More

    ಮೀಸಲಾತಿ ಆಧಾರದ ಮೇಲೆ ಮರಳಿನ ಪಾಯಿಂಟ್ ಗುತ್ತಿಗೆ ನೀಡಿ

    ರಾಣೆಬೆನ್ನೂರ: ಜಿಲ್ಲೆಯ ತುಂಗಭದ್ರಾ ನದಿಪಾತ್ರದಲ್ಲಿರುವ ಮರಳಿನ ಪಾಯಿಂಟ್‌ಗಳಿಗೆ ಗುತ್ತಿಗೆ ನೀಡುವಾಗ ಮೀಸಲಾತಿ ಆಧಾರದ ಮೇಲೆ ನೀಡಬೇಕು ಎಂದು ಮಹರ್ಷಿ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ಒತ್ತಾಯಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಮರಳಿನ ಪಾಯಿಂಟ್‌ಗಳಿಗೆ ಈಗಾಗಲೇ ಕಳೆದ ಬಾರಿಯ ಗುತ್ತಿಗೆ ಮುಗಿದಿದೆ. ಆದ್ದರಿಂದ ಜಿಲ್ಲಾಡಳಿತ ಹೊಸದಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಈ ಬಾರಿಯೂ ಮರಳಿನ ಪಾಯಿಂಟ್‌ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಓಬಿಸಿ, ಅಂಗವಿಕಲರಿಗೆ ಮೀಸಲಾತಿ ಒದಗಿಸಬೇಕು.
    ಜತೆಗೆ ರಾಣೆಬೆನ್ನೂರ ಸೇರಿ ಜಿಲ್ಲೆಯ ಜನರಿಗೆ ಗುತ್ತಿಗೆ ನೀಡಬೇಕು. ಇಲ್ಲವಾದರೆ ಹೊರಗಿನವರಿಗೆ ಗುತ್ತಿಗೆ ನೀಡಿದರೆ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮೀಸಲಾತಿ ಆಧಾರದ ಮೇಲೆ ಟೆಂಡರ್ ಕರೆಯಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಪ್ರಮುಖರಾದ ಬಸವರಾಜ ತಳವಾರ ಹಾಗೂ ಹನುಮಂತಪ್ಪ ಕಬ್ಬಾರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts