More

    ಸಂಚಾರಿ ವಿಜಯ್​ ಅಪಘಾತ ಪ್ರಕರಣ: ಬೈಕ್ ಓಡಿಸುತ್ತಿದ್ದ ನವೀನ್ ವಿರುದ್ಧವೂ ದೂರು ದಾಖಲು

    ಬೆಂಗಳೂರು: ಸಂಚಾರಿ ವಿಜಯ್​ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಓಡಿಸುತ್ತಿದ್ದ ನವೀನ್ ಎಂಬುವರ ಮೇಲೆ ಸಂಚಾರಿ ವಿಜಯ್​ ಸಹೋದರ ಸಿದ್ದೇಶ್​ ಕುಮಾರ್​ ಅವರು ದೂರು ನೀಡಿದ್ದಾರೆ.

    ಸ್ನೇಹಿತ ನವೀನ್ ಜತೆ ಬರುವಾಗ ಬೈಕ್​ ಸ್ಕಿಡ್​ ಆಗಿ ಸಂಭವಿಸಿದ ಅಪಘಾತದಲ್ಲಿ ವಿಜಯ್ ಹಾಗೂ ನವೀನ್​ಗೆ ಗಂಭೀರ ಗಾಯಗಳಾಗಿವೆ. ಬನ್ನೇರುಘಟ್ಟ ರಸ್ತೆ ಬಳಿ ಜೆ.ಪಿ ನಗರದ 7th ಬ್ಲಾಕ್ ನಲ್ಲಿ ನಿನ್ನೆ ರಾತ್ರಿ (ಜೂನ್​ 12) ಅವಘಡ ಸಂಭವಿಸಿದೆ.

    ಬೈಕ್ ಸ್ಕಿಡ್ ಆಗಿ ಬಿದ್ದಿರುವುದಾಗಿ ನವೀನ್ ಹೇಳಿಕೆ ನೀಡಿದ್ದಾರೆ. ಬೈಕ್​ ಓಡಿಸುತ್ತಿದ್ದ ನವೀನ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್​ಗೆ ತೀವ್ರ ಗಾಯಗಳಾಗಿವೆ. ತೊಡೆ ಹಾಗೂ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮುಂಜಾನೆ ಆಸ್ಪತ್ರೆಯಿಂದ ಮೆಮೋ ಬಂದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆಸ್ಪತ್ರೆಗೆ ತೆರಳಿದ ಜಯನಗರ ಸಂಚಾರಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಅಪಘಾತವಾದ ಬೈಕ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಂಚಾರಿ ವಿಜಯ್​ ವಿರುದ್ಧ ಪ್ರಕರಣ ದಾಖಲು
    ಬೆಂಗಳೂರಿನಲ್ಲಿ ಸವಾರ ಮತ್ತು ಹಿಂಬದಿ ಸವಾರ ಇಬ್ಬರಿಗೂ ಹೆಲ್ಮೆಟ್​ ಧರಿಸುವುದು ಕಡ್ಡಾಯ ನಿಯಮವಿದೆ. ಅದರ ನಡುವೆಯೂ ಲಾಕ್​ಡೌನ್​ ಸಹ ಘೋಷಣೆ ಆಗಿದ್ದರಿಂದ ರಾತ್ರಿ ಹೊತ್ತು ಮನೆಯಿಂದ ಹೊರಬರದಂತೆ ಸರ್ಕಾರದ ಘೋಷಣೆ ಸಹ ಮಾಡಿತ್ತು. ಆದರೆ, ಇದ್ಯಾವುದನ್ನು ಗಮನಿಸಿದೆ, ಜೆಪಿ ನಗರದ 7ನೇ ಫೇಸ್ ಬಳಿ ಸ್ನೇಹಿತನ ಜತೆಗೆ ಹಿಂಬದಿಯಲ್ಲಿ ಹೆಲ್ಮೆಟ್​ ಧರಿಸದೇ ಕುಳಿತು ಪ್ರಯಾಣಿಸಿರುವುದರಿಂದ ಪ್ರಕರಣ ದಾಖಲಿಸಲಾಗಿದೆ.

    ಸಂಚಾರ ನಿಯಮವನ್ನೇ ಮರೆತ ‘ಸಂಚಾರಿ ವಿಜಯ್’!; ಕಂಟಕವಾಯ್ತು ಹೆಲ್ಮೆಟ್ ಇಲ್ಲದ ಪ್ರಯಾಣ…

    ಬೈಕ್ ಅಪಘಾತದಲ್ಲಿ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ; ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

    ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್​ ಆಗಲು ಸಂಚು ರೂಪಿಸಿದ್ದ ಟಿಕ್​ಟಾಕ್​ ಸ್ಟಾರ್ ಸಿಕ್ಕಿಬಿದ್ದಿದ್ದೇ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts