More

    ಸಂಸ್ಕಾರ ಕಲಿತ ವ್ಯಕ್ತಿ ಭ್ರಷ್ಟನಾಗಲಾರ: ಅಳವಂಡಿ ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರ ಆಶೀರ್ವಚನ

    ಅಳವಂಡಿ: ಮನುಷ್ಯ ಶಿಸ್ತು, ಕಾಯಕ ನಿಷ್ಠೆ, ನಂಬಿಕೆ ಮೈಗೂಡಿಸಿಕೊಂಡರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ಎಳ್ಳು ಅಮಾವಾಸ್ಯೆ ನಿಮಿತ್ತ ಗ್ರಾಮದ ಶ್ರೀ ಸಿದ್ಧೇಶ್ವರ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕಾರ ಕಲಿತ ವ್ಯಕ್ತಿ ಎಂದೂ ಭ್ರಷ್ಟನಾಗಲಾರನು. ಅದಕ್ಕೆ ಅಂತಹ ಅಗಾಧ ಶಕ್ತಿ ಇದ್ದು, ಪಾಲಕರು ಮಕ್ಕಳಿಗೆ ಶಿಸ್ತು, ಸಂಸ್ಕಾರ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಬೇಕು. ಸುಂದರ ಜೀವನ ನಡೆಸಲು ವಿದ್ಯೆ ಅತಿ ಅವಶ್ಯವಾಗಿದ್ದು, ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು. ಗೊಂಡಬಾಳದ ಬಸನಗೌಡ ಮರೇಗೌಡ್ರ ಮಾತನಾಡಿದರು.

    ಪ್ರಮುಖರಾದ ರವಿಸ್ವಾಮಿ ಇನಾಮದಾರ್, ಶಿವಕುಮಾರ ಕುಬ್ಸದ್, ಚಿಕ್ಕವೀರಪ್ಪ ಕವಡಿಮಟ್ಟಿ, ಈಶಪ್ಪ ಜೋಳದ, ರಮೇಶ ಬಾವಿಹಳ್ಳಿ, ಸಿದ್ದಣ್ಣ ಕೋರಿಶೆಟ್ಟರ್, ಭೀಮರಡ್ಡಿ ಗದ್ದಿಕೇರಿ, ಅಶೋಕ ಬಂಡಿ, ಜಗನ್ನಾಥ ದಾಸರಡ್ಡಿ, ಮೌನೇಶ ಬಾವಿಹಳ್ಳಿ, ಬಸಣ್ಣ ತುಬಾಕಿ, ಬಸಯ್ಯ ಶರಭಯ್ಯನಮಠ, ಹನುಮಂತಪ್ಪ ಕರಡಿ, ಮಲ್ಲಪ್ಪ, ಚಂದ್ರ ಮೆಳ್ಳಿ, ಶರಣಪ್ಪ ಗದ್ದಿಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts