ಸಂಡೂರು ತಾಲೂಕಿನ ಬನ್ನಿಹಟ್ಟಿಯಲ್ಲಿ ಕುರಿಹಟ್ಟಿ ಮೇಲೆ ಚಿರತೆ ದಾಳಿ: ಸತ್ತು ಬಿದ್ದ ಕುರಿ, ಮೇಕೆಗಳು

blank
blank

ಸಂಡೂರು: ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ರುದ್ರಪ್ಪ ಎಂಬ ರೈತನ ಕುರಿಹಟ್ಟಿ ಮೇಲೆ ಚಿರತೆ ದಾಳಿ ಮಾಡಿ, ಎರಡು ಟಗರು, ನಾಲ್ಕು ಮೇಕೆ, ನಾಲ್ಕು ಕುರಿಗಳನ್ನು ಕೊಂದು ಹಾಕಿದೆ.

ಒಂಬತ್ತನ್ನು ಸ್ಥಳದಲ್ಲೇ ಕೊಂದು ಹಾಕಿದ ಚಿರತೆ, ಮೇಕೆಯೊಂದನ್ನು ಹೊತ್ತೊಯ್ದಿದೆ. ರುದ್ರಪ್ಪ ರಾತ್ರಿ 11ರವರೆಗೆ ಹಟ್ಟಿಯಲ್ಲಿದ್ದು ಬಳಿಕ ಮನೆಗೆ ಬಂದಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಹೋದಾಗ ಕುರಿಗಳು ಸತ್ತು ಬಿದ್ದಿದ್ದವು. ತೋರಣಗಲ್ ಪಶುವೈದ್ಯ ರವಿಕುಮಾರ್ ಭೇಟಿ ನೀಡಿ, ಶವ ಪರೀಕ್ಷೆ ಮಾಡಿದರು. ಅರಣ್ಯಾಧಿಕಾರಿಗಳು ಹೆಜ್ಜೆಯ ಗುರುತಿನ ಮೇಲೆ ಚಿರತೆದೆಂದು ಖಚಿತಪಡಿಸಿದ್ದಾರೆ.

ಮುರಾರ್ಜಿ ವಸತಿ ಶಾಲೆ, ಮತ್ತೊಂದೆಡೆ ಊರಮ್ಮನ ಗುಡಿಯ ನಡುವೆ ಇರುವ ಹಟ್ಟಿ ಮೇಲೆ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರು ಹಾಗೂ ವಸತಿ ಶಾಲೆ ಶಿಕ್ಷಕರು, ಮಕ್ಕಳಲ್ಲಿ ಆತಂಕ ಮೂಡಿಸಿದೆ.

Share This Article

ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ…

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…