More

    ಮುರುಘಾಮಠದ ದಾಸೋಹ ನಾಡಿಗೆ ಮಾದರಿ

    ಧಾರವಾಡ: ಮುರುಘಾಮಠದ ಪರಂಪರೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪರವಾಗಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಹಿಂದಿನ ಶ್ರೀಗಳು ದೂರದೃಷ್ಟಿಯೊಂದಿಗೆ ವಿದ್ಯಾರ್ಥಿಗಳ ಜೀವನವನ್ನು ಉಜ್ವಲಗೊಳಿಸಲು ಶ್ರಮಿಸಿದರು. ಮಠದ ತ್ರಿವಿಧ ದಾಸೋಹ ನಾಡಿಗೆ ಮಾದರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದ ಮುರುಘಾಮಠ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಸಮಾಜೋದ್ಧಾರ ಕೆಲಸ ಮಾಡುವುದರ ಜತೆಗೆ ಮಕ್ಕಳಲ್ಲಿ ಶಿಕ್ಷಣ ಹಾಗೂ ಸಂಸ್ಕಾರದ ಬೀಜ ಬಿತ್ತಿದ ಶ್ರೀ ಮೃತ್ಯುಂಜಯ ಅಪ್ಪಗಳು, ಮುರುಘೇಂದ್ರ ಮಹಾಶಿವಯೋಗಿಗಳ ಸನ್ಮಾರ್ಗದಲ್ಲಿ ನಾವೆಲ್ಲ ಸಾಗಿದಾಗ ಜೀವನ ಪಾವನವಾಗುತ್ತದೆ. ಶ್ರೀಮಠವು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಜ್ಞಾನದಾನದೊಂದಿಗೆ ಐತಿಹಾಸಿಕತೆ ಹೊಂದಿದೆ ಎಂದರು.

    ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಹಾಗೂ ಚಿತ್ತರಗಿ- ಇಳಕಲ್ ಶ್ರೀ ವಿಜಯಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಳಗಾನೂರ ಚಿಕ್ಕೇನಕೊಪ್ಪ ಚನ್ನವೀರ ಶರಣರಮಠದ ಶ್ರೀ ಶಾಂತವೀರ ಶರಣರು ಸಮ್ಮುಖ ವಹಿಸಿದ್ದರು.

    ಸಾಹಿತಿ ಡಾ. ವೀರಣ್ಣ ರಾಜೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಈರೇಶ ಅಂಚಟಗೇರಿ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಶಿವಶಂಕರ ಹಂಪಣ್ಣವರ, ಇತರರಿದ್ದರು.

    ಡಾ. ಮೃತ್ಯುಂಜಯ ಅಗಡಿ ತಂಡ ವಚನ ಗಾಯನ ಪ್ರಸ್ತುತಪಡಿಸಿತು. ಮಲ್ಲಪ್ಪ ಕಣಗಿನಹಾಳ ದಾಸೋಹ ಸೇವೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts