More

    ಪಿತೃಪಕ್ಷದಲ್ಲಿ ಅವಿಧ ನವಮಿ; ಏನಿದರ ವಿಶೇಷ?

    ಹಿಂದೂ ಪಂಚಾಂಗದ ಪ್ರಕಾರ ಪ್ರತಿ ತಿಂಗಳಲ್ಲಿಯೂ ಎರಡು ಪಕ್ಷಗಳಿವೆ. ಒಂದು, ಶುಕ್ಲ ಪಕ್ಷ. ಇನ್ನೊಂದು, ಕೃಷ್ಣ ಪಕ್ಷ. ಅಮಾವಾಸ್ಯೆಯ ನಂತರ ಬರುವುದಕ್ಕೆ ಶುಕ್ಲಪಕ್ಷ ಎನ್ನುತ್ತಾರೆ. ಹುಣ್ಣಿಮೆಯ ನಂತರ ಬರುವುದಕ್ಕೆ ಕೃಷ್ಣಪಕ್ಷ ಎನ್ನುತ್ತಾರೆ. ಈಗ ಪಿತೃಪಕ್ಷ ನಡೆಯುತ್ತಿದೆ. ಇದರ ನಡುವೆಯೇ ಅವಿಧ ನವಮಿ ಬಂದಿದೆ. ಅದರ ವಿಶೇಷವೇನು? ಪಿತೃಪಕ್ಷದಲ್ಲಿ ಏನನ್ನು ಮಾಡಬೇಕು, ಯಾರು ಮಾಡಬೇಕು ಮುಂತಾದ ವಿವರಗಳು ಇಲ್ಲಿವೆ.

    |ಮಂಡಗದ್ದೆ ಪ್ರಕಾಶಬಾಬು

    ಮಹಾಭಾರತದಲ್ಲಿ ಬರುವ ದಾನಶೂರ ಕರ್ಣ ಯಾರಿಗೆ ತಾನೆ ತಿಳಿದಿಲ್ಲ? ಅವನು ಮನಸ್ಸಿಗೆ ಬಂದ ತಕ್ಷಣವೇ ತನ್ನಲ್ಲಿರುವ ವಜ್ರ, ವೈಢೂರ್ಯ, ಚಿನ್ನ, ಬೆಳ್ಳಿಯ ಆಭರಣಗಳನ್ನು ದಾನ ಮಾಡುತ್ತಿದ್ದ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುತ್ತಾರೆ. ಇದಕ್ಕೆಲ್ಲ ಕಾರಣ & ಮನಸ್ಸು ಬದಲಾಗಿ ದಾನ ಮಾಡುವ ಕಾರ್ಯ ನಿಲ್ಲಬಹುದು ಎಂಬ ಆತಂಕ. ದಾನಶೂರ ಕರ್ಣ ತೀರಿಕೊಂಡ ಬಳಿಕ ಅವನ ಆತ್ಮವು ಸ್ವರ್ಗವನ್ನು ಸೇರಿತು. ಅನಂತರ ಅವನಿಗೆ ಅಲ್ಲಿ ಊಟ (ಅನ್ನ) ಕೊಡಲಿಲ್ಲ. ಅದರ ಬದಲಾಗಿ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯ, ರತ್ನಗಳನ್ನು ತಟ್ಟೆಯಲ್ಲಿ ಇಟ್ಟು ಕೊಟ್ಟರಂತೆ. ಅವನು “ಹೀಗೇಕೆ?’ ಎಂದು ಕೇಳಿದಾಗ “ನೀನು ಪ್ರತಿದಿನ ಪ್ರತಿಕ್ಷಣವೂ ಜೀವನಪೂತಿರ್ ಅನ್ನದಾನ ಮಾಡಲಿಲ್ಲ. ಅದಕ್ಕೇ ಹೀಗೆ’ ಎಂದು ಉತ್ತರಿಸಿದರಂತೆ. “ಕರ್ಣ, ನೀನು ಮತ್ತೆ ಭೂಲೋಕಕ್ಕೆ ಹೋಗಿ ಅನ್ನದಾನ ಮಾಡಿ ಬಾ’ ಎಂದರಂತೆ. ನಂತರ ಕರ್ಣ ಭೂಲೋಕಕ್ಕೆ ಬಂದು 15 ದಿನಗಳ ಕಾಲ ಅನ್ನದಾನ (ಪಿತೃಗಳಿಗೆ) ಮಾಡಿ ಮತ್ತೆ ಸ್ವರ್ಗಕ್ಕೆ ಹೋದ ನಂತರ ಅವನಿಗೆ ಸ್ವರ್ಗಪ್ರಾಪ್ತಿ ಆಯಿತು ಎಂದು ಹೇಳುತ್ತಾರೆ. ಕರ್ಣ ಭೂಲೋಕಕ್ಕೆ ಬಂದ ಆ 15 ದಿನ ಪಿತೃಪಕ್ಷದ ಸಮಯವಾಗಿತ್ತು ಎನ್ನುತ್ತದೆ ಪುರಾಣ. ಈ ಕಾರಣಕ್ಕೆ ಅನ್ನದಾನಕ್ಕಿಂತ ಮಿಗಿಲಾದ ದಾನ ಯಾವುದೂ ಇಲ್ಲ ಎನ್ನುತ್ತಾರೆ. ಅದರಲ್ಲೂ ಈ ಪಿತೃಪಕ್ಷದಲ್ಲಿ ಬಡವ&ಶ್ರೀಮಂತ ಎನ್ನದೇ ಎಲ್ಲರಿಗೂ ಯಾವುದಾದರೂ ರೂಪದಲ್ಲಿ ಅನ್ನದಾನ ಮಾಡಬೇಕು.

    ಪಿತೃಪಕ್ಷದ ಯಾವ ದಿನ ಯಾರಿಗೆ ಶ್ರೇಷ್ಠ?
    ಭಾದ್ರಪದ ಮಾಸದ ಹುಣ್ಣಿಮೆ ದಿನದಂದೇ ಪಿತೃಪಕ್ಷ ಆರಂಭ. ಅಂದು ಪೂಣಿರ್ಮಾ ಶ್ರಾದ್ಧ. ಇದು ಆದ ನಂತರವೇ ಶ್ರಾದ್ಧ ಆರಂಭ. ಪಾಡ್ಯದ ದಿನ ತಂದೆಗೆ ಶ್ರಾದ್ಧ. ಬಿದಿಗೆ ದಿನ ತಾಯಿಗೆ ಶ್ರಾದ್ಧ. ತದಿಗೆ ದಿನ, ಚೌತಿ ದಿನ ಹೋದ ವರ್ಷ ಸ್ವರ್ಗಸ್ಥರಾದವರಿಗೆ ಶ್ರಾದ್ಧ, ಪಂಚಮಿ ದಿನ ಸಹೋದರನಿಗೆ ಶ್ರಾದ್ಧ, ಷಷ್ಟಿ ದಿನ ಮದುವೆಯಾಗದೆ ಇದ್ದು ತೀರಿಕೊಂಡವರಿಗೆ ಶ್ರಾದ್ಧ, ಸಪ್ತಮಿ ದಿನ ತಂದೆ ಕಡೆ ಶ್ರಾದ್ಧ, ಅಷ್ಟಮಿ ದಿನ ಅಪಘಾತದಲ್ಲಿ ತೀರಿಹೋದವರಿಗೆ ಶ್ರಾದ್ಧ, ನವಮಿ ದಿನವನ್ನು “ಅವಿಧ ನವಮಿ’ ಎನ್ನುತ್ತಾರೆ. ಆ ದಿನ ಮುತೆದೆಯರಿಗೆ ಶ್ರಾದ್ಧ, ದಶಮಿ ದಿನ ಸ್ನೇಹಿತರಿಗೆ ಶ್ರಾದ್ಧ. ಏಕಾದಶಿ ದಿನ ಅಪಮೃತ್ಯು ಆದವರಿಗೆ ಶ್ರಾದ್ಧ, ದ್ವಾದಶಿ ದಿನ ಬಾಲ್ಯದಲ್ಲಿ ಮೃತಪಟ್ಟವರಿಗೆ ಶ್ರಾದ್ಧ, ತ್ರಯೋದಶಿ ಹಾಗೂ ಚತುರ್ದಶಿ ದಿನ ಸಾಕಿದ ಪ್ರಾಣಿ ಪಕ್ಷಿಗಳಿಗೆ ಶ್ರಾದ್ಧ, ಅಮಾವಾಸ್ಯೆ ದಿನ ಸರ್ವಪಿತೃಗಳಿಗೆ ಶ್ರಾದ್ಧ.

    ಸೀತಾದೇವಿಯಿಂದ ಪಿಂಡಪ್ರದಾನ
    ವನವಾಸದಲ್ಲಿದ್ದಾಗ ಶ್ರೀರಾಮ, ಸೀತೆ ಹಾಗೂ ಲಕ್ಷ$್ಮಣರು “ಗಯ’ ಕ್ಷೇತ್ರಕ್ಕೆ ಹೋದಾಗ ಆ ಸಮಯದಲ್ಲಿ ಶ್ರೀರಾಮ ಮತ್ತು ಲಕ್ಷ$್ಮಣರು ಪಿಂಡದಾನ ವಸ್ತುವನ್ನು ಸಂಗ್ರಹಿಸಲು ಹೋದಾಗ ಸೀತೆಗೆ ದಶರಥ ಪ್ರತ್ಯಕ್ಷನಾಗಿ ನೀನೇ ಪಿಂಡದಾನ ಮಾಡು ಎಂದನಂತೆ. ಆಗ ಸೀತೆ ತಕ್ಷಣ ಮರಳಿನಲ್ಲಿ ಪಿಂಡ ತಯಾರಿಸಿ ಫಲ್ಗುಣಿ ನದಿ ಪಕ್ಕದಲ್ಲಿರುವ ಅಶ್ವತ್ಥ ಮರದ ಕೆಳಗೆ ದಶರಥನಿಗೆ ಪಿಂಡ ಮತ್ತು ತರ್ಪಣ ಅಪಿರ್ಸಿದಳಂತೆ. ಶ್ರಾದ್ಧದಲ್ಲಿ ಶ್ರದ್ಧೆ ಮುಖ್ಯವೇ ಹೊರತು ತೋರಿಕೆ ಅಲ್ಲ. ದೇವತಾ ಕಾರ್ಯ ಬಿಟ್ಟರೂ ಇನ್ನೊಂದು ದಿನ ಮಾಡಬಹುದು. ಪಿತೃಕಾರ್ಯವನ್ನು ಇನ್ನೊಂದು ದಿನ ಮಾಡಲು ಬರುವುದಿಲ್ಲ ಎಂದು ಶಾಸದಲ್ಲಿದೆ. ಶ್ರೀ ಶಂಕರಾಚಾರ್ಯರು ಅವರ ತಾಯಿಗೆ ಮಾತು ಕೊಟ್ಟಂತೆ ಅವರ ಅಂತ್ಯಕಾಲದಲ್ಲಿ ಬಂದು ಅವರ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.

    ಮಹಿಳೆಯರು ಶ್ರಾದ್ಧ ಮಾಡಬಹುದೇ?
    ಈ ಬಗ್ಗೆ ಗರುಡ ಪುರಾಣ ಮತ್ತು ಇತರ ಪುರಾಣಗಳು ಏನು ಹೇಳುತ್ತವೆ? ಮಾರ್ಕಂಡೇಯ ಪುರಾಣ, ಗರುಡ ಪುರಾಣ ಹಾಗೂ ಧರ್ಮಸಿಂದುವಿನ ಗ್ರಂಥದಲ್ಲಿ ಮಹಿಳೆಯರು ಸಹ ಪಿಂಡದಾನ ಹಾಗೂ ತರ್ಪಣ ಮಾಡುವ ಬಗ್ಗೆ ತಿಳಿಸಿದೆ. ಮಹಿಳೆ ಅವರ ಪತಿಗೆ, ತಂದೆಗೆ ಹಾಗೂ ಪೂರ್ವಜರಿಗೆ ಪಿಂಡದಾನ ಮಾಡುವ ಅಧಿಕಾರ ಇದೆ ಎನ್ನುವುದು. ಗಂಡು ಮಗ ಇಲ್ಲದೆ ಇದ್ದವರ ಶ್ರಾದ್ಧವನ್ನು ಪತ್ನಿ ಮಂತ್ರ ರಹಿತವಾಗಿ ಮಾಡಬಹುದು
    ಎಂದು ಮಾರ್ಕಂಡೇಯ ಪುರಾಣದಲ್ಲಿದೆ.

    ಮೃತ ವ್ಯಕ್ತಿಗೆ ಪುತ್ರ ಇಲ್ಲದೆ ಇದ್ದರೆ ಪತ್ನಿ ಮಾಡಬಹುದು ಎಂದು ಗರುಡ ಪುರಾಣದಲ್ಲಿದೆ. ಮಹಿಳೆಯರು ಅಶೌಚ ದಿನಗಳಲ್ಲಿ ಮಾಡಲು ಅವಕಾಶ ಇಲ್ಲ ಎಂದು ಶಾಸ್ತ್ರ ತಿಳಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts