More

    ಕರ್ಣನಿಗೆ ಸ್ವರ್ಗದಲ್ಲಿ ತಿನ್ನಲು ವಜ್ರವೈಢೂರ್ಯ ಕೊಟ್ಟರಂತೆ! ಯಾಕೆ?

    ಪಿತೃಪಕ್ಷದಲ್ಲಿ ಅನ್ನದಾನ ಯಾಕೆ ಮಾಡಬೇಕು ಎಂಬುದಕ್ಕೆ ಪೂರಕವಾಗಿ ಮಹಾಭಾರತದಲ್ಲಿ ಆಸಕ್ತಿಕರ ಕಥೆಯೊಂದು ಇದೆ. ದಾನಶೂರ ಕರ್ಣ ಯಾರಿಗೆ ತಿಳಿದಿಲ್ಲ? ಅವನು ಮನಸ್ಸಿಗೆ ಬಂದ ತಕ್ಷಣವೇ ತನ್ನಲ್ಲಿರುವ ವಜ್ರ, ಬಂಗಾರ, ಬೆಳ್ಳಿ, ವೈಢೂರ್ಯಗಳನ್ನು ದಾನ ಮಾಡುತ್ತಿದ್ದ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುತ್ತಾರೆ. ಆ ಕೆಲವೇ ಕ್ಷಣಗಳಲ್ಲಿ ಮನಸ್ಸು ಬದಲಾಗಿ ದಾನ ಕೊಡುವ ಕಾರ್ಯ ನಿಲ್ಲಬಹುದು ಎಂಬುದು ಅದಕ್ಕೆ ಕಾರಣ.

    ಕರ್ಣ ತೀರಿಕೊಂಡ ಬಳಿಕ ಅವನ ಆತ್ಮವು ಸ್ವರ್ಗವನ್ನು ಸೇರಿತು. ಆನಂತರ ಅವನಿಗೆ ಅಲ್ಲಿ ಊಟ (ಅನ್ನ) ಕೊಡಲಿಲ್ಲ. ಅದರ ಬದಲಾಗಿ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯ, ರತ್ನಗಳನ್ನು ತಟ್ಟೆಯಲ್ಲಿಟ್ಟು ಕೊಟ್ಟರಂತೆ. ಅವನು ‘‘ಈ ರೀತಿ ಏಕೆ?’’ ಎಂದು ಕೇಳಿದಾಗ, ‘‘ನೀನು ಪ್ರತಿದಿನ ಪ್ರತಿಕ್ಷಣವೂ ಜೀವನಪೂರ್ತಿ ಅನ್ನದಾನ ಮಾಡಲಿಲ್ಲ. ಅದಕ್ಕಾಗಿ ಹೀಗೆ’’ ಎಂದರು. ‘‘ಕರ್ಣ, ನೀನು ಮತ್ತೆ ಭೂಲೋಕಕ್ಕೆ ಹೋಗಿ ಅನ್ನದಾನ ಮಾಡಿ ಬಾ’’ ಎಂದರು.

    ನಂತರ ಕರ್ಣನು ಭೂಲೋಕಕ್ಕೆ ಬಂದು 15 ದಿನಗಳ ಕಾಲ ಅನ್ನದಾನ (ಪಿತೃಗಳಿಗೆ) ಮಾಡಿ ಮತ್ತೆ ಸ್ವರ್ಗಕ್ಕೆ ಹೋದ. ನಂತರ ಅವನಿಗೆ ಸ್ವರ್ಗಪ್ರಾಪ್ತಿ ಆಯಿತು ಎನ್ನುತ್ತಾರೆ. ಕರ್ಣ ಭೂಲೋಕಕ್ಕೆ ಬಂದ ಆ 15 ದಿನ ಪಿತೃಪಕ್ಷದ ಸಮಯವಾಗಿತ್ತು ಎನ್ನುತ್ತದೆ ಪುರಾಣ. ಈ ಕಾರಣಕ್ಕೆ ಅನ್ನದಾನ ಹಾಗೂ ವಿದ್ಯಾದಾನಕ್ಕಿಂತ ಮಿಗಿಲಾದ ದಾನ ಯಾವುದೂ ಇಲ್ಲ ಎನ್ನುತ್ತಾರೆ. ಅದರಲ್ಲೂ ಈ ಪಿತೃಪಕ್ಷದಲ್ಲಿ ಬಡವ-ಶ್ರೀಮಂತ ಎನ್ನದೇ ಎಲ್ಲರಿಗೂ ಯಾವುದಾದರೂ ರೂಪದಲ್ಲಿ ಅನ್ನದಾನ ಮಾಡಬೇಕು ಎನ್ನುತ್ತವೆ ಪುರಾಣಗಳು.

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts