More

  ಉದ್ಯಮಿ ನೀರೆಬೈಲೂರು ಗೋವಿಂದ ನಾಯಕ್​ ನಿಧನ

  ಉಡುಪಿ: ಗೀತಾಂಜಲಿ ಉದ್ಯಮ ಸಂಸ್ಥೆಗಳ ಪ್ರವರ್ತಕ ಹಾಗೂ ಆರ್​ ಕೆ ಗ್ರೂಪ್​ ಹಿರಿಯರಾದ ನೀರೆಬೈಲೂರು ಗೋವಿಂದ ನಾಯಕ್​ (89) ಭಾನುವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.

  ಮೃತರು ಐವರು ಪುತ್ರರು ಹಾಗೂ ಪುತ್ರಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳು ಸಹಿತ ಅಪಾರ ಬಂಧುಬಳಗ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಹೆಸರಾಂತ ಜವಳಿ ಮಳಿಗೆ ಗೀತಾಂಜಲಿ ಸಿಲ್ಕ್​ ಮತ್ತು “ಶಾಂತಿಸಾಗರ್​” ಹೊಟೇಲ್​ನ ಸಂಸ್ಥಾಪಕರಾಗಿದ್ದ ಇವರು, ಕೃಷಿಕರಾಗಿ – ಅಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದರು.

  ಸಂಸ್ಥಾಪಕರ ನಿಧನ ಹಿನ್ನೆಲೆಯಲ್ಲಿ ಉಡುಪಿಯ ಗೀತಾಂಜಲಿ ಸಿಲ್ಕ್​, ನ್ಯೂ ಶಾಂತಿ ಸಾಗರ್​ ರೆಸ್ಟೋರೆಂಟ್​, ಶಾಂತಿ ಸಾಗರ್​, ಮಣಿಪಾಲದ ಶ್ರೀಶಾಂತಿ ಸಾಗರ್​ ಹೊಟೇಲ್​ಗಳಿಗೆ ರಜೆ ಸಾರಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts