More

    ಬಡಿದೆಬ್ಬಿಸಿದವರಿಗೆ ಸಲಾಂ … ನಿರ್ದೇಶಕರ ದಿನದಂದು ದಿಗ್ಗಜರ ನೆನಪು

    ಇಂದು ನಿರ್ದೇಶಕರ ದಿನ. ಈ ದಿನದಂದು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರೆಲ್ಲಾ ತಮ್ಮನ್ನು ಸ್ಫೂರ್ತಿಗೊಳಿಸಿದ, ತಮ್ಮನ್ನು ನಿರ್ದೇಶನದತ್ತ ಆಕರ್ಷಿಸಿದ ಹಲವು ದಿಗ್ಗಜ ನಿರ್ದೇಶಕರನ್ನು ಸೋಷಿಯಲ್ ಮೀಡಿಯಾ ಮೂಲಕ ನೆನಪಿಸಿಕೊಂಡಿದ್ದಾರೆ.
    ಸದ್ಯ ‘ಯುವರತ್ನ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಂತೋಷ್ ಆನಂದರಾಮ್, ತಮ್ಮನ್ನು ಬಡಿದೆಬ್ಬಿಸಿದ್ದ ‘ರಿಯಲ್ ಸ್ಟಾರ್’ ಉಪೇಂದ್ರ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನನ್ನಲ್ಲಿದ್ದ ನಿರ್ದೇಶಕನನ್ನ ಬಡಿದೆಬ್ಬಿಸಿದ ನಿರ್ದೇಶಕರ ನಿರ್ದೇಶಕನಿಗೆ ನಿರ್ದೇಶಕರ ದಿನದ ಶುಭಾಶಯಗಳು. ಉಪ್ಪಿಗಿಂತ ರುಚಿ ಬೇರೆ ಇಲ್ಲ, ಒಪ್ಪಿಕೊಂಡೋರು ದಡ್ಡರಲ್ಲ’ ಎಂದು ನಿರ್ದೇಶಕರ ದಿನಕ್ಕೆ ಶುಭಕೋರಿದ್ದಾರೆ.

    ಇದನ್ನೂ ಓದಿ: 10 ದಿನಗಳಲ್ಲಿ ಸದ್ದಿಲ್ಲದೆ ಶೂಟ್ ಆಯ್ತು ‘ದಿ ಪೈಂಟರ್’

    ನಿರ್ದೇಶಕ ಎ.ಪಿ. ಅರ್ಜುನ್ ಅವರು ತಮ್ಮನ್ನು ಇನ್‌ಸ್ಪೈರ್ ಮಾಡಿದ್ದು ಒಬ್ಬರಲ್ಲ, ನಾಲ್ವರು ಎಂದು ಅವರ ೆಟೋ ಸಮೇತ ಟ್ವೀಟ್ ಮಾಡಿದ್ದಾರೆ. ‘ನನ್ನೊಳಗಿಳಿದ … ನನ್ನೊಳಗುಳಿದ … ಬೆಳ್ಳಿತೆರೆಯ ಧೀಮಂತ ನಿರ್ದೇಶಕರು ಬಿ.ಆರ್. ಪಂತುಲು, ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ ಮತ್ತು ವಿ. ಸೋಮಶೇಖರ್’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಮೇ 11ರಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ?

    ಪವನ್ ಒಡೆಯರ್ ತಮ್ಮನ್ನು ಸ್ಫೂರ್ತಿಗೊಳಿಸಿದ್ದ ಪುಟ್ಟಣ್ಣ ಕಣಗಾಲ್ ಎಂದು ಹೇಳಿದರೆ, ತರುಣ್ ಸುಧೀರ್, ತಮ್ಮ ಆಫೀಸಿನ ಫೋಟೋ ಹಾಕಿಕೊಂಡಿದ್ದಾರೆ. ‘ನನ್ನ ಆಫೀಸಿನ ಬಹಳ ಇಷ್ಟವಾದ ಜಾಗ ಇದು. ನನ್ನನ್ನು ಮನರಂಜಿಸಿದ, ಹೇಳಿಕೊಟ್ಟ ಮತ್ತು ಸ್ಫೂರ್ತಿಗೊಳಿಸಿದ ಎಲ್ಲಾ ನಿರ್ದೇಶಕರಿಗೆ …’ ಎಂಟು ಟ್ವೀಟ್ ಮಾಡಿದ್ದಾರೆ.

    ನಿರ್ದೇಶಕರ ದಿನ ಕಳೆದ ಎರಡು ವರ್ಷಗಳಿಂದ ಆಚರಿಸಲಾಗುತ್ತಿದೆ. ತೆಲುಗಿನ ಜನಪ್ರಿಯ ನಿರ್ದೇಶಕ ದಾಸರಿ ನಾರಾಯಣ ರಾವ್ ಅವರು ಹುಟ್ಟಿದ್ದು ಮೇ ನಾಲ್ಕರಂದು. ಅವರ ಜನುಮದಿನದ ನೆನಪಿಗಾಗಿ ಮೇ 04ರಂದು ನಿರ್ದೇಶಕರ ದಿನ ಎಂದು ಆಚರಿಸುವ ಪರಿಪಾಠ ಶುರುವಾಗಿದೆ.

    ಯಾರೋ ರಾಬಿನ್ ಹುಡ್ ಇಟ್ಟಿರಬೇಕು … ಅಮೀರ್ ಖಾನ್ ಹೀಗೆ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts