More

  ಭೂಪತಿ ಹೋರಾಟದ ಬದುಕು ಸ್ಫೂರ್ತಿದಾಯಕ

  ನಾಡೋಜ ಬೆಳಗಲ್ ವೀರಣ್ಣ ಬಣ್ಣನೆ | ಸ್ಮರಣೆ ಸಮಾರಂಭ| ವಿಜಯನಗರ ಉಕ್ಕು ನಮ್ಮ ಹಕ್ಕು ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ

  ಸಂಡೂರು: ಮಾಜಿ ಶಾಸಕ ಯು.ಭೂಪತಿ ಈ ಭಾಗದ ಕಾರ್ಮಿಕರು, ರೈತರು ಸೇರಿ ಶೋಷಿತರ ಧ್ವನಿಯಾಗಿ ಹೋರಾಟ ಮಾಡಿದ ನಾಯಕ ಎಂದು ನಾಡೋಜ ಬೆಳಗಲ್ ವೀರಣ್ಣ ಹೇಳಿದರು.

  ತೋರಣಗಲ್‌ನಲ್ಲಿ ಯು.ಭೂಪತಿ ಸ್ಮಾರಕ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ಯು.ಭೂಪತಿ ಸ್ಮರಣೆ ಸಮಾರಂಭದಲ್ಲಿ ಮಾತನಾಡಿದರು. ವಿಜಯನಗರ ಉಕ್ಕು ನಮ್ಮ ಹಕ್ಕು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅದಕ್ಕಾಗಿ ಸೈಕಲ್ ಜಾಥಾ ನಡೆಸಿದರು. ಯುವಕರಿಗೆ ಭೂಪತಿಯವರ ಹೋರಾಟದ ಬದುಕು ಸ್ಫೂರ್ತಿ ಎಂದರು.

  ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಓದುವ ಹವ್ಯಾಸದಿಂದ ನಿತ್ಯದ ಆಗು-ಹೋಗುಗಳನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ, ಅರ್ಥೈಸುವ ಮತ್ತು ನಿಭಾಯಿಸುವ ಜಾಣ್ಮೆ ಕರಗತವಾಗುತ್ತದೆ ಎಂಬುದು ಭೂಪತಿಯವರ ಆಶಯವಾಗಿತ್ತು. ಅದಕ್ಕಾಗಿ ಅವರ ಹೆಸರಲ್ಲಿ ಟ್ರಸ್ಟ್ ಆರಂಭಿಸಿದ್ದು, ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಿ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಮತ್ತು ಸಾಧಕರನ್ನು ಗೌರವಿಸುವ ಜತೆಗೆ ಯುವ ಜನತೆಯನ್ನು ಜಾಗೃತಗೊಳಿಸುವ ಕೆಲಸ ಮಾಡಲಿದೆ ಎಂದರು.

  ಅಂತಃಕರಣದ ಗಣಿ ಯು.ಭೂಪತಿ ಪುಸ್ತಕ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣ ಸಂಚಿಕೆ ಮತ್ತು ಭೂಪತಿ ಕುರಿತ ಪುಸ್ತಕಗಳನ್ನು ವಿತರಿಸಲಾಯಿತು. ಮಾಜಿ ಎಂಎಲ್ಸಿ ಕೆಎಸ್‌ಎಲ್ ಸ್ವಾಮಿ, ಹಿರಿಯ ಸಾಹಿತಿ ಜಿ.ಶರಣಪ್ಪ, ಭದ್ರಾವತಿ ವಿಐಎಸ್‌ಎಲ್‌ನ ವ್ಯವಸ್ಥಾಪಕ ಡಿ.ಲೋಕೇಶ್ವರ, ಹಿರಿಯ ಮುಖಂಡರಾದ ಅಂಗಡಿ ಮಲ್ಲಿಕಾರ್ಜುನಪ್ಪ, ಡಾ.ಬಸವರಾಜ, ಬಸವರಾಜ ಮಸೂತಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಅಭಿಮನ್ಯು ಭೂಪತಿ, ವಕೀಲ ಆರ್.ವೀರೇಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಅಬ್ದುಲ್ ಹೈ, ವೀರೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts