ಬೆಂಗಳೂರು: ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಗುರುವಾರ (ಜನವರಿ 07) ಹುಟ್ಟುಹಬ್ಬದ ಸಂಭ್ರಮ. 84ಕ್ಕೆ ಕಾಲಿಟ್ಟಿರುವ ಹಿರಿಯ ನಟಿಗೆ ಚಂದನವನದ ಹಲವು ನಟ-ನಟಿಯರು ಶುಭಕೋರಿದ್ದಾರೆ.
ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ರಜಪೂತ್ರನ್ನು ಹಾಡಿ ಹೊಗಳಿದ ಬಾಂಬೆ ಹೈಕೋರ್ಟ್
ತಮ್ಮ ಹುಟ್ಟುಹಬ್ಬದ ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಯೋಜಿಸುವುದನ್ನು ಸರೋಜಾದೇವಿ ಅವರು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಹುಟ್ಟುಹಬ್ಬದಂದೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸುವುದರ ಜತೆಗೆ, ಪೂಜೆ ಮತ್ತು ಹುಟ್ಟುಹಬ್ಬಕ್ಕ ಚಿತ್ರರಂಗದ ಹಲವು ಗಣ್ಯರನ್ನು ಆಹ್ವಾನಿಸಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್ ಚಾಪ್ಟರ್ 2’ ಟೀಸರ್ ನೋಡಿ ಹೃತಿಕ್ ರೋಷನ್ ಹೇಳಿದ್ದೇನು?
ಜಯಂತಿ, ಪುನೀತ್ ರಾಜಕುಮಾರ್, ಸುಮಲತಾ ಅಂಬರೀಶ್, ಪ್ರತಿಮಾ ದೇವಿ, ವಿಜಯಲಕ್ಷ್ಮೀ ಸಿಂಗ್, ರಾಕ್ಲೈನ್ ವೆಂಕಟೇಶ್, ಪ್ರಿಯಾಂಕಾ ಉಪೇಂದ್ರ, ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಮಂಗಳಾ ರಾಘವೇಂದ್ರ ರಾಜಕುಮಾರ್, ಶಿಲ್ಪಾ ಗಣೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಹಲವರು ಬಿ. ಸರೋಜಾದೇವಿ ಅವರಿಗೆ ಶುಭಕೋರಿದ್ದಾರೆ.
‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆ ದಿನಾಂಕ ಲೀಕ್ ಆಯ್ತಾ?; ಈ ದಿನದಂದು ಬರ್ತಿದ್ದಾನೆ ರಾಕಿಭಾಯ್!