More

    ಫೆಬ್ರವರಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಜಾತ್ರೆ – ಪ್ರಸನ್ನಾನಂದ ಸ್ವಾಮೀಜಿ ಮಾಹಿತಿ

    ಸಂಡೂರು: ಫೆ.8-9ರಂದು ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ಮಹರ್ಷಿಗಳ ಜಾತ್ರೆ ನಡೆಯಲಿದ್ದು ಪ್ರತಿಯೊಬ್ಬರೂ ಆಗಮಿಸಬೇಕು ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಬಂಡ್ರಿ ಗ್ರಾಮದ ಸರ್ಕಲ್‌ನಲ್ಲಿ ರಾಜ ವೀರಮದಕರಿ ನಾಯಕನ ಮೂರ್ತಿ ಲೋಕಾರ್ಪಣೆಗೊಳಿಸಿ ಶುಕ್ರವಾರ ಮಾತನಾಡಿದರು.

    3.25 ಸಾವಿರ ರೂ.ಗಳಲ್ಲಿ ವೀರಮದಕರಿ ನಾಯಕನ ಮೂರ್ತಿಯನ್ನು ಶಾಸಕ ಈ.ತುಕಾರಾಮ್ ಸಿದ್ದಪಡಿಸಿದ್ದಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದರು.

    ಸಂಡೂರಿನ ವಿರಕ್ತಮಠದ ಶ್ರೀಪ್ರಭುಸ್ವಾಮೀಜಿ ಮಾತನಾಡಿ, ಪುಣ್ಯಾನಂದ ಪುರಿ ಸ್ವಾಮೀಜಿ ಮತ್ತು ಶ್ರೀ ಪ್ರಸನ್ನಾನಂದ ಸ್ವಾಮಿಗಳು ವಾಲ್ಮೀಕಿ ಸಮಾಜಕ್ಕೆ ಎರಡು ಕಣ್ಣುಗಳಿದ್ದ ಹಾಗೆ. ಪುಣ್ಯಾನಂದ ಪುರಿ ಸ್ವಾಮೀಜಿ ಹಳ್ಳಿ-ಹಳ್ಳಿಗೆ ತಿರುಗಿ ಸಮಾಜದ ಸಂಘಟನೆ ಮಾಡಿದರು. ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ರಾಜನಹಳ್ಳಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ದಲ್ಲದೆ 250ಕ್ಕೂ ಹೆಚ್ಚು ದಿನಗಳು ಧರಣಿ ನಡೆಸಿ ಎಸ್ಸಿ/ಎಸ್ಟಿಗೆ ಮೀಸಲಾತಿ ಕಲ್ಪಿಸಿದರು ಎಂದರು.

    ಪ್ರೊಫೆಸರ್ ಸಣ್ಣಕ್ಕಿ ಬಸವರಾಜ, ಉಪನ್ಯಾಸಕ ಮತ್ತಾಜನಳ್ಳಿ ಬಸವರಾಜ ಮಾತನಾಡಿದರು. ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ದಿವಾಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಸೋಮಪ್ಪ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ದೊಡ್ಡ ಯರ‌್ರಿಸ್ವಾಮಿ, ಉಪಾಧ್ಯಕ್ಷ ಜೆಬಿಟಿ ಬಸವರಾಜ, ತಾಲೂಕು ಅಧ್ಯಕ್ಷ ನವಲೂಟಿ ಜಯಣ್ಣ, ಉಪಾಧ್ಯಕ್ಷ ವದ್ದಟ್ಟಿ ಆಂಬರೀಷ, ಮಾಜಿ ಅಧ್ಯಕ್ಷ ಡಿ.ಕೃಷ್ಣಪ್ಪ, ಕಾಳಿಂಗೇರಿ ಮಲ್ಲಿಕಾರ್ಜುನ, ಬಿಜೆಪಿ ಓಬಳೇಶ, ತಳವಾರ್ ಪರಶುರಾಂ, ಬಂಡ್ರಿ ವಾಲ್ಮೀಕಿ ಸಂಘದ ಅಧ್ಯಕ್ಷ ಡಿ.ಹನುಮಂತಪ್ಪ, ಬಂಡ್ರಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಭೀಮಪ್ಪ, ಉಪಾಧ್ಯಕ್ಷೆ ವಿಶಾಲಾಕ್ಷಿ ಅಂಜನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts