More

    ನಟಿ ಹರಿಪ್ರಿಯಾ ಮನೆಯಲ್ಲಿ ಕೊಡೋ ತಗೊಳೋ ವಿಚಾರ ಮಾತಾಡ್ತಿದ್ದಾರಂತೆ.. ಲಾಕ್​ಡೌನ್​ ಹೊತ್ತಲ್ಲಿ ಮದುವೆನಾ??

    ಬೆಂಗಳೂರು: ಸದ್ಯ ಲಾಕ್​ಡೌನ್ ಜಾರಿಯಲ್ಲಿದೆ. ಎಲ್ಲರೂ ಸ್ಟೇಹೋಮ್ ಮಂತ್ರ ಪಠಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಸ್ಯಾಂಡಲ್​ವುಡ್​ ನಟಿ ಹರಿಪ್ರಿಯಾ ಮನೆಯಲ್ಲಿ ಕೊಡೋ ತಗೊಳೋ ಮಾತುಕತೆ ನಡೆಯುತ್ತದೆಯಂತೆ! ಅಚ್ಚರಿ ಅನಿಸಿದರೂ ಇದು ಸತ್ಯ. ಆ ಬಗ್ಗೆ ಸ್ವತಃ ಹರಿಪ್ರಿಯಾ ಹೇಳಿಕೊಂಡಿದ್ದಾರೆ.
    ಈಗ ಎಲ್ಲಿ ನೋಡಿದ್ರೂ ಕೊಡೋ ತಗೋಳೋ ಮಾತುಕತೆ. ಇಡೀ ದೇಶಾನೇ ಲಾಕ್‌ಡೌನ್ ಆಗಿದೆ, ಇರೋ ಮದ್ವೆಗಳೇ ಮುಂದಕ್ ಹೋಗಿವೆ, ಈಗ ಯಾರು ಕೊಡೋ ತಗೊಳೋ ವಿಷಯ ಮಾತಾಡ್ತಾರೆ ಅಂದ್ಕೋಬೇಡಿ. ಪರಿಸ್ಥಿತಿ ಹೇಗೇ ಇದ್ರೂ ಈಗ ಆ ಮಾತುಕತೆ ನಡೀತಿರೋದಂತೂ ಪಕ್ಕಾ. ನಮ್ಮನೇಲೇ ಅಂಥ ಮಾತುಕತೆ ನಡ್ದಿದೆ. ಹಹಹ… ಮದ್ವೆ ಅಂದ್ಕೊಂಡ್ರಾ? ಅಲ್ವೇ ಅಲ್ಲ. ಅದ್ಕೆ ಕಾರಣ, ಮತ್ತೆ ಅದೇ ಕೊರೊನಾ!!
    ನೀವು ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಅಂತ ನಾವೆಲ್ ಬಗ್ಗೆ ಕೇಳಿದ್ದೀರಲ್ವ? ಅದೇ ಥರ ಇದು ‘ಎಕ್ಸ್‌ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ’ ಅಂತ ಹೇಳ್ಬೋದು. ಯಾಕ್ ಗೊತ್ತಾ? ಈಗ ಎಲ್ಲ ಬಂದ್ ಆಗಿದೆ. ಎಷ್ಟ್ ದುಡ್ ಕೊಡ್ತೀವಿ ಅಂದ್ರೂ ಕೆಲವಂತೂ ಸಿಗ್ತಾನೇ ಇಲ್ಲ. ಕೆಲವು ಅಂಗಡಿಗಳು ಓಪನ್ ಇದ್ರೂ ಸ್ಟಾಕ್ ಇಲ್ಲ.
    ಹಿಂದಿನ ಕಾಲದಲ್ಲಿ ಬಾರ್ಟರ್ ಸಿಸ್ಟಮ್ ಅಂತ ಇತ್ತಂತಲ್ವಾ, ಆ ಥರ ನಮ್ ಮನೇಲೂ ಕೊಡೋ ತಗೊಳೋ‌ ಮಾತುಕತೆ ಈ ಕ್ವಾರಂಟೈನ್‌ ಟೈಮಲ್ಲಿ ನಡ್ದಿತ್ತು. ನನ್ ಫ್ರೆಂಡ್ ಮನೆ ನಾಯಿಗಳಿಗೆ ಡಾಗ್ ಫುಡ್ ಇರ್ಲಿಲ್ಲ. ಅವರು ನಮ್ ಮನೆ ಅಕ್ವೇರಿಯಮ್ಮಲ್ಲಿರೋ ಮೀನುಗಳಿಗೆ ಫಿಷ್ ಫುಡ್ ಕೊಟ್ಟು ಡಾಗ್ ಫುಡ್ ತಗೊಂಡ್ ಹೋದ್ರು. ಹಾಗೇ ತುಂಬಾ ಕಡೆ ತುಂಬಾ ವಸ್ತು ಎಕ್ಸ್‌ಚೇಂಜ್ ಮಾಡ್ಕೊಂಡಿದ್ ಕೇಳಿದ್ದೆ.
    ಇಷ್ಟೇ ಅಲ್ಲ.. ಇತ್ತೀಚೆಗೆ ನಮ್ಮ ರಿಲೇಟಿವ್ಸ್ ಮನೇಲಿ ತರಕಾರಿ ಖಾಲಿ ಆಗಿತ್ತು. ಅವರು ನಮ್ಮನೆಗೆ ಹಣ್ಣು ತಂದುಕೊಟ್ಟು ತರಕಾರಿ ತಗೊಂಡು ಹೋದ್ರು. ಹೀಗೆ ನಿಮ್ಮಲ್ಲೂ ತುಂಬಾ ಜನರ ಮನೇಲಿ ಆಗಿದೆ ಅಲ್ವಾ? ಈ ಥರ ಎಕ್ಸ್‌ಚೇಂಜ್‌ಗೆ ಹಳ್ಳಿ ಕಡೆ ಸಾಟಿ ವಿನಿಮಯ ಅಂತಾರಂತೆ. ನೋಡಿ.. ನಮ್ಮ ಹಳೇ ಪದ್ಧತಿಗೆ ಈಗ ಸರಿಸಾಟಿ ಯಾವುದೂ ಇಲ್ಲ.
    ಹಣ ಇದ್ರೆ ಸಾಕು, ಏನು ಬೇಕಾದ್ರೂ ತಗೋಬಹುದು ಅನ್ನೋದು ಸುಳ್ಳು. ಹಣಕ್ಕಿಂತ ಆ ದಿನದ ಅಗತ್ಯ ಪೂರೈಸಿಕೊಳ್ಳೋದೇ ಮುಖ್ಯ ಅಂತ ಇದರಿಂದ ಎಲ್ಲರಿಗೂ ಗೊತ್ತಾಗ್ತಿದೆ ಅನ್ನೋದೇ ದೊಡ್ಡ ಖುಷಿ. ಎಂದು ಇತ್ತೀಚೆಗೆ ಆರಂಭಿಸಿರುವ ತಮ್ಮ ಬೇಬ್​ ನೋಸ್​ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts