More

    ಕನ್ನಡದ ನಿರ್ಮಾಪಕರು ಮೀಟಿಂಗ್​ ಮಾಡಿದ್ದು ಯಾಕೆ?

    ಬೆಂಗಳೂರು: ಕನ್ನಡ ಚಿತ್ರರಂಗದ ಕೆಲವು ಬಿಗ್​ ಬಜೆಟ್​ ಚಿತ್ರಗಳ ನಿರ್ಮಾಪಕರು ಬುಧವಾರ ಸಭೆ ಸೇರಿದ್ದಾರೆ. ಕನ್ನಡ ಚಿತ್ರರಂಗದ ಹಲವು ವಿಷಯಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ. ನಗರದ ಖಾಸಗೀ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಕೆಲವು ಪ್ರಮುಖ ನಿರ್ಮಾಪಕರು ಮಾತ್ರ ಭಾಗಿಯಾಗಿದ್ದಾರೆ.

    ಇಷ್ಟಕ್ಕೂ ನಿರ್ಮಾಪಕರು ಹೀಗೆ ಭೇಟಿಯಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಬಂದರೆ ಆಶ್ಚರ್ಯವಿಲ್ಲ. ಇದಕ್ಕೆ ಕಾರಣವೂ ಇದೆ. ಪ್ರಮುಖವಾಗಿ ತಮಿಳುನಾಡು ಸರ್ಕಾರವು ಅಲ್ಲಿನ ಚಿತ್ರಮಂದಿರಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡವುದಾಗಿ ಘೋಷಿಸಿದೆ. ಇದರ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಶೇ. 100ರಷ್ಟು ಹಾಜರಾತಿಗೆ ಅನುಮತಿ ಪಡೆಯುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಒಂದು ಪಕ್ಷ ಅನುಮತಿ ಸಿಕ್ಕರೆ, ಆಗ ಬಿಗ್​ ಬಜೆಟ್​ ಚಿತ್ರಗಳನ್ನು ಹೇಗೆ ಬಿಡುಗಡೆ ಮಾಡಬೇಕು ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ.

    ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ ವೆಬ್​ಸರಣಿ ಬಿಡುಗಡೆ ದಿನಾಂಕ ಪ್ರಕಟ

    ಪ್ರಮುಖವಾಗಿ, ಬಿಗ್​ ಬಜೆಟ್​ ಚಿತ್ರಗಳ ಬಿಡುಗಡೆಯಲ್ಲಿ ಮೂರು ವಾರಗಳ ಗ್ಯಾಪ್​ ಅನುಸರಿಸಬೇಕು ಎಂದು ಚರ್ಚೆಯಾಗಿದೆಯಂತೆ. ಈಗಾಗಲೇ ಏಪ್ರಿಲ್​ ಒಂದರಂದು, ಪುನೀತ್​ ರಾಜಕುಮಾರ್​ ಅಭಿನಯದ ‘ಯುವರತ್ನ’ ಚಿತ್ರ ಬಿಡುಗಡೆಯಾಗಲಿದೆ. ಅದರ ಹಿಂದೆಯೇ, ಏಪ್ರಿಲ್​-ಮೇ ತಿಂಗಳುಗಳಲ್ಲಿ ‘ರಾಬರ್ಟ್​’, ‘ಕೋಟಿಗೊಬ್ಬ 3’ ಸೇರಿದಂತೆ ಹಲವು ಚಿತ್ರಗಳು ಬಿಡಗುಡೆಯಾಗುತ್ತಿರುವ ಸುದ್ದಿ ಇದೆ. ಹೀಗೆ ಒಟ್ಟೊಟ್ಟಿಗೆ ಬರುವ ಬದಲು ಪ್ರತಿ ಬಿಗ್​ ಬಜೆಟ್​ ಚಿತ್ರಕ್ಕೂ ಮೂರು ವಾರಗಳ ಅಂತರ ಕಾಯ್ದುಕೊಳ್ಳುವ ತೀರ್ಮಾನವಾಗಿದೆಯಂತೆ.

    ‘ತಮಿಳುನಾಡಿನಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಈ ಹಿಂದಿನ ಕೋವಿಡ್‌ 19 ಮಾರ್ಗಸೂಚಿಯಲ್ಲೇ ಸಿನಿಮಾ ಮಂದಿರಗಳ ತೆರೆಯಬೇಕು ಎಂದು ಸೂಚಿಸಿದೆ. ಇದರಿಂದ ತಮಿಳಿನ ‘ಮಾಸ್ಟರ್​’ ಚಿತ್ರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನೋಡಿಕೊಂಡು ಮತ್ತೊಮ್ಮೆ ಸಭೆ ಸೇರುವ ಕುರಿತು ನಿರ್ಮಾಪಕರು ಯೋಚಿಸಿದ್ದೇವೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಯಾವಾಗ ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಗುತ್ತದೋ ಎಂದು ಇನ್ನೂ ಗೊತ್ತಿಲ್ಲ. ಸ್ಪಷ್ಟತೆ ಸಿಕ್ಕ ನಂತರವಷ್ಟೇ ಇನ್ನೊಮ್ಮೆ ಸಭೆ ಸೇರಿ ಚಿತ್ರರಂಗದ ವಿದ್ಯಮಾನಗಳ ಕುರಿತಾಗಿ ಚರ್ಚಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎನ್ನುತ್ತಾರೆ ಈ ಸಭೆಯಲ್ಲಿ ಭಾಗವಹಿಸಿದ್ದ ನಿರ್ಮಾಪಕ ‘ಸೂರಪ್ಪ’ ಬಾಬು.

    ಇದನ್ನೂ ಓದಿ: ‘ವೀರಂ’ನಲ್ಲಿ ಶಿಷ್ಯ ದೀಪಕ್​ಗೆ ಸ್ಪೈಡರ್ ಲುಕ್!

    ಒಂದು ಪಕ್ಷ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಗುವುದು ತಡವಾದರೆ, ಆಗ ಓವರ್​ ದಿ ಟಾಪ್​ಯಲ್ಲಿ (ಓಟಿಟಿ) ಬಿಗ್​ ಬಜೆಟ್​ ಚಿತ್ರಗಳನ್ನು ಬಿಡುಗಡೆ ಮಾಡುವ ಸಾಧಕ-ಬಾಧಕಗಳ ಕುರಿತೂ ಚರ್ಚೆಯಾಗಿದೆ ಎಂದು ಹೇಳಲಾಗಿದೆ.

    ‘ಕೆಜಿಎಫ್ 2’ ಮತ್ತು ‘ಯುವರತ್ನ’ ಚಿತ್ರಗಳ ನಿರ್ಮಾಪಕ ವಿಜಯ್​ಕುಮಾರ್​ ಕಿರಗಂದೂರು ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ , ‘ಪೊಗರು’ ನಿರ್ಮಾಪಕ ಗಂಗಾಧರ್​, ‘ಕೋಟಿಗೊಬ್ಬ 3′ ನಿರ್ಮಾಪಕ ಸೂರಪ್ಪ ಬಾಬು,’ಫ್ಯಾಂಟಮ್​’ ನಿರ್ಮಾಪಕ ಜಾಕ್​ ಮಂಜು, ‘ಮದಗಜ’ ಹಾಗೂ ‘ರಾಬರ್ಟ್’ ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ , ‘ಸಲಗ’ ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಹತ್ತಕ್ಕೂ ಹೆಚ್ಚು ನಿರ್ಮಾಪಕರು ಭಾಗವಹಿಸಿದ್ದರು.

    ಶೇ. 100ರಷ್ಟು ಹಾಜರಾತಿ ರದ್ದು … ‘ಮಾಸ್ಟರ್​’ ಬಿಡುಗಡೆಗೆ ಹಿನ್ನೆಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts