ಎಂಸಿಎಫ್ ಆವರಣದಲ್ಲಿ 15 ಶ್ರೀಗಂಧದ ಮರ ಕಳವು

ಎಂಸಿಎಫ್ ಆವರಣದಲ್ಲಿ 15 ಶ್ರೀಗಂಧದ ಮರ ಕಳವು
Published on

ಹಾಸನ: ಎಂಸಿಎಫ್‌ಗೆ ಸೇರಿದ ಕ್ಯಾಂಪಸ್‌ನಲ್ಲಿದ್ದ 15 ಶ್ರೀಗಂಧದ ಮರಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎಂ.ಸಿ.ಎಫ್‌ಗೆ ಸೇರಿದ ಜಾಗದಲ್ಲಿ ಯಾವುದೇ ಕಾರ್ಯಚಟುವಟಿಕೆ ಮಾಡದೆ ಪಾಳು ಬಿದ್ದಿದ್ದ ಜಾಗದಲ್ಲಿನ ಕಾಂಪೌಂಡ್‌ನ ಕೆಳಭಾಗದಲ್ಲಿ ಮಳೆ ನೀರು ಆಚೆಗೆ ಹೋಗಲು ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ಗಳನ್ನು ಕಳ್ಳರು ಮುರಿದಿದ್ದಾರೆ. ಕಾಂಪೌಂಡ್ ಮೇಲೆ ಅಳವಡಿಸಿದ್ದ ಕಾಯಿಲ್ ಫೆನ್ಸಿಂಗ್ ಕಳಚಿ ಒಳನುಗ್ಗಿ ಆವರಣದಲ್ಲಿ ಬೆಳೆದಿದ್ದ 15 ಶ್ರೀಗಂಧದ ಮರಗಳನ್ನು ಬುಡಸಮೇತ ಕತ್ತರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಎಂಸಿಎಫ್ ಹಿರಿಯ ಆಡಳಿತಾಧಿಕಾರಿ ಕ್ರಿಶನ್ ಗೋಪಾಲ್ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net