More

    ಒಂದೇ ಓವರ್‌ನಲ್ಲಿ 3 ನೋಬಾಲ್‌ ಎಸೆದ ಶೋಯೆಬ್​ ಮಲಿಕ್; ಸನಾ ಜಾವೇದ್ ಕಾಲ್ಗುಣದ ಎಫೆಕ್ಟ್​ ಎಂದ ನೆಟ್ಟಿಗರು

    ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ, ಅನುಭವಿ ಆಲ್ರೌಂಡರ್​ ಶೋಯೆಬ್​ ಮಲಿಕ್​ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ಹೊಸ ವಿಚಾರದಲ್ಲಿ ಅವರು ಮ್ಯಾಚ್​ ಫಿಕ್ಸಿಂಗ್​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಲಿಕ್​ರನ್ನು ವ್ಯಾಪಕವಾಗಿ ಟ್ರೋಲ್​ ಮಾಡಲಾಗುತ್ತಿದೆ.

    ಹಾಲಿ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​ನಲ್ಲಿ ಈ ಘಟನೆ ನಡೆದಿದ್ದು, ಫಾರ್ಚೂನ್ ಬಾರಿಶಲ್ ತಂಡದ ಪರ ಆಡುತ್ತಿರುವ ಶೋಯೆಬ್​ ಮಲಿಕ್​ ಒಂದೇ ಓವರ್​ನಲ್ಲಿ ಮೂರು ನೋಬಾಲ್​ ಎಸೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನೆಟ್ಟಿಗರು ಟೀಕಿಸಿದ್ದು, ಸನಾ ಜಾವೇದ್​ ಕಾಲ್ಗುಣ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಡೆತ್​ ಓವರ್​ನಲ್ಲಿ ಮಲಿಕ್​ ಅವರನ್ನು ಕಣಕ್ಕಿಳಿಸಿದ ನಾಯಕ ಮುಶ್ಫಿಕರ್​ ರಹಮಾನ್​ ಲೆಕ್ಕ ತಲೆ ಕೆಳಗಾಗಿದ್ದು, ಒಂದು ಓವರ್​ನಲ್ಲಿ ಮೂರು ನೋಬಾಲ್​ ಒಳಗೊಂಡಂತೆ 18ರನ್​ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತಾದರೂ 6 ಬಾಲ್​ಗಳನ್ನು ಎದುರಿಸಿ 5 ರನ್​ಗಳಿಸಲಷ್ಟೇ ಶೋಯೆಬ್​ ಮಲಿಕ್​ ಶಕ್ತರಾದರು.

    ಇದನ್ನೂ ಓದಿ: ಲ್ಯಾಂಡಿಂಗ್​ ವೇಳೆ ತಾಂತ್ರಿಕ ದೋಷ; ಸೇನಾ ವಿಮಾನ ಪತನ

    20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 187 ರನ್​ಗಳಿಸಿದ ಫಾರ್ಚೂನ್ ಬಾರಿಶಲ್ ತಂಡ ಎದುರಾಳಿ ಖುಲ್ನಾ ಟೈಗರ್ಸ್ ವಿರುದ್ಧ ಸವಾಲಿನ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಯಿತು. ಖುಲ್ನಾ ಟೈಗರ್ಸ್​ ಅನಿಮಲ್ ಹಕ್ ಮತ್ತು ಇವಾನ್​ ಲೂಯಿಸ್​ ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಗುರಿಯನ್ನು 8 ಓವರ್​ಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತ್ತು.

    ಇತ್ತ ಪಂದ್ಯದಲ್ಲಿ ಶೋಯೆಬ್​ ಮಲಿಕ್​ ಪ್ರದರ್ಶನವನ್ನು ಪ್ರಶ್ನಿಸಿರುವ ನೆಟ್ಟಿಗರು ಸನಾ ಜಾವೇದ್​ ಕಾಲ್ಗುಣದ ಪ್ರಭಾವ ತುಂಬಾ ಚೆನ್ನಾಗಿ ಪರಿಣಮಿಸಿದೆ. ಒಂದೇ ಓವರ್​ನಲ್ಲಿ ಬೇಕಂತಲೇ ಮೂರು ನೋಬಾಲ್​ಗಳನ್ನು ಎಸೆದಿರುವುದನ್ನು ನೋಡಿದರೆ ಮ್ಯಾಚ್​ ಫಿಕ್ಸಿಂಗ್​ ಆದಂತೆ ಕಾಣುತ್ತಿದೆ. ಪಾಕಿಸ್ತಾನಿಗಳು ಮ್ಯಾಚ್​ ಫಿಕ್ಸಿಂಗ್​ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಹಲವರು ಕಮೆಂಟ್​ನಲ್ಲಿ ಶೋಯೆಬ್​ ಮಲಿಕ್​ರನ್ನು ದೂಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts