More

    ಸಂಗಮ ಬಳಿಯ ಓಂ ಶಾಂತಿಧಾಮದಲ್ಲಿ ತಿಂಡಿಗಾಗಿ ಸ್ನೇಹಿತೆ ಹೆಗಲೇರುವ ಗಿಣಿ

    ಕನಕಪುರ: ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಅಪರೂಪವಲ್ಲ ಎಂಬುದಕ್ಕೆ ಇಲ್ಲೊಂದು ವಿಶೇಷ ಪ್ರಸಂಗ ಉದಾಹರಣೆಯಾಗಿದೆ.

    ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಂಗಮ-ಮೇಕೆದಾಟು ಕಾವೇರಿ ನದಿ ತೀರದ ಓಂ ಶಾಂತಿಧಾಮ ಗುರುಕುಲದ ಅಂಚಿನ ಕಾಡಿನಲ್ಲಿನ ಗಿಳಿ ಮತ್ತು ಪುಟ್ಟ ಪೋರಿಯ ಸ್ನೇಹ, ಪ್ರೀತಿ ಅಚ್ಚರಿ ಮೂಡಿಸುವಂತಿದೆ. ಶಾಂತಿಧಾಮದಲ್ಲಿ ಅಡುಗೆ ಕೆಲಸ ಮಾಡುವ ದಾನಮ್ಮ ಮತ್ತು ಸೋಮು ದಂಪತಿಯ ಎರಡೂವರೆ ವರ್ಷದ ಬಾಲಕಿ ಪುಟ್ಟಿ ತಾನು ನಿತ್ಯ ಗಿಣಿಗೆ ತಿಂಡಿ ತಿನಿಸುವ ಕಾಯಕದಲ್ಲಿ ತೊಡಗಿದ್ದಾಳೆ.

    ಪಾಲಕರು ನೀಡುವ ತಿಂಡಿಯನ್ನು ತೆಗೆದುಕೊಂಡು ‘ಕಿಟ್ಟು’ವಿಗೆ ಕೊಡಬೇಕೆಂದು ಮನೆಯ ಹೊರಹೋಗಿ ತಿನಿಸುತ್ತಿದ್ದಳು. ಬಹಳ ದಿನಗಳಿಂದ ಯಾವ ಕಿಟ್ಟು ಬರುತ್ತಾನೆಂದು ಪಾಲಕರಿಗೆ ಅರ್ಥವಾಗದೇ ತಿಂಡಿ ಕೊಟ್ಟು ಸುಮ್ಮನಾಗುತ್ತಿದ್ದರು. ಗುರುಕುಲದ ಮೇಲ್ವಿಚಾರಕ ನೀಲಮೇಘಶ್ಯಾಂ ಅವರು ಬಾಲಕಿ ತಿಂಡಿ ತೆಗೆದುಕೊಂಡು ಹೋಗುವುದನ್ನು ಗಮನಿಸಿದ್ದಾರೆ. ಕಾಡಿನಿಂದ ಬರುವ ಗಿಳಿ ತಾನಿರುವಿಕೆಗೆ ಶಬ್ದ ಮಾಡುತ್ತದೆ. ನಂತರ ಸ್ನೇಹಿತೆಯ ಹೆಗಲ ಮೇಲೆ ಬಂದು ಕೂರುವ ಗಿಣಿಗೆ ಪುಟ್ಟಿ ತಿಂಡಿ ತಿನಿಸುತ್ತಾಳೆ. ಈ ಅಪರೂಪದ ಪ್ರಸಂಗವನ್ನು ಕ್ಯಾಮರಾದಲ್ಲಿ ಅವರು ಸೆರೆ ಹಿಡಿದಿದ್ದಾರೆ.

    ಗಿಣಿ ಈಗ ಮನೆ ಮಂದಿಗೆಲ್ಲ ಹೊಂದಿಕೊಂಡಿದೆ. ಮಕ್ಕಳು ಮತ್ತು ಪಕ್ಷಿಗಳ ಸಂಬಂಧ ಎಷ್ಟು ಚೆನ್ನಾಗಿದೆ ಎಂಬುದರ ಅರಿವು ನನಗಾಗಿದೆ. ಗಿಣಿಯ ಸಮಯಪ್ರಜ್ಞೆ ಮತ್ತು ಮಗುವಿನ ಪಕ್ಷಿ ಪ್ರೀತಿ ಅಚ್ಚರಿ ಮೂಡಿಸಿದೆ ಎಂದು ಶ್ಯಾಂ ವಿವರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts