More

    ಥೇಟ್ ಸಾಬೂನಿನ ರೀತಿ ಇದೆ ಈ ಹೊಸ ಗ್ಯಾಜೆಟ್! ಬಾಳಿಕೆಯೇ ಇದರ ವಿಶೇಷತೆ…

    ಬೆಂಗಳೂರು: ಸ್ಯಾಮ್ಸಂಗ್, ತನ್ನ ಹೊಸ ಎಸ್.ಎಸ್.ಡಿ ಅಥವಾ ಹಾರ್ಡ್ ಡಿಸ್ಕ್ಅನ್ನು ಹೊರತಂದಿದೆ. ಸ್ಯಾಮ್ಸಂಗ್ ಸಂಸ್ಥೆ, ತನ್ನ ಹೊಸ ಉತ್ಪನ್ನದ ಚಿತ್ರಗಳನ್ನು ಹಂಚಿಕೊಂಡ ಕೂಡಲೇ, ಆನ್ ಲೈನ್ ನಲ್ಲಿ ಅನೇಕ ಜನರು ಇದು ಡಿಟರ್ಜೆಂಟ್ ಸೋಪ್ ನಂತೆ ಕಾಣುತ್ತದೆ ಎಂದು ಹೇಳಿದ್ದಾರೆ.

    ಸ್ಯಾಮ್ಸಂಗ್ ಬಿಡುಗಡೆ ಮಾಡಿರುವ ಹೊಸ ಪೋರ್ಟಬಲ್ ಸಾಲಿಡ್-ಸ್ಟೇಟ್ ಡ್ರೈವ್ (ಎಸ್.ಎಸ್.ಡಿ) ಟಿ 7 ಶೀಲ್ಡ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಶುಕ್ರವಾರ, ಸ್ಯಾಮ್ಸಂಗ್ ಇಂಡಿಯಾ, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉತ್ಪನ್ನದ ಚಿತ್ರವನ್ನು ಪೋಸ್ಟ್ ಮಾಡಿದೆ. ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ ನೆಟ್ಟಿಗರು ಹಾರ್ಡ್ ಡಿಸಕ್ಅನ್ನು ಡಿಟರ್ಜೆಂಟ್ ಸಾಬೂನಿಗೆ ಹೋಲಿಸಿದ್ದಾರೆ.

    ಸ್ಯಾಮ್ಸಂಗ್ ಹಂಚಿಕೊಂಡ ಪೋಸ್ಟಿನಲ್ಲಿ ” ದೀರ್ಘಕಾಲದ ತನಕ ಬಾಳಿಕೆ ಬರುವ ಹಾರ್ಡ್ ಡಿಸ್ಕ್ ನಿಮ್ಮ ಸೇವೆಯಲ್ಲಿ. ಅತ್ಯಂತ ಸವಾಲಿನ ಪರಿಸರ ಪರಿಸ್ಥಿತಿಗಳಲ್ಲಿಯೂ ಸಹ, ನಿಮ್ಮ ಎಲ್ಲಾ ಫೈಲ್ ಗಳನ್ನು ರಕ್ಷಿಸಲು T7 ಶೀಲ್ಡ್ PSSD ಬಳಸಿ. T&C ಅನ್ವಯಿಸುತ್ತದೆ.” ಎಂದು ಬರೆಯಲಾಗಿದೆ.

    ಈ ಪೋಸ್ಟ್ ಅನ್ನು 19,000 ಜನರು ಲೈಕ್ ಮಾಡಿದ್ದರೆ ಕಾಮೆಂಟ್ ವಿಭಾಗದಲ್ಲಿ ಜನರು ಈ ಗ್ಯಾಜೆಟ್ ಅನ್ನು ಡಿಟರ್ಜೆಂಟ್ ಸಾಬೂನಿಗೆ ಹೋಲಿಸಿದ್ದಾರೆ.

    ಇನ್ಸ್ಟಾಗ್ರಾಮ್ ಕಾಮೆಂಟ್ ವಿಭಾಗದಲ್ಲಿ ಒಬ್ಬ ವ್ಯಕ್ತಿ, “ಸ್ಯಾಮ್ಸಂಗ್ ಡಿಟರ್ಜೆಂಟ್ ಸೋಪ್ ಅನ್ನು ಏಕೆ ತಯಾರಿಸುತ್ತದೆ ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬರು “ಸ್ಯಾಮ್ಸಂಗ್ ಈಗ ಡಿಟರ್ಜೆಂಟ್ ಬಾರ್ ತಯಾರಿಸುತ್ತಿದೆ ಎಂದು ನಾನು ಒಂದು ಕ್ಷಣ ಭಾವಿಸಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

    ಕಠಿಣ ಪರಿಸರ ಪರಿಸ್ಥಿತಿಗಳಲ್ಲಿ ಸಾಧನವು ಬಾಳಿಕೆ ಬರುವ ೀ ಹಾರ್ಡ್ ಡಿಸಕ್ ಸಾಕಷ್ಟು ಸಂಗ್ರಹಣಾ ಸಾಮರ್ಥ್ಯವನ್ನೂ ಹೊಂದಿದೆ ಎಂದು ಸ್ಯಾಮ್ಸಂಗ್ ಹೇಳಿದೆ. ಇದು 1 ಟಿಬಿ ಮತ್ತು 2 ಟಿಬಿ ಎರಡರಲ್ಲೂ ಬರುತ್ತಿದ್ದು ಸ್ಯಾಮ್ಸಂಗ್ ವೆಬ್ಸೈಟ್ ಪ್ರಕಾರ, 2 ಟಿಬಿ ಹಾರ್ಡ್ ಡಿಸ್ಕಿನ ಬೆಲೆ ₹ ಬರೋಬ್ಬರಿ 34,999 ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts