More

    ಡೆಂಘೆ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿರಿ

    ಸಂಡೂರು: ಡೆಂಘೆ ತಡೆಗಟ್ಟಬಹುದಾದ ಕಾಯಿಲೆ, ರೋಗ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮನವಿ ಮಾಡಿದರು.

    ತಾಲೂಕಿನ ತೋರಣಗಲ್‌ನ ರೈಲು ನಿಲ್ದಾಣ ಪ್ರದೇಶದಲ್ಲಿ ಡೆಂಘೆ ಕಾಯಿಲೆ ಕುರಿತು ಸೋಮವಾರ ಮಾತನಾಡಿದರು. ಡೆಂಘೆ ಕಾಯಿಲೆಯ ಲಕ್ಷಣಗಳು ದಿಢೀರ್ ಕಾಣಿಸಿಕೊಳ್ಳುತ್ತವೆ. ತಲೆ ನೋವು, ವಿಪರೀತ ಜ್ವರ, ಕಣ್ಣಿನ ಹಿಂಭಾಗ ನೋವು, ವಾಕರಿಕೆ, ವಾಂತಿ, ಕೀಲು ಮತ್ತು ಮೀನಖಂಡಗಳ ನೋವು, ಚರ್ಮದ ಮೇಲೆ ರಕ್ತದ ಗಂಧೆಗಳು ಕಾಣಿಸಿಕೊಳ್ಳುತ್ತವೆ. ನಂತರ ಹೆಮರೈಜ್ ಆಗಿ ಕಪ್ಪು ಬಣ್ಣದ ರಕ್ತ ಭೇದಿ, ಮೂಗು, ಕಿವಿ, ಕಣ್ಣಿನಿಂದ ರಕ್ತ ಹರಿಯುವುದು, ನಂತರ ಅಪಸ್ಮಾರ ಸ್ಥಿತಿ ತಲುಪಿಸುವ ಭಯಾನಕ ಕಾಯಿಲೆ ಇದಾಗಿದ್ದು, ಮೊದಲ ಹಂತದಲ್ಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಪ್ರಾಣಾಪಾಯವಾಗುವುದಿಲ್ಲ ಎಂದರು.

    ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮೀ, ಆಶಾ ಕಾರ್ಯಕರ್ತೆ ವಿಜಯಶಾಂತಿ, ಹುಲಿಗೆಮ್ಮ, ರೇಖಾ, ಮುಖಂಡರಾದ ಭೀಮಲಿಂಗಪ್ಪ, ಹುಲುಗಪ್ಪ, ಶರೀಫ್, ಎರ‌್ರಿಸ್ವಾಮಿ, ಶಕೀಲ್, ಆದಿಲಕ್ಷ್ಮೀ, ಮಲ್ಲೇಶ್ವರಿ, ಹನುಮಕ್ಕ, ಶ್ರಾವಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts