ ಉಸ್ತಾದ್ ರಹಿಮತ್ ಖಾನ್ ಪ್ರಖ್ಯಾತ ಸಿತಾರ್ ವಾದಕರಾಗಿದ್ದರು. ಹಿರಿಯ ಸಹೋದರ ಉಸ್ತಾದ್ ಬಾಲೆ ಖಾನ್ ಸಹ ಸಂಗೀತ ಕಲಾವಿದರು. ರಫೀಕ್ ಖಾನ್ ಮುಂಬೈನ ಗಂಧರ್ವ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ. 2019ರಲ್ಲಿ ಸುರ್​ವುಣಿ ಪ್ರಶಸ್ತಿ ಮತ್ತು ಸ್ವರಗುರು ಪಂಡಿತ್ ಜಸ್​ರಾಜ್ ಪ್ರಶಸ್ತಿ ಪಡೆದಿದ್ದಾರೆ. ಕಲಾಂಗನ್ ಕೊಂಕಣಿ ಅಕಾಡೆಮಿಯ ಸಂದೇಶ ಪ್ರಶಸ್ತಿ ಗಳಿಸಿದ್ದಾರೆ.

    ರಾಜೇಂದ್ರ ನಾಕೋಡ್ಇಂದು ಸಂಗೀತ ಸಂಜೆ: ಕಬ್ಬನ್ ಉದ್ಯಾನದ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜನೆ, ಪ್ರವೇಶ ಉಚಿತ
    ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದಿದ್ದು, ತಂದೆ, ಪಂಡಿತ್ ಅರ್ಜುನ್​ಸಾ ನಾಕೋಡ್ ಪ್ರಸಿದ್ಧ ಗಾಯಕರು. ತಂದೆಯಿಂದ, ಬಳಿಕ ಸಹೋದರರಾದ ಪಂಡಿತ್ ರಘುನಾಥ್ ನಾಕೋಡ್ ಮತ್ತು ವಿಶ್ವನಾಥ್ ನಾಕೋಡ್ ಅವರ ಬಳಿ ತಬಲಾ ವಾದಕ ಕಲಿತರು. ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಇವರು, ಸಂಗೀತ ದಿಗ್ಗಜರಾದ ಬಸವರಾಜ ರಾಜಗುರು, ಬೇಗಂ ಪರ್ವೀನ್ ಸುಲ್ತಾನಾ ಮತ್ತು ಪಂಡಿತ್ ವಿಶ್ವ ಮೋಹನ್ ಭಟ್ ಜತೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

    ಅಂಕುಶ್ ನಾಯಕ್ಇಂದು ಸಂಗೀತ ಸಂಜೆ: ಕಬ್ಬನ್ ಉದ್ಯಾನದ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜನೆ, ಪ್ರವೇಶ ಉಚಿತ
    ಮಂಗಳೂರಿನವರಾದ ಅಂಕುಶ್ ನಾಯಕ್, 9ನೇ ವಯಸ್ಸಿನಲ್ಲಿ ಸಿತಾರ್ ವಾದಕ ಉಸ್ತಾದ್ ರಫೀಕ್​ಖಾನ್ ಅವರಿಂದ ಸಿತಾರ್ ಹಾಗೂ ಘಟಂ ಮಾಂತ್ರಿಕ ವಿದ್ವಾನ್ ತಿರುಚ್ಚಿ ಕೆ.ಆರ್. ಕುಮಾರ್ ಅವರಿಂದ ಕರ್ನಾಟಕ ತಾಳ ಪದ್ಧತಿ ಕಲಿತಿದ್ದಾರೆ. 2009ರಲ್ಲಿ ಆಲ್ ಇಂಡಿಯಾ ರೇಡಿಯೋ ನ್ಯಾಷನಲ್ ಮ್ಯೂಸಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರವಿ ಕೊಪ್ಪಿಕರ್ ಪ್ರಶಸ್ತಿ, ಅವಿನಾಶ್ ಹೆಬ್ಬಾರ್ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

    ನರೇಂದ್ರ ನಾಯಕ್ ಇಂದು ಸಂಗೀತ ಸಂಜೆ: ಕಬ್ಬನ್ ಉದ್ಯಾನದ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜನೆ, ಪ್ರವೇಶ ಉಚಿತ
    ವೃತ್ತಿಯಲ್ಲಿ ಮಂಗಳೂರಿನ ಶಿಕ್ಷಣ ತಜ್ಞರಾಗಿರುವ ನರೇಂದ್ರ ನಾಯಕ್, ಹಾರ್ವೇನಿಯಂ ಮಾಂತ್ರಿಕರಾದ ಪಂಡಿತ್ ವಸಂತ ಕನಕಪುರ ಮತ್ತು ಉಸ್ತಾದ್ ರಫೀಕ್ ಖಾನ್ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ್ದಾರೆ. ಪಂ. ವ್ಯಾಸಮೂರ್ತಿ ಕಟ್ಟಿ ಅವರಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ. ಮಶ್ಕೂರ್ ಅಲಿಕ್ ಖಾನ್, ಪಂ. ರಾಜನ್ ಮತ್ತು ಸಜನ್ ಮಿಶ್ರಾ, ಪಂ. ಜಯತೀರ್ಥ ಮೇವುಂಡಿ, ಪಂ. ರಘುನಂದನ್ ಪನ್ಶಿಕರ್, ಪಂ. ವೆಂಕಟೇಶ್​ಕುಮಾರ್ ಸೇರಿ ಅನೇಕ ಗಾಯಕರೊಂದಿಗೆ ಪ್ರದರ್ಶನ ನೀಡಿದ್ದಾರೆ.

    ಎಂ.ಎಸ್. ಬಿಲ್ಡಿಂಗ್​ನಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ
    ಭಾನುವಾರ ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿ, ಆದೇಶಿಸಿರುವ ಹಿನ್ನೆಲೆಯಲ್ಲಿ ಎಂ.ಎಸ್. ಬಿಲ್ಡಿಂಗ್ ಆವರಣದಲ್ಲಿ ರ್ಪಾಂಗ್ ವ್ಯವಸ್ಥೆ ಇರಲಿದೆ. ಅಲ್ಲಿ ವಾಹನ ನಿಲ್ಲಿಸಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರಬೇಕು.

    ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ ಈಗಲೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. 

    https://www.vijayavani.net/sangeeth-sanjey-2023-register-now/

    ಶಿವರಾತ್ರಿ ಹಿನ್ನೆಲೆ ಸೋಮನಾಥ ದೇವಸ್ಥಾನಕ್ಕೆ ಮಗನ ಜತೆ ಮುಕೇಶ್​ ಅಂಬಾನಿ ಭೇಟಿ: 1.51 ಕೋಟಿ ರೂ. ದೇಣಿಗೆ

    ಶಿವರಾತ್ರಿ ಹಿನ್ನೆಲೆ ಸೋಮನಾಥ ದೇವಸ್ಥಾನಕ್ಕೆ ಮಗನ ಜತೆ ಮುಕೇಶ್​ ಅಂಬಾನಿ ಭೇಟಿ: 1.51 ಕೋಟಿ ರೂ. ದೇಣಿಗೆ

    ಶಿವರಾತ್ರಿ ಹಿನ್ನೆಲೆ ಸೋಮನಾಥ ದೇವಸ್ಥಾನಕ್ಕೆ ಮಗನ ಜತೆ ಮುಕೇಶ್​ ಅಂಬಾನಿ ಭೇಟಿ: 1.51 ಕೋಟಿ ರೂ. ದೇಣಿಗೆ

    ಚಿತ್ರ ಬಿಡುಗಡೆ ಬೆನ್ನಲ್ಲೇ ಕೋಟಿ ಗಳಿಕೆ​ ಪೋಸ್ಟ್​: ಮಲಯಾಳಂ ಇಂಡಸ್ಟ್ರಿಗೆ IT ಶಾಕ್​, 225 ಕೋಟಿ ರೂ. ಕಪ್ಪುಹಣ ಪತ್ತೆ

    ಜಿಎಸ್​​ಟಿ ಬಾಕಿ ಪಾವತಿಗೆ ಸಮ್ಮತಿ: ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ; ಹಲವು ಶಿಫಾರಸು ಅಂಗೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts