More

    ನಾಳೆಯೇ ನಡೆಯಲಿದೆ ನಟಿ ಮಯೂರಿ ಮದುವೆ: ವರನ್ಯಾರು ಗೊತ್ತಾ?

    ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಮನೆಮಾತಾಗಿ “ಕೃಷ್ಣ ಲೀಲಾ” ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು ಮೊದಲ ಚಿತ್ರದಲ್ಲೇ ಶತಕ ಬಾರಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಮಯೂರಿ ಇದೀಗ ಬಿಗ್​ ಬ್ರೇಕಿಂಗ್​ ನ್ಯೂಸ್​ ಒಂದನ್ನು ನೀಡಿದ್ದಾರೆ.

    ಮಯೂರಿ ಅವರು ನಾಳೆಯೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಲವ್ ಕಂ ಅರೆಂಜ್ ಮ್ಯಾರೇಜ್ ಆಗಲಿರುವ ಮಯೂರಿ ಬಹುಕಾಲದ ಗೆಳೆಯನ ಜತೆ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: VIDEO| ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕರು

    ಹತ್ತು ವರ್ಷದ ಗೆಳೆತನದ‌ ಬಳಿಕ ಅರುಣ್ ಜತೆ ಮದುವೆಗೆ ಮಯೂರಿ ಸಿದ್ಧರಾಗಿದ್ದಾರೆ. ಇಬ್ಬರೂ ಬಾಲ್ಯದ ಗೆಳೆಯರು. ಅರುಣ್​ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಳೆಯೇ ದೇವಸ್ಥಾನದಲ್ಲಿ ಎರಡು ಕುಟುಂಬದ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲಿದೆ. (ದಿಗ್ವಿಜಯ ನ್ಯೂಸ್​)

    ಇನ್ನೊಂದು ಹೊಸ ಚಿತ್ರದೊಂದಿಗೆ ಬಂದ ಅನುಷ್ಕಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts