More

    ಶ್ರೀಗಂಧದ ಬೇಸಾಯದಿಂದ ಆರ್ಥಿಕ ಸ್ವಾವಲಂಬನೆ

    ರಾಯಚೂರು: ಭಾರತದಲ್ಲಿ ಬೆಳೆಯುವ ಶ್ರೀಗಂಧ ಮರದ ಪ್ರಬೇಧಕ್ಕೆ ಜಾಗತಿಕ ಮಟ್ಟದಲ್ಲಿ ವಿಶೇಷ ಸ್ಥಾನಮಾನ ಮತ್ತು ಬೇಡಿಕೆಯಿದೆ. ರೈತರು ಶ್ರೀಗಂಧ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದಾಗಿದೆ ಎಂದು ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ಜಿ.ಎಸ್.ಗೌಡಪ್ಪ ತಿಳಿಸಿದರು.

    ಕೃಷಿ ಪದ್ಧತಿ ತರಬೇತಿ

    ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಗಂಧ ಮರ ಆಧಾರಿತ ಅರಣ್ಯ ಕೃಷಿ ಪದ್ಧತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಪ್ರಸ್ತುತ ದಿನಮಾನದಲ್ಲಿ ಹವಮಾನ ವೈಪರೀತ್ಯ ಹಾಗೂ ಮತ್ತಿತರ ಕಾರಣಗಳಿಂದಾಗಿ ರೈತರು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ. ಅರಣ್ಯ ಆಧಾರಿತ ಕೃಷಿಯಾದ ಶ್ರೀಗಂಧ ಬೇಸಾಯ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

    ಇದನ್ನೂ ಓದಿ:ಎಂಸಿಎಫ್ ಆವರಣದಲ್ಲಿ 15 ಶ್ರೀಗಂಧದ ಮರ ಕಳವು

    ಅರಣ್ಯ ಉಪ ಸಂರಕ್ಷಣಾಧಿಕಾರಿ ಎ.ಚಂದ್ರಣ್ಣ ಮಾತನಾಡಿ, ಹಿಂದೆ ಶ್ರೀಗಂಧದ ಬೆಳೆ ರಾಜಸ್ವವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅರಣ್ಯ ಕಾಯ್ದೆ ಪ್ರಕಾರ ಶ್ರೀಗಂಧದ ಮರವನ್ನು ಯಾವುದೇ ತೊಂದರೆಯಿಲ್ಲದೆ ಬೆಳೆದು ಸರ್ಕಾರದ ಅಧೀನದಲ್ಲಿ ಬರುವ ಅಧಿಕೃತ ಸಂಸ್ಥೆಗಳಿಗೆ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

    ಬೆಂಗಳೂರಿನ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾ.ಆರ್.ಸುಂದರರಾಜ್ ಶ್ರೀಗಂಧದ ಸಸ್ಯಾಭಿವೃದ್ಧಿ, ನಿರ್ವಹಣೆ ಕುರಿತು, ಕುಷ್ಟಗಿಯ ಉದ್ದಿಮೆದಾರ ರಮೇಶ ಬಳುವಟಗಿ ಶ್ರೀಗಂಧದ ಬೆಳೆಯ ಪ್ರಾಮುಖ್ಯತೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪ್ರಹ್ಲಾದ, ವಿಜ್ಞಾನಿಗಳಾದ ಡಾ.ಎಸ್.ಎನ್.ಭಟ್, ಡಾ.ಜಿ.ಎನ್.ಶ್ರೀವಾಣಿ, ಡಾ.ಕೆ.ಜೆ.ಹೇಮಲತಾ, ಜಿಲ್ಲೆಯ ರೈತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts