ಚಿತ್ರ ಬಿಡುಗಡೆ ಬೆನ್ನಲ್ಲೇ ಕೋಟಿ ಗಳಿಕೆ​ ಪೋಸ್ಟ್​: ಮಲಯಾಳಂ ಇಂಡಸ್ಟ್ರಿಗೆ IT ಶಾಕ್​, 225 ಕೋಟಿ ರೂ. ಕಪ್ಪುಹಣ ಪತ್ತೆ

ಕೊಚ್ಚಿ: ಮಲಯಾಳಂ ಸಿನಿಮಾ ನಿರ್ಮಾಣ ವಲಯದಲ್ಲಿ ಬರೋಬ್ಬರಿ 225 ಕೋಟಿ ರೂ. ಕಪ್ಪುಹಣದ ವ್ಯವಹಾರ ನಡೆದಿರುವುದು ಕಂಡುಬಂದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ ವೇಳೆ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ. ಡಿಸೆಂಬರ್​ 15ರಿಂದ ಮಲಯಾಳಂನ ಸೂಪರ್​​ಸ್ಟಾರ್ಸ್​ ಮತ್ತು ಮುಂಚೂಣಿ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದೆ. ತೆರಿಗೆಯಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಸುಮಾರು 72 ಕೋಟಿ ರೂಪಾಯಿಯನ್ನು ಚಿತ್ರ ನಿರ್ಮಾಪಕರು ಮುಚ್ಚಿಟ್ಟಿದ್ದಾರೆ ಎಂದು ವರದಿಯಾಗಿದೆ. … Continue reading ಚಿತ್ರ ಬಿಡುಗಡೆ ಬೆನ್ನಲ್ಲೇ ಕೋಟಿ ಗಳಿಕೆ​ ಪೋಸ್ಟ್​: ಮಲಯಾಳಂ ಇಂಡಸ್ಟ್ರಿಗೆ IT ಶಾಕ್​, 225 ಕೋಟಿ ರೂ. ಕಪ್ಪುಹಣ ಪತ್ತೆ