More

    ಬಿಎಸ್‌ಎನ್‌ಎಲ್ ಗ್ರಾಹಕರು ಸುಳ್ಳು ಸುದ್ದಿಗೆ ಕಿವಿಗೊಡಬೇಡಿ

    ಹಾವೇರಿ: ಭಾತರ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್) ಹೊಸ ತಂತ್ರಜ್ಞಾನ ಅಳವಡಿಸಿಕೊಂಡು 4ಜಿ, 5ಜಿ ವ್ಯವಸ್ಥೆಯನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಟೆಲಿಕಾಂ ಕವರೇಜ್ ಮತ್ತು ಅಡೆತಡೆಯಿಲ್ಲದೆ ಸುಧಾರಿತ ಮೊಬೈಲ್ ಸೇವೆಗಳನ್ನು ನೀಡುತ್ತಿದೆ. ಹಾಗಾಗಿ, ಗ್ರಾಹಕರು ಮಾರುಕಟ್ಟೆಯ ವದಂತಿಗಳು, ಊಹಾಪೋಹಗಳು ಅಥವಾ ಸುದ್ದಿಗಳಿಗೆ ಕಿವಿಗೊಡಬಾರದು.
    ಬಿಎಸ್‌ಎನ್‌ಎಲ್ ಟೆಲಿಕಾಂ ಸೇವೆಗಳಾದ ಎಫ್‌ಟಿಟಿಎಚ್ ಬ್ಯಾಡ್ ಬ್ಯಾಂಡ್, ಮೊಬೈಲ್, ಲೀಸ್ಡ್ ಸರ್ಕ್ಯೂಟ್‌ಗಳ ನೆಟ್‌ವರ್ಕ್‌ನಲ್ಲಿ ಗಣನೀಯ ಸುಧಾರಣೆ ತರಲು ಮತ್ತು ಅಸ್ತಿತ್ವದಲ್ಲಿರುವ ವೈರ್‌ಲೈನ್ ಸಂಪರ್ಕಗಳನ್ನು ತಾಮ್ರದ ಮಾಧ್ಯಮದಿಮದ ಫೈಬರ್ ಮಾಧ್ಯಮ ಮೂಲಕ ಎಫ್‌ಟಿಟಿಎಚ್‌ಗೆ ಪರಿವರ್ತಿಸಲಾಗುತ್ತಿದೆ. ಆತ್ಮನಿರ್ಭರ ಭಾರತ ಮಿಷನ್ ಅಡಿಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳಿಂದ ಚಾಲಿತವಾಗಿರುವ 4ಜಿ ಮತ್ತು 5ಜಿ ತಂತ್ರಜ್ಞಾನದ ಪ್ರಸರಣ ವ್ಯವಸ್ಥೆ ಬಳಸಿಕೊಂಡು ನಮ್ಮ ಗ್ರಾಹಕರಿಗೆ ಉತ್ತಮ ಟೆಲಿಕಾಂ ಸೇವೆ ನೀಡಲಾಗುತ್ತಿದೆ. ನೆಟ್‌ವರ್ಕ್ ನವೀಕರಣ ಹಾಗೂ ಆಧುನಿಕರಣ ಸಮಯದಲ್ಲಿ ಗ್ರಾಹಕರಿಗೆ ಅನಾನುಕೂಲತೆ ಉಂಟಾಗಿದ್ದಕ್ಕೆ ವಿಷಾಧಿಸುತ್ತೇವೆ. ಇದನ್ನು ಹೊರತುಪಡಿಸಿ ಯಾವುದೇ ವದಂತಿಗೆ ಕಿವಿಗೊಡಬಾರದೆಂದು ಬಿಎಸ್‌ಎನ್‌ಎಲ್ ಹಾವೇರಿ ಉಪ ವಿಭಾಗ ಮನವಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts