More

    ಸಂಸಾರದಲ್ಲಿ ಸಹನೆ-ಸಮಾಧಾನ ಅಗತ್ಯ

    ಅರಕೇರಾ: ಸತಿ-ಪತಿಗಳು ಪ್ರೀತಿ ಹಾಗೂ ಅನ್ಯೋನ್ಯದಿಂದ ದಾಂಪತ್ಯ ಜೀವನ ಸಾಗಿಸಿದಾಗ ಅದು ಶಿವನಿಗೆ ಪ್ರಿಯವಾಗಲಿದೆ ಎಂದು ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ನಕ್ಕು ನಗಿಸಿದ ‘ಸೂಪರ್‌ ಸಂಸಾರ’

    ಗೆಜ್ಜೆಬಾವಿ ಗ್ರಾಮದ ಪಶ್ಚಕಂಥಿ ಹಿರೇಮಠ ಸಂಸ್ಥಾನದಲ್ಲಿ ಲಿಂ.ಚನ್ನಬಸವ ಶಿವಾಚಾರ್ಯ ಮತ್ತು ಲಿಂ.ಕರಿಬಸವ ಶಿವಾಚಾರ್ಯರ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಂಸಾರದಲ್ಲಿ ಸಹನೆ, ಸಮಾಧಾನ, ತಾಳ್ಮೆ ಹೊಂದಿರಬೇಕು. ದಾಂಪತ್ಯ ಜೀವನದಲ್ಲಿ ಹಮ್ಮು-ಬಿಮ್ಮಿಗೆ ಅವಕಾಶ ನೀಡಬಾರದು. ಆಭರಣ, ಆಸ್ತಿ, ಅಂತಸ್ತು, ಹಣವನ್ನು ಒತ್ತಡದಿಂದ ಪಡೆಯಲು ಬರುವುದಿಲ್ಲ. ಆಸೆಗಳ ಈಡೇರಿಸಿಕೊಳ್ಳಲು ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.

    ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ರಾಜಶೇಖರ ನಾಯಕ ಮಾತನಾಡಿ, ಮಠ-ಮಾನ್ಯಗಳಿಂದ ಸಂಸ್ಕಾರವಂತ ಸಮಾಜ ನಿರ್ಮಾಣವಾಗಲು ಸಾಧ್ಯ. ನವ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts