More

    ಸ್ಯಾಂಡಲ್​ವುಡ್​ಗೆ ಬರೋದಕ್ಕಿಂತ ಮುನ್ನ ವಿಜಯ್​ ಲೆಕ್ಚರರ್​ ಆಗಿದ್ದ ವಿಷಯ ಗೊತ್ತಾ?

    ಬೆಂಗಳೂರು: ಸಂಚಾರಿ ವಿಜಯ್​ ನಟನಾಗಿ ಎಲ್ಲರಿಗೂ ಗೊತ್ತೇ ಇದೆ. ಆದರೆ, ಅವರು ನಟನಾಗಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ, ಅವರು ಕೆಲವು ಕಾಲ ಲೆಕ್ಚರರ್​ ಆಗಿದ್ದ ವಿಷಯ ಗೊತ್ತಿದೆಯಾ? ಅಷ್ಟೇ ಅಲ್ಲ, ಅವರೊಬ್ಬ ಇಂಜಿನಿಯರಿಂಗ್​ ಪದವೀಧರ ಎಂಬ ವಿಷಯ ಗೊತ್ತಾ?

    ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್​, ಅಂಗಾಂಗ ದಾನದಿಂದ 7 ಜನರಿಗೆ ಹೊಸ ಬದುಕು

    ವಿಜಯ್​ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರೂ ನಿಧನರಾದರಂತೆ. ಒಂದು ಕಡೆ ಮಾನಸಿಕ ಆಘಾತವಾದರೆ, ಇನ್ನೊಂದು ಕಡೆ ಆರ್ಥಿಕ ಸಂಕಷ್ಟ. ಆ ಸಮಯದಲ್ಲಿ, ಊರು ಬಿಟ್ಟು ಬೆಂಗಳೂರು ಸೇರಿದ ವಿಜಯ್, ಕೆಲವು ತಿಂಗಳ ನಂತರ ತಿಪಟೂರಿಗೆ ಹೋಗಿ ಅಲ್ಲಿ ಪಿಯುಸಿ ಓದಿದರಂತೆ. ಸಿಇಟಿ ಬರೆದು ಇಂಜಿನಿಯರಿಂಗ್ ಕಲಿಯಲು ಬೆಂಗಳೂರಿನ ಬಿಎಂಎಸ್ ಕಾಲೇಜು ಸೇರಿಕೊಂಡರಂತೆ.

    ಇದನ್ನೂ ಓದಿ: ಬಾಲ್ಯದಲ್ಲೇ ಪರಕಾಯ ಪ್ರವೇಶ ಮಾಡಿದ್ದರಂತೆ ಸಂಚಾರಿ ವಿಜಯ್​!

    ಇಂಜಿನಿಯರಿಂಗ್​ ಮುಗಿದರೂ, ನಾಟಕದ ಸೆಳೆತ. ಆದರೆ, ಜೀವನಕ್ಕೊಂದು ಕೆಲಸ ಇಲ್ಲದಿದ್ದರೆ ಕಷ್ಟ ಉಪವಾಸ ಇರಬೇಕಾದೀತು ಎಂದು ಗೊತ್ತಿಲ್ಲದೇನಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಗೆಳೆಯನೊಬ್ಬ ಐಡಿಯಾ ಕೊಟ್ಟರಂತೆ. ಅದರಂತೆ ಅವರೊಂದು ಕಾಲೇಜಿಗೆ ಲೆಕ್ಚರರ್​ ಆಗಿ ಸೇರಿಕೊಂಡರಂತೆ. ಅಲ್ಲಿ ಪಾಠ ಮಾಡಿದ್ದಕ್ಕಿಂತ ಜಾಸ್ತಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಿದ್ದೇ ಜಾಸ್ತಿ. ಆ ನಂತರ ರಂಗಭೂಮಿಯತ್ತ ವಾಲಿದೆ ಅವರು, ಕ್ರಮೇಣ ಅಧ್ಯಾಪಕ ವೃತ್ತಿಗೆ ರಾಜೀನಾಮೆ ಕೊಟ್ಟ ಅವರು ಖಾಯಮ್ಮಾಗಿ ನಟನೆ ಕಡೆ ವಾಲಿದರಂತೆ.

    ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ವಿಜಯ್​ ಪಾರ್ಥಿವ ಶರೀರ, ಸ್ನೇಹಿತನ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts